For Quick Alerts
ALLOW NOTIFICATIONS  
For Daily Alerts

ನವೆಂಬರ್ 17: ಆರಂಭಿಕ ಕುಸಿತ ಕಂಡ ಭಾರತೀಯ ಷೇರು ಪೇಟೆ ಚಿತ್ರಣ

|

ಭಾರತೀಯ ಷೇರು ಮಾರುಕಟ್ಟೆಯು ಬುಧವಾರ ಆರಂಭಿಕ ಕುಸಿತವನ್ನು ಕಂಡಿದೆ. 270 ಅಂಕ ಕುಸಿದ ಸೆನ್ಸೆಕ್ಸ್ ಷೇರು ಮಾರುಕಟ್ಟೆಯು ನಂತರದ ಮೂರು ಗಂಟೆಗಳಲ್ಲಿ ಚೇತರಿಸಿಕೊಂಡಿದೆ. ನಿಫ್ಟಿ ಮಾರುಕಟ್ಟೆಯಲ್ಲಿ 17949ರ ಆಸುಪಾಸಿನಲ್ಲಿ ವಹಿವಾಟು ಮುಂದುವರಿದಿದೆ.

 

ಬುಧವಾರ ಮಧ್ಯಾಹ್ನದ ವೇಳೆಗೆ ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ 125.66 ಅಂಕಗಳು ಅಥವಾ ಶೇ.0.20ರಷ್ಟು ಇಳಿಕೆಯೊಂದಿಗೆ 60,200ರಲ್ಲಿ ವಹಿವಾಟು ನಡೆಸಿದೆ. ಅದೇ ರೀತಿ ನಿಫ್ಟಿ 53.40 ಅಥವಾ ಶೇ.-0.30ರಷ್ಟು ಇಳಿಕೆಯೊಂದಿಗೆ 17,945.80ರಲ್ಲಿ ವಹಿವಾಟು ಮುಂದುವರಿಸಿದೆ. ಮಂಗಳವಾರ ಮಾರುಕಟ್ಟೆಯ ಅಂತ್ಯದ ವೇಳೆಗೆ ಸೆನ್ಸೆಕ್ಸ್ 60.322.37ಕ್ಕೆ ತಲುಪಿತ್ತು.

ನ.17: ಸ್ಥಿರತೆ ಕಾಯ್ದುಕೊಂಡ ಇಂಧನ ದರ; ಪ್ರಮುಖ ನಗರಗಳಲ್ಲಿ ಬೆಲೆಯಷ್ಟು?

ಹೂಡಿಕೆದಾರರು ಪ್ರಮುಖ ಆರ್ಥಿಕ ಮತ್ತು ಹಣದುಬ್ಬರದ ಅಂಕಿ-ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಂಗಳವಾರ ವಾಲ್ ಸ್ಟ್ರೀಟ್‌ನಲ್ಲಿನ ಲಾಭಗಳ ಹೊರತಾಗಿಯೂ ಏಷ್ಯನ್ ಸ್ಟಾಕ್‌ಗಳು ದುರ್ಬಲ ಟಿಪ್ಪಣಿಯಲ್ಲಿ ವಹಿವಾಟು ಆರಂಭಿಸಿದವು. ಜಪಾನ್‌ನ ಹೊರಗಿನ ಏಷ್ಯಾ-ಪೆಸಿಫಿಕ್ ಷೇರುಗಳ ಎಂಎಸ್‌ಸಿಐ ಸೂಚ್ಯಂಕವು ಶೇಕಡಾ 0.55 ರಷ್ಟು ಕಡಿಮೆಯಾಗಿದೆ. ಜಪಾನ್‌ನ ನಿಕ್ಕಿ 0.47% ಕುಸಿದಿದೆ ದಕ್ಷಿಣ ಕೊರಿಯಾದ ಕೋಸ್ಪಿ 0.85% ಆಸ್ಟ್ರೇಲಿಯದ ಎಎಸ್‌ಎಕ್ಸ್ 200 ಬ್ಲೆಡ್ 0.77% ಚೀನಾದ ಶಾಂಘೈ 0.77% ಹಾಂಗ್ 3% ಕುಸಿದಿದೆ.

ನ.17ರಂದು ಆರಂಭಿಕ ಕುಸಿತ ಕಂಡ ಭಾರತೀಯ ಷೇರು ಪೇಟೆ ಚಿತ್ರಣ

ಭಾರತೀಯ ಷೇರು ಸೂಚ್ಯಂಕ(ಬಿಎಸ್ಇ) ಹಾಗೂ ರಾಷ್ಟ್ರೀಯ ಷೇರು ಸೂಚ್ಯಂಕ(ಎನ್ಎಸ್ಇ) ಅಂಕಗಳು ಏರಿಳಿತದ ಜೊತೆಗೆ ಪ್ರಸ್ತುತ ಭಾರತೀಯ ಷೇರು ಮಾರುಕಟ್ಟೆ ಚಿತ್ರಣ ಹಾಗೂ ಪ್ರಮುಖ ಷೇರುಗಳ ಏರಿಳಿತ ಹೇಗಿದೆ ಎಂಬುದರ ಕುರಿತು ಒಂದು ವರದಿ ಇಲ್ಲಿದೆ ಓದಿ.

ಷೇರು ಮಾರುಕಟ್ಟೆಯ ಏರಿಕೆಯಾದ ಟಾಪ್-5 ಕಂಪನಿ:

ರಾಷ್ಟ್ರೀಯ ಷೇರು ಮಾರುಕಟ್ಟೆ(NSE)ಯು ಬುಧವಾರ 54 ಅಂಕಗಳ ಇಳಿಕೆಯೊಂದಿಗೆ ಆರಂಭಗೊಂಡಿದ್ದರೂ ಕೆಲವು ಕಂಪನಿಗಳ ಷೇರು ದರದಲ್ಲಿ ಏರಿಕೆ ಕಂಡು ಬಂದಿದೆ. ಟಾಟಾ ಮೋಟಾರ್ಸ್, ಏಷಿಯನ್ ಪೇಂಟ್ಸ್, ಎಸ್ ಬಿಐ ಲೈಫ್, ಎನ್ ಟಿಪಿಸಿ, ಟಾಟಾ ಕಂಸ್ಯುಮರ್ ಷೇರುಗಳ ದರದಲ್ಲಿ ಅತಿಹೆಚ್ಚು ಏರಿಕೆಯಾಗಿದೆ.

ಟಾಟಾ ಮೋಟಾರ್ಸ್ ಷೇರು ದರದಲ್ಲಿ ಶೇ.2.76ರಷ್ಟು ಏರಿಕೆಯಾಗಿದ್ದು, ಷೇರು ದರ 533.40ರಷ್ಟಿದೆ. ಏಷಿಯನ್ ಪೇಂಟ್ಸ್ ಕಂಪನಿ ಷೇರು ದರ 3,213.50 ರೂಪಾಯಿ ಆಗಿದ್ದು, ಶೇ.1.96ರಷ್ಟು ಏರಿಕೆಯಾಗಿದೆ. ಎಸ್ ಬಿಐ ಲೈಫ್ ಷೇರು ಮೌಲ್ಯ 1170.80 ರೂಪಾಯಿ ಆಗಿದ್ದು, ಶೇ.1.54ರಷ್ಟು ಏರಿಕೆಯಾಗಿದೆ. ಎನ್ ಟಿಪಿಸಿ ಷೇರು ಬೆಲೆಯು 136.30 ರೂಪಾಯಿ ಆಗಿದ್ದು, ಶೇ.1.49ರಷ್ಟು ಏರಿಕೆ ಕಂಡು ಬಂದಿದೆ. ಟಾಟಾ ಕಂಸ್ಯುಮರ್ ಷೇರು ಮೌಲ್ಯವು 845 ರೂಪಾಯಿ ಆಗಿದ್ದು, ಶೇ.1.39ರಷ್ಟು ಏರಿಕೆ ದಾಖಲಿಸಿದೆ.

 

ಅತಿಹೆಚ್ಚು ಇಳಿಕೆ ದಾಖಲಿಸಿದ ಕಂಪನಿ ಷೇರು ದರ:

ರಾಷ್ಟ್ರೀಯ ಷೇರು ಸ್ಯೂಚಂಕ ನಿಫ್ಟಿಯಲ್ಲಿ ಐದು ಕಂಪನಿಗಳು ಅತಿಹೆಚ್ಚು ಏರಿಕೆ ಕಂಡಿದ್ದರೆ, ಪಾತಾಳಕ್ಕೆ ಕುಸಿತದ ಟಾಪ್-5 ಷೇರುಗಳು ಮತ್ತು ಅದರ ಮೌಲ್ಯವನ್ನು ತಿಳಿದುಕೊಳ್ಳಬೇಕಿದೆ. ಬುಧವಾರ ಮಾರುಕಟ್ಟೆ ಆರಂಭದ ವೇಳೆಗೆ ಹೆಚ್ ಡಿಎಫ್ ಸಿ, ರಿಲಾಯನ್ಸ್, ಯುಪಿಎಲ್, ಡಾ. ರೆಡ್ಡೀಸ್, ಹೆಚ್ ಡಿಎಫ್ ಸಿ ಬ್ಯಾಂಕ್ ಷೇರು ಮೌಲ್ಯದಲ್ಲಿ ಅತಿಹೆಚ್ಚು ಕುಸಿತ ಕಂಡು ಬಂದಿದೆ.

ಹೆಚ್ ಡಿಎಫ್ ಸಿ ಕಂಪನಿ ಷೇರು ಮೌಲ್ಯ 2934.45ರಷ್ಟಾಗಿದ್ದು, ಶೇ.1.38ರಷ್ಟು ಇಳಿಕೆಯಾಗಿದೆ. ರಿಲಾಯನ್ಸ್ ಷೇರಿನಲ್ಲಿ ಶೇ.1.31ರಷ್ಟು ಇಳಿಕೆಯಾಗಿದ್ದು, ಷೇರು ದರ 2484.80 ರೂಪಾಯಿ ಇದೆ. ಯುಪಿಎಲ್ ಷೇರು ಮೌಲ್ಯ 771.35 ರೂಪಾಯಿ ಆಗಿದ್ದು, ಶೇ.1.12ರಷ್ಟು ಇಳಿಕೆಯಾಗಿದೆ. ಡಾ ರೆಡ್ಡೀಸ್ ಷೇರು ಬೆಲೆ 4769.10ರಷ್ಟಿದ್ದು, ಶೇ.1.01ರಷ್ಟು ಇಳಿಕೆಯಾಗಿದೆ. ಹೆಚ್ ಡಿಎಫ್ ಸಿ ಬ್ಯಾಂಕ್ ಷೇರಿನಲ್ಲಿ ಶೇ.0.90ರಷ್ಟು ಇಳಿಕೆಯಾಗಿದ್ದು, ಷೇರು ಬೆಲೆ 1534.05ರಷ್ಟಿದೆ.

ರೂಪಾಯಿ ಮೌಲ್ಯದ ಎದುರು ಡಾಲರ್ ಏರಿಳಿತ

ದೇಶೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಗಮನಾರ್ಹವಾದ ಮಂದಗತಿ ಪ್ರವೃತ್ತಿಯ ಹೊರತಾಗಿ ಮಂಗಳವಾರ ಡಾಲರ್ ವಿರುದ್ಧ ರೂಪಾಯಿ 9 ಪೈಸೆ ಏರಿಕೆಯಾಗಿ 74.37ಕ್ಕೆ ಆರಂಭಿಕ ನಷ್ಟದಲ್ಲಿ ಕೊನೆಯಾಗಿದೆ. ದೇಶೀಯ ಷೇರುಗಳಲ್ಲಿನ ದೃಢವಾದ ಪ್ರವೃತ್ತಿ ಮತ್ತು ಕಚ್ಚಾ ತೈಲ ಬೆಲೆಗಳನ್ನು ಕಡಿಮೆಗೊಳಿಸುವುದು ಹೂಡಿಕೆದಾರರಲ್ಲಿ ಹೊಸ ಆಸಕ್ತಿ ಮೂಡಿಸಿದೆ.

English summary

Nov 17 Stock Market Picture: Sensex Hits 270 Points Fall Down and Starts With 60050, Nifty Around 17900

Nov 17th Stock Market Picture: Sensex Hits 270 Points Down and Starts With 60050, Nifty Around 17900 Points.
Story first published: Wednesday, November 17, 2021, 12:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X