ಮಧ್ಯ ಪ್ರಿಯರಿಗೆ ಸರ್ಕಾರ ಸಿಹಿಸುದ್ದಿಯನ್ನ ನೀಡಿದೆ. ಯಾವಾಗಲೂ ಚಳಿಗಾಲದಲ್ಲಿ ಕಡಿಮೆ ಮಾರಾಟವಾಗುತ್ತಿದ್ದ ಬಿಯರ್ ಬೆಲೆಯನ್ನ ಈ ಬಾರಿ ಯಥಾಸ್ಥಿತಿಯಲ್ಲಿಡಲು ಸರ್ಕಾರ ನಿರ್ಧರಿಸಿದೆ. ಚಳಿಗಾಲವೊಂದನ್ನ ಹೊರತುಪಡಿಸಿ ಎಲ್ಲಾ ಕಾಲದಲ್ಲೂ ಸಾಧರವಾಗಿ ಬಿಯರ್ ಹೆಚ್ಚಾಗೆ ಮಾರಾಟವಾಗುತ್ತದೆ. ಆದ್ರೆ ಚಳಿಗಾಲದ ತಿಂಗಳ ಆರಂಭದಲ್ಲೇ ಅಬಕಾರಿ ಇಲಾಖೆಯ ಜೇಬಿಗೆ ಕತ್ತರಿ ಬೀಳುವುದಂತು ನಿಜ. ಹೀಗಾಗಿ ಸರ್ಕಾರ ಬೆಲೆಯನ್ನ ಏರಿಕೆ ಮಾಡದೆ ಯಥಾಸ್ಥಿತಿಯಲ್ಲಿ ಇಡಲು ಮುಂದಾಗಿದೆ.
ಬಿಯರ್ ಮಾರಾಟ ಇಳಿಕೆಯಾಗುತ್ತಿರುವ ಹಿನ್ನಲೆ ಬಿಯರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಿರುವುದಿಲ್ಲ ಎಂದು ಕರ್ನಾಟಕ ಸರ್ಕಾರ ತಿಳಿಸಿದೆ. ಅಲ್ಲದೆ ಬಿಯರ್ ಬೆಲೆ ಯಥಾಸ್ಥಿಯಲ್ಲಿರುವುದು ಎಂದು ಹೇಳಿದೆ. ಚಳಿಗಾಲದ ವೇಳೆಗೆ ಬಿಯರ್ ಮಾರಾಟ ಕುಸಿತವಾಗಿದ್ರು ಕೂಡ, ಚಳಿಗಾಲದ ಅಂತ್ಯದ ವೇಳೆಗೆ ಬಿಯರ್ ಬೆಲೆಯಲ್ಲಿ ಯಾವುದೇ ಹೆಚ್ಚಳವಿರುವುದಿಲ್ಲ ಎಂದು ಕರ್ನಾಟಕ ಸರ್ಕಾರ ಖಚಿತಪಡಿಸಿದೆ.

ಇನ್ನು ಬಿಯರ್ ಮಾರಾಟವು ಚಳಿಗಾಲದ ತಿಂಗಳಲ್ಲಿ ಸುಮಾರು 10 ರಿಂದ 20 ಪ್ರತಿಶತದಷ್ಟು ಕಡಿಮೆಯಾಗುವುದು ಸಹಜವಾಗಿಬಿಟ್ಟಿದೆ. ಏಕೆಂದರೆ ತಣ್ಣನೆಯ ವಾತಾವರಣ ಸಾಮಾನ್ಯವಾಗಿ ಬಿಯರ್ ಸೇವನೆಯನ್ನು ಕಡಿಮೆ ಮಾಡುತ್ತದೆ. ಬೇಸಿಗೆಯಲ್ಲಿ ಬಿಯರ್ ಮಾರಾಟವು ಸಾಮಾನ್ಯವಾಗಿ ಹೆಚ್ಚಾಗುತ್ತದೆ ಆದರೆ ತಾಪಮಾನ ಕಡಿಮೆಯಾದಾಗ ಅಂದ್ರೆ ಚಳಿಗಾಲದ ವೇಳೆಗೆ ಕಡಿಮೆಯಾಗುತ್ತದೆ. ಈ ಹಿನ್ನೆಲೆ, ಸಂಭಾವ್ಯ ನಷ್ಟವನ್ನು ಸರಿದೂಗಿಸಲು ಅಬಕಾರಿ ಇಲಾಖೆಯು ಬಿಯರ್ ಬೆಲೆಯನ್ನ ಹೆಚ್ಚಿಸುವ ಬಗ್ಗೆ ಈ ಹಿಂದೆ ಚಿಂತನೆ ಮಾಡಿತ್ತು. ಆದರೆ, ಈಗ ಜನವರಿ ವರೆಗೆ ಯಥಾಸ್ಥಿತಿಯಲ್ಲಿ ಬೆಲೆಯ ಮಟ್ಟವನ್ನು ಕಾಯ್ದುಕೊಳ್ಳಲು ನಿರ್ಧಾರ ಮಾಡಿದೆ.
ಸರ್ಕಾರಕ್ಕೆ ಅಧಿಕ ಲಾಭವನ್ನ ತಂದುಕೊಡುತ್ತಿರುವ ಏಕೈಕ ಇಲಾಖೆಯಂದ್ರೆ ಅದು ಅಬಕಾರಿ ಇಲಾಖೆ ಮಾತ್ರ. ಆದ್ರೆ ಚಳಿಗಾಲ ಬಂದಾಗ ಮಾತ್ರ ಅದೇ ಇಲಾಖೆ ಮೂಲೆಗುಂಪಾಗುವಂತಾಗುತ್ತದೆ. ಏಕೆಂದರೆ ಚಳಿಗಾಲದ ವೇಳೆಗೆ ಬಿಯರ್‌ಕುಡಿಯುವವರ ಸಂಖ್ಯೆ ಕೂಡ ಕಡಿಮೆಯಾಗುತ್ತಿದ್ದು, ಇದರಿಂದಾಗಿ ಬಿಯರ್ ಖರೀದಿಸುವವರು ಕೂಡ ಕಡಿಮೆಯಾಗುತ್ತಾರೆ.
ಹೀಗಾಗಿ ಈ ಸಮಯದಲ್ಲಿ ಸರ್ಕಾರವೇನಾದ್ರು ಬಿಯರ್ ಬೆಲೆಯನ್ನ ಹೆಚ್ಚಳ ಮಾಡಿದ್ರೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಅಲ್ಲದೆ ಕಡಿಮೆ ಜನರು ಖರೀದಿಮಾಡುವ ವೇಳೆ ಬೆಲೆ ಕೂಡ ಹೆಚ್ಚಾದ್ರೆ ಖರೀದಿಸುವವರು ಕೂಡ ಖರೀದಿ ಮಾಡದಂತಾಗುತ್ತದೆ. ಇದನ್ನ ತಪ್ಪಿಸಲು ರಾಜ್ಯ ಸರ್ಕಾರ ಅಬಕಾರಿ ಇಲಾಖೆ ಜೊತೆ ಚರ್ಚೆ ಮಾಡಿ ಈ ನಷ್ಟವನ್ನ ತಪ್ಪಿಸಲು ಸರ್ಕಾರ ಈ ಯೋಜನೆಗೆ ಮುಂದಾಗಿದೆ. ಅಲ್ಲದೆ ಬೆಲೆಯನ್ನ ಯಥಾಸ್ಥಿಯಲ್ಲಿಡುವುದರಿಂದ ಸರ್ಕಾರ ಬೊಕ್ಕಸೆಗೂ ಕೂಡ ಇದರಿಂದ ಹೆಚ್ಚಿನ ನಷ್ಟವಾಗುವುದಿಲ್ಲ.
ಬಿಯರ್ ಮಾರಾಟದಲ್ಲಿ ನಿರೀಕ್ಷೆಗಿಂತಲೂ ನಿಧಾನಗತಿಯ ಪ್ರತಿಕ್ರಿಯೆ ಇದ್ದರು ಕೂಡ ರಾಜ್ಯ ಸರ್ಕಾರ ಬಿಯರ್ ಬೆಲೆಯನ್ನ ಯಥಾಸ್ಥತಿಯಲ್ಲಿ ಇಡಲು ನಿರ್ಧಾರ ಮಾಡಿದೆ. ಜನವರಿ ತಿಂಗಳಿನಲ್ಲಿ ಸಾಮಾನ್ಯವಾಗಿ ಚಳಿ ಹೆಚ್ಚಿರುತ್ತದೆ, ಹೀಗಾಗಿ ಬಿಯರ್ ಸೇವನೆ ಮಾಡುವವರ ಸಂಖ್ಯೆ ಕೂಡ ಕಡಿಮೆ ಪ್ರಮಾಣದಲ್ಲಿರುತ್ತದೆ. ಹಾಗೆ ಇದು ಸಂಭಾವ್ಯ ಆದಾಯದ ಕೊರತೆಗಳ ಬಗ್ಗೆ ಕಳವಳವನ್ನು ಉಂಟುಮಾಡಿದೆ. ಹೀಗಾಗಿ ಈ ಅವಧಿಯಲ್ಲಿ ಬೆಲೆಗಳನ್ನು ಏರಿಕೆ ಮಾಡದೆ, ಮಾರಾಟದಲ್ಲಿನ ಕುಸಿತವನ್ನು ಕಡಿಮೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ
ಅಲ್ಲದೆ ಈಗಾಗಲೇ ಅಬಕಾರಿ ಇಲಾಖೆಯು ವರ್ಷಕ್ಕೆ 36,000 ಕೋಟಿ ಆದಾಯದ ಗುರಿಯನ್ನು ಹೊಂದಲು ಸಾಕಷ್ಟು ಒತ್ತಡಗಳನ್ನ ಎದುರಿಸುತ್ತಿದೆ. ಆದರೆ ಇಲಾಖೆಗೆ ಇದುವರೆಗೆ ಅರ್ಧದಷ್ಟು ಗುರಿಯನ್ನು ಮಾತ್ರ ಸಾಧಿಸಲಾಗಿದೆ. ಇದರಿಂದಾಗಿ ಸರ್ಕಾರ ಮುಂಬರುವ ಆದಾಯದಲ್ಲಿ ಆಗುವಂತಹ ಏರಿಳಿತಗಳ ಬಗ್ಗೆ ಬಹಳ ಎಚ್ಚರದಿಂದಿದೆ. ಚಳಿಗಾಲದ ತಿಂಗಳುಗಳಲ್ಲಿ ಸ್ಥಿರ ಬೆಲೆಗಳನ್ನ ನಿಗದಿ ಮಾಡುವ ಮೂಲಕ ಬಿಯರ್ ಮಾರಾಟದ ಪ್ರಮಾಣವನ್ನ ಹೆಚ್ಚಿಸಲು ಸರ್ಕಾರ ನಿರ್ಧರಿಸಿದೆ. ಇದರಿಂದಾಗಿ ಅಬಕಾರಿ ಇಲಾಖೆ ಗಳಿಕೆ ಕೂಡ ಕಡಿಮೆಯಾಗದಂತೆ ಸ್ಥರವಾಗಿಡಲು ಸಹಾಯವಾಗುತ್ತದೆ.
ಹಣಕಾಸಿನ ಗುರಿಗಳನ್ನು ಪೂರೈಸುವ ಸಲುವಾಗಿ ಕಾಂಗ್ರೆಸ್ ನೇತೃತ್ವದ ಸಿದ್ದರಾಮಯ್ಯ ಸರ್ಕಾರ ಒತ್ತಡವನ್ನ ಹೆಚ್ಚಿಸುತ್ತಿದೆ, ಅದರಲ್ಲೂ ವಿಶೇಷವಾಗಿ ವಿವಿಧ ಕಲ್ಯಾಣ ಯೋಜನೆಗಳಿಗೆ ಹಣ ನೀಡುವುದನ್ನು ಸರ್ಕಾರ ಮುಂದುವರೆಸಿದೆ. ಇನ್ನು ಇತ್ತ ಆದಾಯದ ಗುರಿ ತಲುಪಲು ಅಬಕಾರಿ ಇಲಾಖೆ ಹರಸಾಹಸ ಪಡುತ್ತಿರುವುದು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಮುಂಬರುವ ತಿಂಗಳುಗಳಲ್ಲಿ ಬಿಯರ್ ಮಾರಾಟ ಕೂಡ ಕಡಿಮೆಯಾಗುವ ಸಾಧ್ಯತೆಯಿದೆ. ಹಾಘೆ ಬಿಯರ್ ಬೆಲೆಗಳಲ್ಲಿ ಯಾವುದೇ ವ್ಯತ್ಯಾಸ ಮಾಡದೇ ಸ್ಥಿರವಾಗಿಡುವ ಸರ್ಕಾರದ ನಿರ್ಧಾರ ಸ್ಥಿರವಾದ ಆದಾಯವನ್ನು ಕಾಪಾಡಿಕೊಳ್ಳುವ ಪ್ರಯತ್ನವಾಗಿದೆ. ಅಲ್ಲದೆ ಎಲ್ಲಾ ಕಾಲಮಾನದಲ್ಲೂ ಬೆಲೆ ಕುಸಿಯದೆ ಸಮತೋಲನಗೊಳಿಸುವ ಗುರಿಯನ್ನ ಸರ್ಕಾರ ಹೊಂದಿದೆ.
ಒಟ್ನಲ್ಲಿ ಸರ್ಕಾರದ ಈ ನಿರ್ಧಾರದಿಂದ ಸಧ್ಯ ಮಧ್ಯಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಬೆಲೆ ಏರಿಕೆಯ ಬಿಸಿ ಬಿಯರ್ ಮೇಲೆ ಎಲ್ಲಿ ತಟ್ಟುತ್ತೋ ಎಂದು ಪರಿತಪಿಸುತ್ತಿದ್ದ ಮಧ್ಯಪ್ರಿಯರು ಈಗ ನಿಟ್ಟುಸಿರು ಬಿಡುವಂತಾಗಿದೆ. ಈ ಮೂಲಕ ಆದಾಯವನ್ನ ಹೇಗೆ ಸಮತೋಲನದಲ್ಲಿಡುವುದೆಂದು ಯೋಚಿಸುತ್ತಿದ್ದ ಅಬಕಾರಿ ಇಲಾಖೆಗು ಕೂಡ ಸರ್ಕಾರದ ಈ ನಿರ್ಧಾರದ ಸ್ವಲ್ಪ ಮಟ್ಟಿಗೆ ಸಮಾಧಾನ ತಂದಿದೆ.


Click it and Unblock the Notifications