For Quick Alerts
ALLOW NOTIFICATIONS  
For Daily Alerts

ನವೆಂಬರ್ 29 ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ 464, ನಿಫ್ಟಿ 120 ಅಂಕ ಏರಿಕೆ

|

ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡು ಬಂದಿರುವುದರ ನಡುವೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಚೇತರಿಕೆ ಕಂಡು ಬಂದಿದೆ. ಸೋಮವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಏರಿಳಿತ ಹೇಗಿದೆ. ಭಾರತೀಯ ಷೇರು ಸೂಚ್ಯಂಕ(ಬಿಎಸ್ಇ) ಹಾಗೂ ರಾಷ್ಟ್ರೀಯ ಷೇರು ಸೂಚ್ಯಂಕ(ಎನ್ಎಸ್ಇ) ಅಂಕಗಳು ಕುರಿತು ತಿಳಿದುಕೊಳ್ಳೋಣ.

ಸೋಮವಾರ ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ 464 ಅಂಕಗಳು ಅಥವಾ ಶೇ.0.81ರಷ್ಟು ಏರಿಕೆಯೊಂದಿಗೆ 57,568ರಲ್ಲಿ ವಹಿವಾಟು ನಡೆಸುತ್ತಿದೆ. ಅದೇ ರೀತಿ ನಿಫ್ಟಿ ಕೂಡಾ 126 ಅಥವಾ ಶೇ.0.66ರಷ್ಟು ಏರಿಕೆಯೊಂದಿಗೆ 17,137ರ ಅಂಕಿ-ಅಂಶಗಳಲ್ಲಿ ವಹಿವಾಟು ನಡೆಸುತ್ತಿದೆ.

ಕೋವಿಡ್‌ ಹೊಸ ರೂಪಾಂತರ ಭೀತಿ: ಸೆನ್ಸೆಕ್ಸ್ ಪಾತಾಳಕ್ಕೆ ಕುಸಿತಕೋವಿಡ್‌ ಹೊಸ ರೂಪಾಂತರ ಭೀತಿ: ಸೆನ್ಸೆಕ್ಸ್ ಪಾತಾಳಕ್ಕೆ ಕುಸಿತ

SGX ನಿಫ್ಟಿ ಫ್ಯೂಚರ್ಸ್ ಆರಂಭಿಕ ವಹಿವಾಟಿನಲ್ಲಿ 17,089.5ಕ್ಕೆ 46 ಪಾಯಿಂಟ್‌ಗಳು ಅಥವಾ ಶೇ.0.3ರಷ್ಟು ಕಡಿಮೆಯಾಗಿದೆ. ಇದು ಶುಕ್ರವಾರದ ವಹಿವಾಟಿನಲ್ಲಿ ಭಾರತೀಯ ಮಾನದಂಡಗಳ ಪ್ರಕಾರ ಮಾರುಕಟ್ಟೆಯಲ್ಲು ಏರಿಕೆಯೊೊಂದಿಗೆ ಆರಂಭವಾಗುವ ಲಕ್ಷಣವನ್ನೇ ಸೂಚಿಸಿತ್ತು. ಜಪಾನ್, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾದಲ್ಲಿ ಷೇರುಗಳ ಬೆಲೆ ಇಳಿಮುಖವಾಗಿತ್ತು. S&P 500 ಮತ್ತು Nasdaq 100 ಒಪ್ಪಂದ ಹೆಚ್ಚಾಗಿದ್ದು, ತೈಲದ ಬೆಲೆಯು ಬ್ಯಾರೆಲ್‌ಗೆ $70 ಕ್ಕಿಂತ ಹೆಚ್ಚಾಗಿತ್ತು. ಇದರ ಮಧ್ಯೆ ಪ್ರಸ್ತುತ ಭಾರತೀಯ ಷೇರು ಮಾರುಕಟ್ಟೆ ಚಿತ್ರಣ ಹಾಗೂ ಪ್ರಮುಖ ಷೇರುಗಳ ಏರಿಳಿತ ಹೇಗಿದೆ ಎಂಬುದರ ಕುರಿತು ಒಂದು ವರದಿ ಇಲ್ಲಿದೆ ಓದಿ.

ನ.29 ಮಧ್ಯಾಹ್ನದ ವೇಳೆಗೆ ಸೆನ್ಸೆಕ್ಸ್ 464, ನಿಫ್ಟಿ 120 ಅಂಕ ಏರಿಕೆ

ಷೇರು ಮಾರುಕಟ್ಟೆಯ ಏರಿಕೆಯಾದ ಟಾಪ್-5 ಕಂಪನಿ:

ಸೆನ್ಸೆಕ್ಸ್ 476.32 ಪಾಯಿಂಟ್ ಅಥವಾ 0.83% ಏರಿಕೆಯಾಗಿ 57583.47 ನಲ್ಲಿ, ಮತ್ತು ನಿಫ್ಟಿ 120.90 ಪಾಯಿಂಟ್ ಅಥವಾ ಶೇ.0.71ರಷ್ಟು ಏರಿಕೆಯಾಗಿ 17147.40ಕ್ಕೆ ತಲುಪಿದೆ. ಈ ಹಂತದಲ್ಲಿ ಎಚ್‌ಸಿಎಲ್ ಟೆಕ್, ಕೊಟಕ್ ಮಹೀಂದ್ರಾ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಟಾಪ್ ಗೇನರ್ ಆಗಿದ್ದರೆ, ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಮೋಟಾರ್ಸ್ ಮತ್ತು ಟಾಟಾ ಪವರ್ ಹೆಚ್ಚು ಸಕ್ರಿಯ ಷೇರುಗಳಾಗಿವೆ.

ಮಾರುಕಟ್ಟೆ ಆರಂಭದಲ್ಲಿ ಷೇರುಗಳ ಏರಿಳಿತ:

ಸೋಮವಾರ ಭಾರತೀಯ ಷೇರು ಮಾರುಕಟ್ಟೆ ಆರಂಭಿಕ ಸಮಯದಲ್ಲಿ ಕೆಲವು ಷೇರುಗಳು ಅತಿಹೆಚ್ಚು ಏರಿಕೆಯಾಗಿದ್ದರೆ, ಕೆಲವು ಷೇರುಗಳ ಮೌಲ್ಯ ಪಾತಾಳಕ್ಕೆ ಕುಸಿದಿತ್ತು. ಈ ಪೈಕಿ ಇಂಡಸ್ಟ್ರಿಯಲ್ ಬ್ಯಾಂಕ್ ಷೇರು, ಡಾ.ರೆಡ್ಡೀಸ್ ಷೇರು, ಸನ್ ಫಾರ್ಮಾ ಷೇರು ಮತ್ತು ಭಾರತೀ ಏರ್ ಟೆಲ್ ಷೇರುಗಳ ಮೌಲ್ಯ ಏರಿಕೆಯಾಗಿತ್ತು. ಅದೇ ರೀತಿ ಅದಾನಿ ಪೋರ್ಟಲ್, ಟಾಟಾ ಮೋಟಾರ್ಸ್, ಹೀರೋ ಮೋಟೋ ಕಂಪನಿ, ಮಹೀಂದ್ರಾ ಆಂಡ್ ಮಹೀಂದ್ರಾ ಮತ್ತು ಶ್ರೀ ಸಿಮೆಂಟ್ ಕಂಪನಿ ಷೇರುಗಳ ಮೌಲ್ಯ ಕುಸಿತ ಕಂಡಿವೆ.

ರೂಪಾಯಿ ಮೌಲ್ಯದ ಎದುರು ಡಾಲರ್ ಏರಿಳಿತ

ಸೋಮವಾರದ ಯುಎಸ್ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿದೆ. ಕಳೆದ ಮಾರುಕಟ್ಟೆ ಅಂತ್ಯದ ವೇಳೆಗೆ ಭಾರತೀಯ ರೂಪಾಯಿ ಎದುರಿಗೆ ಯುಎಸ್ ಡಾಲರ್ ಬೆಲೆಯು 74.88 ರೂಪಾಯಿ ಇತ್ತು. ಆದರೆ ಮಧ್ಯಾಹ್ನದ ವೇಳೆಗೆ ರೂಪಾಯಿ ಮೌಲ್ಯದಲ್ಲಿ 19 ಪೈಸೆ ಇಳಿಕೆಯಾಗಿದ್ದು, 75.07ಕ್ಕೆ ತಲುಪಿದೆ.

English summary

Nov 29 Stock Market Picture: Sensex Hits 440 Points Rise and Starts With 57548, Nifty Around 17137

Nov 29th Stock Market Picture: Sensex Hits 440 Points Down and Starts With 57548, Nifty Around 17137 Points.
Story first published: Monday, November 29, 2021, 14:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X