ನವದೆಹಲಿ, ಏಪ್ರಿಲ್ 4: ಈ ಸೈಬರ್ ಕ್ರೈಂ ಕೃತ್ಯಗಳು ಬಂದಿದ್ದೆ ಬಂದಿದ್ದು ಬ್ಯಾಂಕ್ ಅಕೌಂಟ್‌ನಲ್ಲಿ ಇಡುವ ನಮ್ಮ ಹಣ ಎಷ್ಟು ಸೇಫ್ ಅನ್ನೋ ಪ್ರಶ್ನೆ ಉದ್ಬವವಾಗಿದೆ.
ಮೇಲಿಂದ ಮೇಲೆ ಸೈಬರ್ ಕ್ರೈಂನ ಪ್ರಕರಣಗಳು ನಡೆಯುತ್ತಲೇ ಇದ್ರು, ಅದನ್ನು ತಡೆಯುವ ಕಾನೂನು ರೂಪಿಸುವುದಕ್ಕೆ, ಇಂಥ ಪ್ರಕರಣಗಳ ಮೇಲೆ ಸಂಪೂರ್ಣವಾಗಿ ಗಮನ ಕೇಂದ್ರೀಕರಿಸುವುದಕ್ಕೆ ಮತ್ತು ಆರೋಪಿಗಳ ಜಾಡು ಪತ್ತೆ ಮಾಡುವುದಕ್ಕೆ ಇದುವರೆಗೂ ಸ್ಪಷ್ಟವಾಗಿ ಸಾಧ್ಯವಾಗುತ್ತಲೇ ಇಲ್ಲ. ಹಾಗಾಗಿ ಸೈಬರ್ ಪೊಲೀಸ್ ವಿಭಾಗ ಮತ್ತು ಬ್ಯಾಂಕಿಂಗ್ ಸೆಕ್ಟರ್ ಹಾಗೂ ನಮ್ಮಂತ ಸಾಮಾನ್ಯ ಗ್ರಾಹಕರ ಪಾಲಿಗೂ ಕೂಡ ಈ ಸೈಬರ್ ಕ್ರೈಂ ದುಸ್ವಪ್ನವಾಗಿ ಕಾಡಿದೆ.

ಬ್ಯಾಂಕ್ ವ್ಯವಸ್ಥೆ ಸಂಪೂರ್ಣ ಡಿಜಿಟಲೀಕರಣಗೊಂಡ ಮೇಲೆ ಹಲವಾರು ಬದಲಾವಣೆಗಳಾದವು. ಮೊಬೈಲ್ ಆಪ್ ಗಳು ಪ್ರಚಲಿತಕ್ಕೆ ಬಂದವು. ಆನ್‌ಲೈನ್ ಪೇಮೆಂಟ್ ಗಳು ಅತಿ ಹೆಚ್ಚು ಪ್ರಸಿದ್ಧಿ ಹೊಂದಿದವು. ಕ್ಷಣಮಾತ್ರದಲ್ಲಿ ವಹಿವಾಟು ನಡೆಸಲು ಸಾಧ್ಯವಾದದ್ದರಿಂದ ಗ್ರಾಹಕರಿಗೂ ಕೂಡ ಬಹಳ ಅಚ್ಚುಮೆಚ್ಚು ಎನಿಸಿಕೊಂಡಿತ್ತು. ಆದರೆ ಈಗ ಈ ಇಡೀ ಸಂಪೂರ್ಣ ವ್ಯವಸ್ಥೆಯೇ ಸೈಬರ್ ಅಟ್ಯಾಕ್ ನ ಸುಳಿಯಲ್ಲಿ ಸಿಲುಕಿ ಆತಂಕವನ್ನು ಎದುರಿಸುವಂತೆ ಆಗಿದೆ. ಅದಕ್ಕೆ ಕಾರಣ ನಾನಾ ಬಗೆಯಲ್ಲಿ ಸೈಬರ್ ವಂಚಕರು ನಿಮ್ಮ ಖಾತೆಯಲ್ಲಿರುವ ಹಣವನ್ನು ಲಪಟಾಯಿಸೊ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಈಗಾಗಲೇ ಇಂತಹ ಸಾವಿರಾರು ಪ್ರಕರಣಗಳು ದೇಶದಾದ್ಯಂತ ನಡೆದುಹೋಗಿದೆ.
ಆದರೆ ಬ್ಯಾಂಕಿಂಗ್ ವಲಯ ಇಷ್ಟು ದೊಡ್ಡ ಮಟ್ಟದಲ್ಲಿ ಡಿಜಿಟಲೀಕರಣಗೊಂಡ ಪ್ರಭಾವ ಎಷ್ಟು ಅನುಕೂಲತೆಗಳಿವೆಯೋ ಅದಕ್ಕೂ ಹೆಚ್ಚಿನ ಅನಾನುಕೂಲತೆಗಳು ಕೂಡ ಸಂಭವಿಸಿದೆ. ಲಕ್ಷಾಂತರ ರೂಪಾಯಿ ಖಾತೆಯಲ್ಲಿಟ್ಟು ನಮ್ಮ ಹಣ ಸೇಫ್ ಎಂದುಕೊಳ್ಳುವವರಿಗೆ ಕ್ಷಣಮಾತ್ರದಲ್ಲಿ ಕದೀಮರು ಚಳ್ಳೆಹಣ್ಣು ತಿನ್ನಿಸಿ ಅಕೌಂಟ್ ನಲ್ಲಿರುವ ಲಕ್ಷಾಂತರ ರೂಪಾಯಿ ದುಡ್ಡನ್ನು ದೋಚಿ ಪಂಗನಾಮ ಹಾಕಿರುವ ಸಾವಿರಾರು ಪ್ರಕರಣಗಳು ಈಗಾಗಲೇ ನಮ್ಮ ಕಣ್ಣ ಮುಂದೆಯಿದೆ.
ಪ್ರಮುಖವಾಗಿ ನಿಮ್ಮ ಮೊಬೈಲ್ ನಂಬರ್ ಗೆ ಬರುವಂತಹ ಓಟಿಪಿ ಗಳು ಮತ್ತು ಅನಾಮಿಕ ನಂಬರ್ ನಿಂದ ಬರುವ ಲಿಂಕ್ ಉಳ್ಳಂತಹ ಸಂದೇಶಗಳು ಬಹಳ ಅಪಾಯಕಾರಿಯಾಗಿ ಪರಿಣಮಿಸುತ್ತೆ. ಒಂದು ವೇಳೆ ನಿಮಗೆ ಅಂದಾಜಿಲ್ಲವಾದರೆ ಈ ಓಟಿಪಿಯನ್ನ ಯಾರ ಬಳಿಯೂ ಶೇರ್ ಮಾಡಬಾರದು , ಯಾವುದಾದ್ರೂ ನಂಬರಿಂದ ಲಿಂಕ್ ಗಳು ಬಂದಿದ್ರೆ ಆ ಲಿಂಕ್ ಅನ್ನ ಅಪ್ಪಿತಪ್ಪಿಯೂ ಕೂಡ ಟಚ್ ಮಾಡಬಾರದು. ಒಂದು ವೇಳೆ ಓಟಿಪಿ ಶೇರ್ ಮಾಡಿದ್ರೆ ಅಥವಾ ಲಿಂಕ್ ಗಳನ್ನು ಟಚ್ ಮಾಡಿದ್ರೆ ನಿಮ್ಮ ಖಾತೆಯ ಸಂಪೂರ್ಣ ಮಾಹಿತಿ ಖದೀಮರ ಕೈ ಸೇರಿರುತ್ತೆ.
ಹೀಗಾಗಿ ಈಗಾಗಲೇ ಯಾರಿಗೂ ಓಟಿಪಿಗಳನ್ನ ಹೇಳಬೇಡಿ ಲಿಂಕ್ ಗಳನ್ನು ಟಚ್ ಮಾಡಬೇಡಿ ಅನ್ನೋ ಅರಿವು ಮೂಡಿಸುವ ಅಭಿಯಾನ ದೊಡ್ಡ ಮಟ್ಟದಲ್ಲಿ ಆಗ್ತಿದೆ . ಹಾಗಾಗಿಯೂ ಬಗೆ ಬಗೆಯ ವಾಮ ಮಾರ್ಗಗಳ ಮೂಲಕ ಸೈಬರ್ ಕದಿಮರು ನಿಮ್ಮ ಖಾತೆಗೆ ಕನ್ನ ಹಾಕುವುದಕ್ಕೆ ಕಾದುಕೊಳ್ತಿರ್ತಾರೆ. ಹಾಗಾಗಿ ಐಸಿಸಿ ಬ್ಯಾಂಕ್ ಈಗ ತನ್ನ ಗ್ರಾಹಕರಿಗೆ ಹೊಸ ಸೂಚನೆಯನ್ನು ಕೊಟ್ಟಿದೆ.
ಗ್ರಾಹಕರಿಗೆ ಎಚ್ಚಿರಿಕೆ ಕೊಟ್ಟ ICICI ಬ್ಯಾಂಕ್ !
ಈಗ ಖದೀಮರು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ನಿಮಗೆ ಅನಾಮಿಕ ಸಂಖ್ಯೆಯಿಂದ ಒಂದು ಫೋನ್ ಕಾಲ್ ಬರುತ್ತೆ . ನಿರ್ದಿಷ್ಟವಾದ ಆಪ್ ಒಂದನ್ನು ಡೌನ್ಲೋಡ್ ಮಾಡುವಂತೆ ನಿಮಗೆ ಸೂಚಿಸುತ್ತಾರೆ, ಬ್ಯಾಂಕ್ ಸಿಬ್ಬಂದಿಯ ಸೋಗಿನಲ್ಲಿ ಕರೆಮಾಡುವ ಇವರು ನೀವು ಒಂದುವೇಳೆ ಆಪ್ ನ ಡೌನ್ಲೋಡ್ ಮಾಡಿ ಡೀಟೇಲ್ಸ್ ಫಿಲ್ ಮಾಡ್ತಿದ್ದ ಹಾಗೆ, ನಿಮ್ಮ ಖಾತೆಯ ಸಂಪೂರ್ಣ ವಿವರ ಪಡೆದುಕೊಂಡು ನಿಮ್ಮ ಖಾತೆಯಲ್ಲಿರೋ ಹಣವನ್ನು ಲಪಟಾಯಿಸ್ಬಿಡ್ತಾರೆ . ಹೀಗಾಗಿ ಗ್ರಾಹಕರು ಯಾರಾದರೂ ಬ್ಯಾಂಕ್ ಸಿಬ್ಬಂದಿ ಸೋಗಿನಲ್ಲಿ ಕರೆ ಮಾಡಿ ಇಂತಹ ಡೀಟೇಲ್ಸ್ ಗಳನ್ನ ಕೇಳಿದ್ರೆ ಕೊಡಬೇಡಿ . ನಮ್ಮ ಬ್ಯಾಂಕಿಂಗ್ ಆಪ್ ಬಿಟ್ಟು ಇನ್ನುಳಿದ ಯಾವುದೇ ಆ್ಯಪ್ಗಳನ್ನು ಕೂಡ ಬ್ಯಾಂಕಿಂಗ್ ವ್ಯವಹಾರಗಳಿಗಾಗಿ ಬಳಸಬೇಡಿ, ಎಚ್ಚರವಾಗಿರಿ ಅನ್ನೋ ಸಂದೇಶವನ್ನು ಐಸಿಐಸಿಐ ಬ್ಯಾಂಕ್ ಗ್ರಾಹಕರಿಗೆ ಸೂಚಿಸಿದೆ.
ಇನ್ನು ಮುಂದೆ ಓಟಿಪಿ ಗಳು ಮತ್ತು ಲಿಂಕ್ ಗಳ ಬಗ್ಗೆ ಎಷ್ಟು ಜಾಗರೂಕರಾಗಬೇಕು. ನೀವು ಡೌನ್ಲೋಡ್ ಮಾಡುವ ಆಪ್ ಗಳ ಬಗ್ಗೆ ಅಥವಾ ನಿಮಗೆ ಯಾರಾದರೂ ಕರೆ ಮಾಡಿ ಮಾಹಿತಿ ಕೇಳಿದಾಗ ಉತ್ತರಿಸುವ ಬಗ್ಗೆ ಕೂಡ ಅಷ್ಟೇ ಜಾಗರೂಕರಾಗಿರಿ. ಸೈಬರ್ ಕ್ರೈಮ್ ನಿಂದ ದೂರ ಇರಿ ಸೈಬರ್ ವಂಚನೆಗೆ ಒಳಗಾಗದ ಹಾಗೆ ಮುಂಜಾಗೃತೆ ವಹಿಸುವುದು ಒಳಿತು.


Click it and Unblock the Notifications