ಬ್ಯಾಂಕ್ ಗ್ರಾಹಕರಿಗೆ ಆರ್ಬಿಐ ಸಿಹಿಸುದ್ದಿ ನೀಡಿದೆ. 2020 ಜನವರಿಯಿಂದ ಉಳಿತಾಯ ಖಾತೆ ಹೊಂದಿರುವ ಗ್ರಾಹಕರಿಗೆ ಯಾವುದೇ ಬ್ಯಾಂಕ್ಗಳು NEFT(ರಾಷ್ಟ್ರೀಯ ಎಲೆಕ್ಟ್ರಾನಿಕ್ ನಿಧಿ ವರ್ಗಾವಣೆ) ಶುಲ್ಕ ವಿಧಿಸುವಂತಿಲ್ಲ ಎಂದು ಆದೇಶ ಹೊರಡಿಸಿದೆ. ಈ ಮೂಲಕ ಡಿಜಿಟಲ್ ಪಾವತಿಯನ್ನು ಪ್ರೋತ್ಸಾಹಿಸುವುದು ಕೂಡ ಆರ್ಬಿಐನ ಉದ್ದೇಶವಾಗಿದೆ.
NEFT ಎನ್ನುವುದು ಆರ್ಬಿಐ ನಿರ್ವಹಿಸುವ ಎಲೆಕ್ಟ್ರಾನಿಕ್ ನಿಧಿ ವರ್ಗಾವಣೆ ಮಾಡುವ ವ್ಯವಸ್ಥೆಯಾಗಿದ್ದು, ಒಂದು ಬ್ಯಾಂಕ್ನಿಂದ ಮತ್ತೊಂದು ಬ್ಯಾಂಕ್ಗೆ ಹಣವನ್ನು ವರ್ಗಾಯಿಸುತ್ತದೆ. ಡಿಜಿಟಲ್ ವರ್ಗಾವಣೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಆರ್ಬಿಐ ಈ ಶುಲ್ಯವನ್ನು ತೆಗೆದುಹಾಕಲು ನಿರ್ಧರಿಸಲಾಗಿದೆ. ಅಲ್ಲದೆ ಬ್ಯಾಂಕುಗಳಿಗೆ ಒಂದು ವಾರದೊಳಗೆ ಸೂಚನೆಗಳನ್ನು ನೀಡಲಾಗುವುದು ಎಂದು ಕೇಂದ್ರ ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.

ಪ್ರಸ್ತುತ 2 ರಿಂದ 5 ಲಕ್ಷ ರುಪಾಯಿಗಳ ಆರ್ಟಿಜಿಎಸ್ ವಹಿವಾಟಿಗೆ ಗರಿಷ್ಟ 30 ರುಪಾಯಿ. 5 ಲಕ್ಷಕ್ಕಿಂತ ಹೆಚ್ಚಿನ ವಹಿವಾಟುಗಳಿಗೆ ಗರಿಷ್ಟ 55 ರುಪಾಯಿ ವಿಧಿಸಲಾಗುತ್ತಿತ್ತು. ಅಂತೆಯೇ ಬ್ಯಾಂಕ್ ಶಾಖೆಗಳಲ್ಲಿ 10 ಸಾವಿರ ರುಪಾಯಿವರೆಗಿನ NEFT ವಹಿವಾಟುಗಳಿಗೆ 2.50 ರುಪಾಯಿ (+GST) ವಿಧಿಸಲಾಗುತ್ತದೆ. 10 ಸಾವಿರದಿಂದ 1 ಲಕ್ಷವರೆಗಿನ ವಹಿವಾಟಿಗೆ 5 ರುಪಾಯಿ(+GST), 1 ಲಕ್ಷದಿಂದ 2 ಲಕ್ಷದವರೆಗಿನ ವಹಿವಾಟಿಗೆ 15 ರುಪಾಯಿ(+GST), 2 ಲಕ್ಷಕ್ಕಿಂತಲೂ ಹೆಚ್ಚಿನ ಹಣ ವಹಿವಾಟಿಗೆ ಗರಿಷ್ಠ 25 ರುಪಾಯಿ (+GST) ವಿಧಿಸಲಾಗುತ್ತಿತ್ತು.
RTGS ಎಂದರೆ ದೊಡ್ಡ ಮೌಲ್ಯದ ನಿಧಿಯನ್ನ ತಕ್ಷಣವೇ ವರ್ಗಾವಣೆ ಮಾಡುವುದಾಗಿದೆ. ಮತ್ತು NEFT 2 ಲಕ್ಷವರೆಗಿನ ನಿಧಿ ವರ್ಗಾವಣೆಗೆ ಬಳಸಲಾಗುತ್ತದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications