ಸಿಲಿಕಾನ್ ಸಿಟಿ ಬೆಂಗಳೂರು ಅದೆಷ್ಟೋ ಜನರಿಗೆ ಆಸರೆ ನೀಡಿದೆ. ಉದ್ಯೋಗ ಇಲ್ಲದವರಿಗೆ ಉದ್ಯೋಗ ನೀಡಿದೆ. ಜೀವನ ಅಂದ್ರೆ ಏನು ಎಂಬುದನ್ನು ಕಲಿಸಿಕೊಟ್ಟಿದೆ. ಅಂತಹ ಬೆಂಗಳೂರು ದಿನವಿಡೀ ಟ್ರಾಫಿಕ್, ಜನಜಂಗುಳಿಯಿಂದಲೇ ತುಂಬಿರುತ್ತದೆ. ದಿನದ 24 ಗಂಟೆಯೂ ಆಕ್ಟಿವ್ ಆಗಿರುವ ಬೆಂಗಳೂರನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಇದೀಗ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮುಂದಾಗಿದೆ. ಈಗಾಗಲೇ ಸಿಕ್ಕ ಸಿಕ್ಕಲ್ಲಿ ಕಸ ಹಾಕುವವರ ವಿರುದ್ಧ ಜಿಬಿಎ ಕ್ರಮ ಕೈಗೊಂಡಿತ್ತು. ಆದ್ರೆ ಇದೀಗ ಮತ್ತೊಂದು ಮಹತ್ವದ ಎಚ್ಚರಿಕೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸಾರ್ವಜನಿಕರಿಗೆ ನೀಡಿದೆ.

ಹೌದು, ಈಗಾಗಲೇ ಕಂಡ ಕಂಡಲ್ಲಿ ಕಸ ಹಾಕುವವರ (Garbage) ವಿರುದ್ಧ ಸರ್ಕಾರ ಖಡಕ್ ಕ್ರಮ ಕೈಗೊಂಡು, ದಂಡ ವಿಧಿಸಿತ್ತು. ಇದೀಗ ವಾಹನಗಳಿಗೆ ಹಾಕದೆ ಮನೆಯಲ್ಲೇ ಕಸ ಇಟ್ಟುಕೊಂಡವರ ವಿರುದ್ಧವೂ ಕ್ರಮ ಕೈಗೊಳ್ಳಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ ನಿರ್ಧರಿಸಿದೆ. ಬೆಂಗಳೂರಿನದಲ್ಲಿ ಮಹಾನಗರಗಳಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಎದುರಿಸುವುದೇ ಒಂದು ಸವಾಲಾದರೆ, ಇತ್ತೀಚೆಗೆ ಘನತ್ಯಾಜ್ಯ ವಿಲೇವಾರಿ ಮಾಡುವುದೇ ಸರ್ಕಾರಕ್ಕೆ ದೊಡ್ಡ ತಲೆನೋವಾಗಿದೆ.
ಮನೆಯಲ್ಲಿ ಕಸ ಇಟ್ಟುಕೊಂಡರೂ ದಂಡ ಫಿಕ್ಸ್!
ಇದೀಗ ಮನೆ ಮುಂದೆ ಬರುವ ತ್ಯಾಜ್ಯ ವಿಲೇವಾರಿ ವಾಹನಗಳಿಗೆ ಕಸ ಹಾಕದೇ, ಯಾರೆಲ್ಲಾ ಮನೆಯಲ್ಲೇ ಕಸ ಇಟ್ಟುಕೊಂಡಿರುತ್ತಾರೋ, ಅವರ ವಿರುದ್ಧ ಕ್ರಮ ಕೈಗೊಳ್ಳಲು ಘನತ್ಯಾಜ್ಯ ನಿರ್ವಹಣಾ ನಿಯಮಿತ ಸಂಸ್ಥೆ ಮುಂದಾಗಿದೆ. ಈ ಎಚ್ಚರಿಕೆಯ ಪ್ರಕಾರ, ಇನ್ಮೇಲೆ ಕಸವನ್ನು ಕೊಡದೆ ಮನೆಯಲ್ಲೇ ಇಟ್ಟುಕೊಂಡರೆ ದಂಡ ಹಾಕುವುದಾಗಿ ಹೇಳಲಾಗಿದೆ.
ಯಾರು ನಿಯಮಿತವಾಗಿ ಮನೆಯ ಕಸ ಕೊಡದೆ ಮನೆಯಲ್ಲೇ ಇಟ್ಟುಕೊಂಡಿರುತ್ತಾರೋ, ಅವರ ವಿರುದ್ಧ ದಂಡದ ಅಸ್ತ್ರಕ್ಕೆ ಗ್ರೇಟರ್ ಬೆಂಗಳೂರು ಅಥಾರಟಿ ಸಜ್ಜಾಗಿದೆ. ಈ ಮೂಲಕ ಮನೆಯಲ್ಲಿಟ್ಟುಕೊಳ್ಳದೇ, ಕಸವನ್ನು ಕಂಪಲ್ಸರಿ ಕೊಡಲೇಬೇಕೆಂದು BSWML ಎಚ್ಚರಿಕೆ ನೀಡಿದೆ.
ಯಾಕೆ ಈ ಕ್ರಮ?
ಇನ್ನು ಮನೆಯಲ್ಲಿಟ್ಟುಕೊಂಡರೆ ಯಾಕೆ ದಂಡ ಹಾಕುತ್ತಾರೆ? ಮನೆಯಲ್ಲಿ ಕಸ ಇದೆ ಎಂದು ಇಲಾಖೆಯವರಿಗೆ ಹೇಗೆ ಗೊತ್ತಾಗುತ್ತೆ? ಎಂಬ ಪ್ರಶ್ನೆ ಬರಬಹುದು. ಆದರೆ ಇದಕ್ಕೆ ಕಾರಣ ಇದೆ.. ಅದೇನೆಂದರೆ ಯಾರು ಬೆಂಗಳೂರು ಅಥಾರಿಟಿ ಗಾಡಿಗಳಿಗೆ ಕಸ ಹಾಕುವುದಿಲ್ಲವೋ ಅವರು ಹೊರಗಡೆ ಹೋಗಿ ಬೀದಿಬದಿ ಕಸ ಎಸೆಯುತ್ತಾರೆ ಎಂದರ್ಥ. ಆದ್ದರಿಂದ ಅವರನ್ನು ಬಿಎಸ್‌ಡಬ್ಲೂಎಂಎಲ್ ಅಧಿಕಾರಿಗಳು ಗಮನಿಸುತ್ತಿರುತ್ತಾರೆ. ಅಂಥವರ ವಿರುದ್ಧ ದಂಡದ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಮಾತನಾಡಿರುವ ಘನತ್ಯಾಜ್ಯ ನಿರ್ವಹಣಾ ನಿಯಮಿತ ಸಂಸ್ಥೆಯ ಕಾರ್ಯ ನಿರ್ವಾಹಕ ಅಧಿಕಾರಿ ಕರೀಗೌಡ ಮಾತನಾಡಿದ್ದು, ಯಾರು ಪ್ರತಿದಿನ ವಾಹನಗಳಿಗೆ ಕಸ ಹಾಕದೇ, ಹೊರಗಡೆ ಎಸೆಯುತ್ತಾರೆಯೋ ಅಂಥವರನ್ನು ಗುರುತಿಸಿ ದಂಡ ಹಾಕಲಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ತ್ಯಾಜ್ಯ ವಿಲೇವಾರಿ ವೇಳೆ ಸಾರ್ವಜನಿಕರು ಹಸಿ ಮತ್ತು ಒಣ ಕಸ ವರ್ಗೀಕರಿಸುವುದಿಲ್ಲ. ಆದ್ರೆ ಕಡ್ಡಾಯವಾಗಿ ಈ ಕೆಲಸ ಮಾಡಲೇಬೇಕು. ಅಲ್ಲದೇ ಮನೆಯಲ್ಲಿ ಯಾರು ಕಸ ಇಟ್ಟುಕೊಂಡಿದ್ದಾರೆ ಎಂಬುದನ್ನು ನಮ್ಮ ಅಧಿಕಾರಿಗಳು ಗಮನಿಸುತ್ತಾರೆ. ಒಂದು ವೇಳೆ ಕಸ ಹಾಗೆಯೇ ಇಟ್ಟುಕೊಂಡರೆ ಅವರ ವಿರುದ್ಧ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ ಮತ್ತು ದಂಡ ವಿಧಿಸಲಾಗುತ್ತದೆ ಎಂದು ಹೇಳಿದ್ದಾರೆ.


Click it and Unblock the Notifications