ನವದೆಹಲಿ, ಡಿಸೆಂಬರ್ 12: ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ ಪೆಟ್ರೋಲ್-ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೂ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರವು ಸಾಕಷ್ಟು ಹೆಚ್ಚಾಗಿಯೇ ಇದೆ. ಕೆಲವು ನಗರಗಳಲ್ಲಂತೂ ಪೆಟ್ರೋಲ್ ಲೀಟರ್‌ಗೆ 90 ರೂಪಾಯಿ ಗಡಿ ದಾಟಿದೆ.
ಆಗಸ್ಟ್ ತಿಂಗಳವರೆಗೂ ಸತತ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ದರಗಳು ನಂತರದ ದಿನಗಳಲ್ಲಿ ಇಳಿಮುಖ ಸಾಧಿಸಿದ್ದವು. ಎರಡು ತಿಂಗಳು ಕಾಲ ತೈಲ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡಿರಲಿಲ್ಲ. ಆದರೆ ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) ನವೆಂಬರ್ 20ರಂದು ದೇಶೀಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಎರಡು ತಿಂಗಳ ವಿರಾಮದ ನಂತರ ಹೆಚ್ಚಿಸಿದವು.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಎಷ್ಟಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 83.71 ರೂ. ಮತ್ತು ಡೀಸೆಲ್ ದರ 73.87 ರೂ.
ಕೊಲ್ಕತ್ತಾದಲ್ಲಿ ಪೆಟ್ರೋಲ್ ದರ ಲೀಟರ್‌ಗೆ 85.19 ರೂ. ಮತ್ತು ಡೀಸೆಲ್ ದರ 77.44 ರೂ.
ಮುಂಬೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 90.34 ರೂ. ಮತ್ತು ಡೀಸೆಲ್ ದರ 80.51 ರೂ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 86.51 ರೂ. ಮತ್ತು ಡೀಸೆಲ್ ದರ 78.31 ರೂ.
ಹೈದ್ರಾಬಾದ್‌ನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 87.06 ರೂ. ಮತ್ತು ಡೀಸೆಲ್ ದರ 80.60 ರೂ.
ಚೆನ್ನೈನಲ್ಲಿ ಪೆಟ್ರೋಲ್ ದರ ಲೀಟರ್‌ಗೆ 86.61 ರೂ. ಮತ್ತು ಡೀಸೆಲ್ ದರ 79.21 ರೂ.


Click it and Unblock the Notifications