For Quick Alerts
ALLOW NOTIFICATIONS  
For Daily Alerts

ತಾಂತ್ರಿಕ ತೊಂದರೆ: ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ವಹಿವಾಟು ಸ್ಥಗಿತ

|

ತಾಂತ್ರಿಕ ತೊಂದರೆಯಿಂದಾಗಿ ರಾಷ್ಟ್ರೀಯ ಷೇರುಪೇಟೆ ಎನ್‌ಎಸ್‌ಇ ಸೂಚ್ಯಂಕಗಳ ಡೇಟಾ ಫೀಡ್ ಸ್ಥಗಿತಗೊಂಡಿದೆ. ಎನ್ಎಸ್ಇ ಎಫ್ & ಒ ಮಾರುಕಟ್ಟೆಯನ್ನು ಬೆಳಿಗ್ಗೆ 11:40 ಕ್ಕೆ ಮತ್ತು ನಗದು ಮಾರುಕಟ್ಟೆಯನ್ನು ಬೆಳಿಗ್ಗೆ 11:43 ಕ್ಕೆ ಮುಚ್ಚಿದೆ. ಇನ್ನು ಮಾರುಕಟ್ಟೆ ಮರು ತೆರೆಯುವಿಕೆಯ ಕುರಿತು ನಂತರ ತಿಳಿಸಲಾಗುವುದು ಎಂದು ಎನ್ಎಸ್ಇ ಹೇಳಿದೆ.

"ಎನ್‌ಎಸ್‌ಇಯಲ್ಲಿ ಎಲ್ಲೆಡೆ ಬ್ರೋಕರ್‌ಗಳಾದ್ಯಂತ ವ್ಯಾಪಾರವನ್ನು ನಿಲ್ಲಿಸಲಾಗಿದೆ. ಅದು ಮತ್ತೆ ಆನ್‌ಲೈನ್‌ಗೆ ಹಿಂತಿರುಗುವುದನ್ನು ನಾವು ಎದುರು ನೋಡುತ್ತಿದ್ದೇವೆ. ಈಕ್ವಿಟಿ ಆರ್ಡರ್‌ಗಳಿಗಾಗಿ, ನೀವು ಬಿಎಸ್‌ಇಯನ್ನು ಬಳಸಬಹುದು" ಎಂದು ಜೆರೋಧಾ ಟ್ವೀಟ್‌ನಲ್ಲಿ ತಿಳಿಸಿದೆ.

ತಾಂತ್ರಿಕ ತೊಂದರೆ: ಎನ್‌ಎಸ್‌ಇ ವಹಿವಾಟು ಸ್ಥಗಿತ

"ಎನ್‌ಎಸ್‌ಇ ಸೂಚ್ಯಂಕಗಳಿಗೆ (ನಿಫ್ಟಿ 50, ನಿಫ್ಟಿ ಬ್ಯಾಂಕ್ ಮತ್ತು ಇತರರು) ಬ್ರೋಕರ್‌ಗಳಾದ್ಯಂತ ಲೈವ್ ಟಿಕ್‌ಗಳೊಂದಿಗೆ ಸಮಸ್ಯೆ ಇದೆ. ಇದನ್ನು ಸರಿಪಡಿಸಲು ನಾವು ಎನ್‌ಎಸ್‌ಇಯೊಂದಿಗೆ ಸಂಪರ್ಕದಲ್ಲಿದ್ದೇವೆ" ಎಂದು ಬ್ರೋಕರೇಜ್ ಸಂಸ್ಥೆ ಜೆರೋಧಾ ಟ್ವೀಟ್‌ನಲ್ಲಿ ತಿಳಿಸಿದೆ.

ಈಕ್ವಿಟಿ ಆರ್ಡರ್‌ಗಾಗಿ ಬೆಲೆಯನ್ನು ಎಂಟ್ರಿ ಮಾಡಿದಂತೆ ಆಗಾಗ್ಗೆ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಎನ್‌ಎಸ್‌ಇ ವಹಿವಾಟು ಕೆಲಕಾಲ ಸ್ಥಗಿತಗೊಳಿಸಲಾಗಿದೆ.

English summary

NSE Halts Trading Due To Data Glitch: Latest Update Here

Index price feed for NSE indices across brokers has frozen due to an unknown reason. NSE has closed F&O market at 11:40 am and the cash market at 11:43 am.
Story first published: Wednesday, February 24, 2021, 12:23 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X