ನಾಳೆ ಎಂದಿನಂತೆ ಹಾಲು, ಮೊಸರು ಸಿಗುತ್ತೆ.. ಹೌದು, ನಾಳೆ ರಾಜ್ಯಾದ್ಯಂತ ಕೆಎಂಎಫ್ ನೌಕರರು ಮುಷ್ಕರಕ್ಕೆ ಸಜ್ಜಾಗಿತ್ತು. ಆದರೆ ತುರ್ತು ಸುದ್ದಿಗೋಷ್ಠಿ ನಡೆಸಿದ ಕೆಎಂಎಫ್ ನೌಕರರ ಸಂಘ ನಾಳಿನ ಮುಷ್ಕರದ ಬಗ್ಗೆ ಮಹತ್ವದ ನಿರ್ಧಾರವನ್ನು ತಗೆದುಕೊಂಡಿದ್ದಾರೆ. ಹಾಗಿದ್ರೆ ಕೆಎಂಎಫ್ ನೌಕರರು ಮುಷ್ಕರ ಯಾವಾಗ? ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ.
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ ( KMF) ಆಡಳಿಯ ಮಂಡಳಿಯ ವಿರುದ್ದ ಅಧಿಕಾರಿಗಳು ಹಾಗೂ ನೌಕರರ ಮುನಿಸು ಜೋರಾಗಿತ್ತು.ನಿರ್ಲಕ್ಷ್ಯ ತೋರಿದ ಕೆಎಂಎಫ್ ವಿರುದ್ಧ ಅಧಿಕಾರಿಗಳು, ನೌಕರರು ಕೆರಳಿದ್ದು, ಮುಷ್ಕರ ಮಾಡಿ ಕೆಎಂಎಫ್ ಆಡಳಿತ ಮಂಡಳಿಗೆ ಬಿಸಿ ಮುಟ್ಟಿಸೋಕೆ ಪ್ಲಾನ್ ಮಾಡಿದ್ದಾರೆ ಆದರೆ ಕೆಎಂಎಫ್ ಚೇರ್ಮನ್ ಭೀಮಾ ನಾಯಕ್ ಅವರು ನೌಕರರ ಬೇಡಿಕೆ ಈಡೇರಿಕೆಗೆ 3 ದಿನಗಳ ಸಮಯಾವಕಾಶ ಕೇಳಿದ್ದಾರೆ. ಚೇರ್ಮನ್ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ KMF ನೌಕರರ ಸಂಘ ಮುಷ್ಕರ ಮುಂದೂಡಲಾಗಿದೆ.

ನೌಕರರ ಬೇಡಿಕೆ ಈಡೇರಿಕೆಗೆ 3 ದಿನಗಳ ಸಮಯಾವಕಾಶ
ಕೆಎಂಎಫ್ ನೌಕರರು 7ನೇ ವೇತನ ಆಯೋಗದ ವರದಿಯಂತೆ ವೇತನಕ್ಕೆ ಆಗ್ರಹಿದ್ದು, ನಾಳೆ ರಾಜ್ಯಾದ್ಯಂತ ಮುಷ್ಕರ ನಡೆಸಲು ಕರೆ ನೀಡಿದ್ದರು. ಆದರೆ ಕೆಎಂಎಫ್ ಚೇರ್ಮನ್ ಭೀಮಾ ನಾಯಕ್ ಅವರು ನೌಕರರ ಬೇಡಿಕೆ ಈಡೇರಿಕೆಗೆ 3 ದಿನಗಳ ಸಮಯಾವಕಾಶ ಕೇಳಿದ್ದಾರೆ. ಚೇರ್ಮನ್ ಕಾಲಾವಕಾಶ ಕೇಳಿದ ಹಿನ್ನೆಲೆಯಲ್ಲಿ KMF ನೌಕರರ ಸಂಘ ಮುಷ್ಕರ ಮುಂದೂಡಲಾಗಿದೆ.
ನಾಳೆ ಹಾಲು ಮೊಸರು ಸಿಗುತ್ತೆ
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್ ( KMF) ಆಡಳಿಯ ಮಂಡಳಿಯ ವಿರುದ್ದ ಅಧಿಕಾರಿಗಳು ಹಾಗೂ ನೌಕರರ ಮುನಿಸು ಜೋರಾಗಿತ್ತು.ಅದರೆ ಕೆಎಂಎಫ್ ಚೇರ್ಮನ್ ಭೀಮಾ ನಾಯಕ್ ಅವರು ನೌಕರರ ಬೇಡಿಕೆ ಈಡೇರಿಕೆಗೆ 3 ದಿನಗಳ ಸಮಯಾವಕಾಶ ಕೇಳಿದ್ದಾರೆ. ಹೀಗಾಗಿ ನಾಳೆ ಹಾಲು ಮೊಸರು ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಫೆಬ್ರವರಿ 7ರವರೆಗೆ ಡೆಡ್ ಲೈನ್
KMF ನೌಕರರ ಸಂಘ ಮುಷ್ಕರ ಮುಂದೂಡಿದ್ದು, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ 7 ದಿನಗಳ ಟೈಮ್ ಕೊಡಲಾಗಿದೆ. ಕೆಎಂಎಫ್ ಆಡಳಿತ ಮಂಡಳಿಗೆ ನೌಕರರ ಸಂಘ ಫೆಬ್ರವರಿ 7ರವರೆಗೆ ಡೆಡ್ ಲೈನ್ ಕೊಟ್ಟಿದೆ.
16 ಸಾವಿರ ಕೋಟಿ ರೂಪಾಯಿ ವಾಹಿವಾಟುವಿರುವ KMF
ಕೆಎಂಎಫ್ ನೌಕರರ ಸಂಘದ ಗೌರವ ಅಧ್ಯಕ್ಷ ರವಿ ಕೃಷ್ಣಾ ರೆಡ್ಡಿ ಅವರು ಮಾತನಾಡಿ, 16 ಸಾವಿರ ಕೋಟಿ ರೂಪಾಯಿ ವಹಿವಾಟು ಇರುವ KMF ಸಂಸ್ಥೆಯಲ್ಲಿ 16 ಜಿಲ್ಲಾ ಒಕ್ಕೂಟ ಬರುತ್ತೆ. 6 ಸಾವಿರ ಜನ ನೇರ ನೌಕರಿಯಲ್ಲಿ ಇದ್ದಾರೆ.
ರಾಜ್ಯ ಸರ್ಕಾರ ನೌಕರರಿಗೆ 7ನೇ ವೇತನ ಆಯೋಗ ಜಾರಿ
ರಾಜ್ಯ ಸರ್ಕಾರ ನೌಕರರಿಗೆ 7ನೇ ವೇತನ ಆಯೋಗ ಜಾರಿ ಮಾಡಿದೆ. ಆದರೆ ಜಿಲ್ಲಾ ಮಟ್ಟದ ಒಕ್ಕೂಟಗಳಲ್ಲಿ ಒಂದೇ ರೀತಿಯ ಭತ್ಯೆ ಇಲ್ಲ. ಈ ಹಿನ್ನೆಲೆಯಲ್ಲಿ ನೌಕರರು & ಅಧಿಕಾರಿಗಳು ಗೊಂದಲದಲ್ಲಿದ್ದಾರೆ.ಕೆಎಂಎಫ್ ಜನರಿಗಾಗಿ ಕೆಲಸ ಮಾಡುತ್ತಿದೆ.
60 ಲಕ್ಷ ಹಾಲು ಬೇಡಿಕೆ
ಪ್ರತಿದಿನ ನಾವೆಲ್ಲ 3 ಪಾಳಿಯಲ್ಲಿ ಕೆಲಸ ಮಾಡಬೇಕು. 90 ಲಕ್ಷ ಲೀಟರ್ ಹಾಲು ಪ್ರೊಕ್ಯೂರ್ ಮಾಡ್ತಾ ಇದ್ದೇವೆ. 60 ಲಕ್ಷ ಹಾಲು ಬೇಡಿಕೆ ಇದೆ. 30 ಲಕ್ಷ ಹಾಲು ಬೇರೆ ಬೇರೆ ರೀತಿ ಕನ್ವರ್ಟ್ ಮಾಡಲಾಗಿದೆ. ಕೆಎಂಎಫ್ ಅಧಿಕಾರಿ ಸಂಘದ ವತಿಯಿಂದ ಸಾಕಷ್ಟು ಬೇಡಿಕೆ ಇಟ್ಟಿದೆ.
ಮುಷ್ಕರಕ್ಕೆ ಕಾರಣ ಏನು?
ಕರ್ನಾಟಕ ಹಾಲು ಮಹಾಮಂಡಳ ನೌಕರರು ಪ್ರಮುಖವಾಗಿ ಬಾಕಿ ವೇತನ ಮತ್ತು ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುತ್ತಿದ್ದಾರೆ. ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಫೆಬ್ರವರಿಯಿಂದ ಮುಷ್ಕರ ನಡೆಸುವುದಾಗಿ ಅವರು ಸರ್ಕಾರಕ್ಕೆ ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು. KMF ನೌಕರರ ಸಂಘವು ಈಗಾಗಲೇ ತಮ್ಮ ಬೇಡಿಕೆಗಳ ಪಟ್ಟಿಯೊಂದಿಗೆ ಆಡಳಿತ ಮಂಡಳಿಗೆ ಮನವಿ ಪತ್ರ ಸಲ್ಲಿಸಿದ್ದು, ಇವುಗಳ ಈಡೇರಿಕೆಗೆ ಒಂದು ವಾರ ಗಡುವು ನೀಡಿತ್ತು. ಇದು ಜನವರಿ 31ಕ್ಕೆ ಅಂದರೆ ಇಂದಿಗೆ ಕೊನೆಗೊಳ್ಳಲಿದೆ. ಅಷ್ಟರೊಳಗೆ ಬೆಡಿಕೆಗಳು ಈಡೇರದಿದ್ದರೆ ಮುಷ್ಕರ ನಡೆಸಲಾಗುವುದು ಎಂದು ನೌಕರರ ಸಂಘ ಎಚ್ಚರಿಕೆ ನೀಡಿದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಚಿನ್ನದ ಬೆಲೆ ಇಳಿಕೆ: ಖರೀದಿಗೆ ಇದೇ ಸುವರ್ಣಾವಕಾಶವೇ?



Click it and Unblock the Notifications