ನವದೆಹಲಿ, ಡಿಸೆಂಬರ್ 10: ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗುರುವಾರ ಪೆಟ್ರೋಲ್, ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸತತ ಮೂರು ದಿನ ತೈಲದಲ್ಲಿ ದರವು ವ್ಯತ್ಯಾಸ ಕಂಡುಬರದಿದ್ದರೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ತುಂಬಾನೆ ಹೆಚ್ಚಿದೆ.
ಆಗಸ್ಟ್ ತಿಂಗಳವರೆಗೂ ಸತತ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ದರಗಳು ನಂತರದ ದಿನಗಳಲ್ಲಿ ಇಳಿಮುಖ ಸಾಧಿಸಿದ್ದವು. ಎರಡು ತಿಂಗಳು ಕಾಲ ತೈಲ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡಿರಲಿಲ್ಲ. ಆದರೆ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ನವೆಂಬರ್ 20ರಂದು ದೇಶೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಎರಡು ತಿಂಗಳ ವಿರಾಮದ ನಂತರ ಹೆಚ್ಚಿಸಿದವು.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ ನಾಲ್ಕು ದಿನಗಳಲ್ಲಿ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 83.11 ರೂ. ಮತ್ತು ಡೀಸೆಲ್ ದರ 73.87 ರೂ.
ಕೊಲ್ಕತ್ತಾದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 85.19 ರೂ. ಮತ್ತು ಡೀಸೆಲ್ ದರ 77.44 ರೂ.
ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 90.34 ರೂ. ಮತ್ತು ಡೀಸೆಲ್ ದರ 80.51 ರೂ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 86.51 ರೂ. ಮತ್ತು ಡೀಸೆಲ್ ದರ 78.31 ರೂ.
ಹೈದ್ರಾಬಾದ್‌ನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 87.06 ರೂ. ಮತ್ತು ಡೀಸೆಲ್ ದರ 80.60 ರೂ.
ಚೆನ್ನೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 86.61 ರೂ. ಮತ್ತು ಡೀಸೆಲ್ ದರ 79.21 ರೂ.


Click it and Unblock the Notifications