ಮುಂಬೈ, ನವೆಂಬರ್ 03: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಬುಧವಾರದಂದು ಮಾರುಕಟ್ಟೆ ಚೇತರಿಕೆ ಕಂಡಿದೆ. ಮುಂಬೈ ಷೇರು ಮಾರುಕಟ್ಟೆಯಲ್ಲಿ ಪ್ರಮುಖ ಷೇರುಗಳು ಹಸಿರು ಟ್ಯಾಗ್ ಪಡೆದು ಸುಸ್ಥಿತಿಯಲ್ಲಿವೆ. ಪ್ರಮುಖವಾಗಿ ಸ್ಟೇಟ್ ಆಫ್ ಇಂಡಿಯಾ ಹಾಗೂ ಭಾರ್ತಿ ಏರ್ಟೆಲ್ ಷೇರುಗಳು ಉತ್ತಮ ಆರಂಭ ಪಡೆದುಕೊಂಡಿವೆ. ಹಿಂದೂಸ್ತಾನ್ ಯೂನಿಲಿವರ್ ಹೊರತುಪಡಿಸಿ ಬಹುತೇಕ ಎಲ್ಲಾ ಸಂಸ್ಥೆಗಳು ಆರಂಭಿಕ ಮುನ್ನಡೆ ಪಡೆದುಕೊಂಡಿವೆ. ಮುಖ್ಯವಾಗಿ ಐಟಿ, ಟೆಕ್ ಷೇರುಗಳು ಚೇತರಿಕೆ ಕಂಡಿವೆ.
ಬುಧವಾರ(ನ.3) ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 250 ಸೂಚ್ಯಂಕ ಏರಿಕೆಯೊಂದಿಗೆ ಆರಂಭವಾಗಿದ್ದು, 60,366.59 ಸೂಚ್ಯಂಕಕ್ಕೆ ತಲುಪಿದೆ. ಅದೇ ನಿಫ್ಟಿಯಲ್ಲೂ 50 ಸೂಚ್ಯಂಕ ಏರಿಕೆಯೊಂದಿಗೆ 17,950 ಅಂಶಕ್ಕೆ ತಲುಪಿದೆ.
ಕಳೆದ ವಾರ ಷೇರು ಮಾರುಕಟ್ಟೆಯಲ್ಲಿ ಸತತ ಕುಸಿತವಾಗಿತ್ತು, ಒಂದು ದಿನ ಸಾವಿರಕ್ಕೂ ಅಧಿಕ ಸೂಚ್ಯಂಕ ಕೆಳಗಿಳಿದಿತ್ತು, ಸೋಮವಾರದಂದು ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 357.85 ಸೂಚ್ಯಂಕ ಅಥವಾ ಶೇ.0.60 ಏರಿಕೆಯೊಂದಿಗೆ ಆರಂಭವಾಗಿದ್ದು, 59,577.48 ಸೂಚ್ಯಂಕಕ್ಕೆ ತಲುಪಿದೆ. ನಿಫ್ಟಿಯಲ್ಲೂ 135 ಸೂಚ್ಯಂಕ ಅಥವಾ 0.76ರ ಏರಿಕೆಯೊಂದಿಗೆ ಮಾರುಕಟ್ಟೆ ಆರಂಭವಾಗಿದೆ. ಇದರೊಂದಿಗೆ ನಿಫ್ಟಿ ಸೂಚ್ಯಂಕವು 17,806.40ಗೆ ತಲುಪಿದೆ.

ಮಿಕ್ಕಂತೆ ಭಾರ್ತಿ ಏರ್ ಟೆಲ್, ಇಂಡಿಯನ್ ಆಯಿಲ್ ಕಾರ್ಪೊರೇಷನ್, ವೋಡಾಫೋನ್ ಐಡಿಯಾ ಲಿಮಿಟೆಡ್, ಭಾರ್ತಿ ಏರ್ ಟೆಲ್ ಲಿಮಿಟೆಡ್, ಬ್ಯಾಂಕ್ ಆಫ್ ಇಂಡಿಯಾ, ಯೆಸ್ ಬ್ಯಾಂಕ್ ಲಿಮಿಟೆಡ್, ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಷೇರುಗಳು ಮೇಲಕ್ಕೇರಿವೆ. ಟಾಟಾ ಪವರ್, ಟಾಟಾ ಮೋಟರ್ಸ್ ಇಳಿಕೆ ಕಂಡಿವೆ.
ತ್ರೈಮಾಸಿಕ ವರದಿ ಪ್ರಕಟ: ಎಸ್ ಬಿಐ, ಐಷರ್ ಮೋಟರ್ಸ್, ಬಾಟಾ ಇಂಡಿಯಾ, ಎಬಿಎಫ್ ಆರ್ ಎಲ್, ಫೈಜರ್, ಗುಜರಾತ್ ಸ್ಟೇಟ್ ಪೆಟ್ರೋನೆಟ್, ಯುಫೆಕ್ಸ್, ಗ್ರಿಂಡ್ ವೆಲ್ ನಾರ್ಟನ್, ಗುಜರಾತ್ ಅಲ್ಕಾಲಿಸ್ ಅಂಡ್ ಕೆಮಿಕಲ್ಸ್ ತ್ರೈಮಾಸಿಕ ವರದಿ ಹೊರ ಬರಲಿದೆ.
ಏಷ್ಯಾದ ಮಾರುಕಟ್ಟೆ ಮಂಗಳವಾರ ಉತ್ತಮವಾಗಿರಲಿಲ್ಲ. ಬುಧವಾರದಂದು ಜಪಾನ್ ಷೇರುಪೇಟೆಗೆ ರಜೆ ಇದೆ. ಮಂಗಳವಾರದಂದು ನಿಕ್ಕಿ ಶೇ 0.2ರಷ್ಟು ಕುಸಿತ ಹಾಗೂ ಆಸ್ಟ್ರೇಲಿಯಾದ ಎಸ್ ಅಂಡ್ ಪಿ/ಎಎಸ್ ಎಕ್ಸ್ ಶೇ 0.6 ರಷ್ಟು ಇಳಿಕೆಯಾಗಿದೆ. ಆಸ್ಟ್ರೇಲಿಯಾ, ಇಂಗ್ಲೆಂಡ್ ಸೆಂಟ್ರಲ್ ಬ್ಯಾಂಕ್ ಸಭೆ, ನಿರ್ಣಯದ ನಿರೀಕ್ಷೆಯಲ್ಲಿರುವ ಮಾರುಕಟ್ಟೆಗಳು ಇನ್ನೂ ಚೇತರಿಕೆ ಕಂಡಿರಲಿಲ್ಲ.
ನವೆಂಬರ್ ಮೊದಲ ದಿನದ ಚೇತರಿಕೆ ಬಳಿಕ ಮತ್ತೆ ಮಂಗಳವಾರ ಷೇರು ಮಾರುಕಟ್ಟೆಯಲ್ಲಿ ಕುಸಿತವಾಗಿದೆ. ಕಳೆದ ಒಂದು ವಾರದಿಂದ ಭಾರತೀಯ ಶೇರು ಮಾರುಕಟ್ಟೆಯಲ್ಲಿ ಕುಸಿತ ಕಾಣಿಸುತ್ತಿದ್ದು, ಇಂದು ಕೂಡ ನಿಫ್ಟಿ ಹಾಗೂ ಸೆನ್ಸೆಕ್ಸ್‌ನಲ್ಲಿ ಇಳಿಕೆ ಕಂಡುಬಂದಿದೆ.ನವೆಂಬರ್ ಮೊದಲ ದಿನದ ಚೇತರಿಕೆ ಬಳಿಕ ಮತ್ತೆ ಮಂಗಳವಾರ ಷೇರು ಮಾರುಕಟ್ಟೆಯಲ್ಲಿ ಕುಸಿತವಾಗಿತ್ತು. ಕಳೆದ ಒಂದು ವಾರದಿಂದ ಭಾರತೀಯ ಶೇರು ಮಾರುಕಟ್ಟೆಯಲ್ಲಿ ಕುಸಿತ ಕಾಣಿಸುತ್ತಿದ್ದು, ಇಂದು ಕೂಡ ನಿಫ್ಟಿ ಹಾಗೂ ಸೆನ್ಸೆಕ್ಸ್‌ನಲ್ಲಿ ಇಳಿಕೆ ಕಂಡುಬಂದಿದೆ.
ದಿನ ಅಂತ್ಯದ ವಹಿವಾಟಿಗೆ ಸೆನ್ಸೆಕ್ಸ್ ಸೂಚ್ಯಂಕವು 190.40 ಇಳಕೆ ಅಂದರೆ ಶೇ.0.18 ಇಳಿಕೆಯೊಂದಿಗೆ 60,029.06ಕ್ಕೆ ತಲುಪಿದೆ ಹಾಗೆಯೇ ನಿಫ್ಟಿಯಲ್ಲಿಯೂ 40.7 ಸೂಚ್ಯಂಕದ ಇಳಿಕೆಯೊಂದಿಗೆ ಅಂದರೆ ಶೇ.02.3 ಇಳಿಕೆಯಲ್ಲಿ 17,889ಕ್ಕೆ ಬಂದು ತಲುಪಿದೆ.
ಲೋಹ, ತೈಲ ಹಾಗೂ ಕಮಾಡಿಟಿ ಸ್ಟಾಕ್ಸ್‌ನಲ್ಲಿ ಇಳಿಕೆಯಾಗಿರುವುದು ಈ ಷೇರು ಮಾರುಕಟ್ಟೆಯಲ್ಲಿನ ಕುಸಿತಕ್ಕೆ ಕಾರಣವಾಗಿದೆ.
ಸೆನ್ಸೆಕ್ಸ್‌ನಲ್ಲಿ ಬುಧವಾರದ ವಹಿವಾಟಿನಲ್ಲಿಯೂ ಸಾಕಷ್ಟು ಇಳಿಕೆ ಕಂಡುಬಂದಿದೆ. ದಿನದ ಆರಂಭದಲ್ಲಿ ಚೇತರಿಕೆ ಕಾಣಿಸಿಕೊಂಡರೂ ಕೂಡ ಬಳಿಕ ದಿನದಂತ್ಯದ ವಹಿವಾಟಿನಲ್ಲಿ 257.14 ಸೂಚ್ಯಂಕ ಇಳಿಕೆಯಾಗಿ 59,771.92ಕ್ಕೆ ತಲುಪಿದೆ.
ಅಂದರೆ ಇವತ್ತಿನ ವಹಿವಾಟಿನಲ್ಲಿ ಶೇ.0.43ರಷ್ಟು ಇಳಿಕೆಯಾಗಿದೆ. ನಿಫ್ಟಿ 50 ಸೂಚ್ಯಂಕದಲ್ಲೂ ಕೂಡ ಬುಧವಾರದ ವಹಿವಾಟಿನಲ್ಲಿ ಸಣ್ಣ ಪ್ರಮಾಣದ ಇಳಿಕೆಯಾಗಿದ್ದು, ಶೇ.0.33ಇಳಿಕೆಯೊಂದಿಗೆ 59.75 ಸೂಚ್ಯಂಕ ಕುಸಿತಕಂಡಿದೆ.
ಇದರೊಂದಿಗೆ ದಿನದಂತ್ಯದ ವಹಿವಾಟಿನಲ್ಲಿ ನಿಫ್ಟಿಯು 18,029.20 ಅಂಕಕ್ಕೆ ಬಂದು ತಲುಪಿದೆ. ಈ ವಾರದಲ್ಲಿ ಮಂಗಳವಾರ ಬುಧವಾರ ಕೂಡ ಷೇರು ಮಾರುಕಟ್ಟೆಯಲ್ಲಿ ಇಳಿಕೆ ಕಂಡುಬಂದಿತ್ತು. ಸೋಮವಾರ ಮಾತ್ರ ಅಲ್ಪ ಪ್ರಮಾಣದ ಏರಿಕೆಯಾಗಿ ಹೂಡಿಕೆದಾರರಲ್ಲಿ ಸಂತಸ ಮೂಡಿಸಿತ್ತು.


Click it and Unblock the Notifications