ಅಕ್ಟೋಬರ್ 29 ಮಾರುಕಟ್ಟೆ ಚಿತ್ರಣ: ಪಾತಾಳಕ್ಕೆ ಕುಸಿದ ನಿಫ್ಟಿ, ಸೆನ್ಸೆಕ್ಸ್ ಚೇತರಿಕೆ

ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಸ್ಥಿರತೆ ಕಂಡು ಬಂದಿರುವುದರ ನಡುವೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಗೂಳಿ ಗುದ್ದಾಟ ಜೋರಾಗಿ ನಡೆದಿದೆ. ಶುಕ್ರವಾರ ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡು ಬಂದಿದೆ. ಭಾರತೀಯ ಷೇರು ಸೂಚ್ಯಂಕ(ಬಿಎಸ್ಇ) ಹಾಗೂ ರಾಷ್ಟ್ರೀಯ ಷೇರು ಸೂಚ್ಯಂಕ(ಎನ್ಎಸ್ಇ) ಅಂಕಗಳು ಪಾತಾಳಕ್ಕೆ ಕುಸಿದಂತಾಗಿದೆ.

ಶುಕ್ರವಾರ ಬೆಳಗ್ಗೆ ಮಾರುಕಟ್ಟೆ ಸೆನ್ಸೆಕ್ಸ್ 612.57 ಅಂಕಗಳು ಅಥವಾ ಶೇ.1.02ರಷ್ಟು ಇಳಿಕೆಯೊಂದಿಗೆ 59,372.13ರಲ್ಲಿ ದಿನದ ವಹಿವಾಟು ಆರಂಭಿಸಿತು. ಅದೇ ರೀತಿ ನಿಫ್ಟಿ ಕೂಡಾ 180.75 ಅಥವಾ ಶೇ.1.01ರಷ್ಟು ಇಳಿಕೆಯೊಂದಿಗೆ 17,676.50ರ ಅಂಕಿ-ಅಂಶಗಳೊಂದಿಗೆ ದಿನದ ಮಾರುಕಟ್ಟೆ ಪ್ರಾರಂಭವಾಯಿತು.

ಡೌ ಜೋನ್ಸ್ ಇಂಡಸ್ಟ್ರಿಯಲ್ ಸರಾಸರಿ 239.79 ಪಾಯಿಂಟ್‌ಗಳು ಅಥವಾ 0.68%, 35,730.48 ಕ್ಕೆ ಕೊನೆಗೊಂಡಿತು. ಎಸ್&ಪಿ 500 44.74 ಅಂಕಗಳು ಅಥವಾ ಶೇ.0.98ರಷ್ಟು ಏರಿಕೆಯೊಂದಿಗೆ 4,596.42ಕ್ಕೆ ತಲುಪಿದೆ. ನಾಸ್ಡಾಕ್ ಕಾಂಪೋಸಿಟ್ 212.28 ಪಾಯಿಂಟ್‌ಗಳು ಅಥವಾ ಶೇ.1.39ರಷ್ಟು ಏರಿಕೆಯೊಂದಿಗೆ 15,448.12 ಕ್ಕೆ ಮುಟ್ಟಿದೆ. ಅದೇ ರೀತಿ ಜಪಾನ್‌ನ ಬೆಂಚ್‌ಮಾರ್ಕ್ ನಿಕ್ಕಿ 225 ಸೂಚ್ಯಂಕವು ಆರಂಭಿಕ ವಹಿವಾಟಿನಲ್ಲಿ ಶೇ. 0.91ರಷ್ಟು ಅಥವಾ 261.67 ಪಾಯಿಂಟ್‌ಗಳ ಕುಸಿತದೊಂದಿಗೆ 28,558.42ಕ್ಕೆ ಇಳಿಮುಖವಾಗಿದೆ. ಟಾಪಿಕ್ಸ್ ಸೂಚ್ಯಂಕವು ಶೇ.0.87ರಷ್ಟು ಅಥವಾ 17.34 ಅಂಕಗಳೊಂದಿಗೆ 1,982.32ಕ್ಕೆ ಕುಸಿದಿದೆ. ಪ್ರಸ್ತುತ ಷೇರು ಮಾರುಕಟ್ಟೆ ಚಿತ್ರಣ ಹಾಗೂ ಪ್ರಮುಖ ಷೇರುಗಳ ಏರಿಳಿತ ಹೇಗಿದೆ ಎಂಬುದರ ಕುರಿತು ಒಂದು ವರದಿ ಇಲ್ಲಿದೆ ಓದಿ.

ಅಕ್ಟೋಬರ್ 29: ಭಾರತೀಯ ಷೇರು ಮಾರುಕಟ್ಟೆಯಲ್ಲಿ ಆರಂಭಿಕ ಕುಸಿತ

ಷೇರು ಮಾರುಕಟ್ಟೆಯ ಏರಿಕೆಯಾದ ಟಾಪ್-5 ಕಂಪನಿ:

ಭಾರತೀಯ ಷೇರು ಮಾರುಕಟ್ಟೆಯು ಶುಕ್ರವಾರ ಭಾರಿ ಕುಸಿತದೊಂದಿಗೆ ಆರಂಭಗೊಂಡರೂ ಕೆಲವು ಕಂಪನಿಗಳ ಷೇರು ದರದಲ್ಲಿ ಏರಿಕೆ ಕಂಡು ಬಂದಿದೆ. ಅದಾನಿ ಪೋರ್ಟ್ಸ್, ಐಟಿಸಿ, ಟಾಟಾ ಸ್ಟೀಲ್, ಡಿವಿ ಸ್ಲಾಬ್ ಮತ್ತು ಟಿಸಿಎಸ್ ಕಂಪನಿಯ ಷೇರುದರದಲ್ಲಿ ಏರಿಕೆಯಾಗಿದೆ. ಅದಾನಿ ಪೋರ್ಟ್ಸ್ ದರದಲ್ಲಿ ಶೇ.0.69ರಷ್ಟು ಏರಿಕೆಯಾಗಿದ್ದು, 692.85ಕ್ಕೆ ತಲುಪಿದೆ. ಅದೇ ರೀತಿ ಐಟಿಸಿ ಶೇ.0.58ರಷ್ಟು ಏರಿಕೆಯೊಂದಿಗೆ 226.40 ರೂಪಾಯಿ, ಟಾಟಾ ಸ್ಟೀಲ್ ಕಂಪನಿ ಶೇ.0.49ರಷ್ಟು ಏರಿಕೆ ಜೊತೆ 1,305.95 ರೂಪಾಯಿ, ಡಿವಿ ಸ್ಲಾಬ್ ಕಂಪನಿಯ ಷೇರು ಮೌಲ್ಯ ಶೇ.0.49ರಷ್ಟು ಏರಿಕೆಯೊಂದಿಗೆ 5,146ಕ್ಕೆ ತಲುಪಿದೆ. ಟಿಸಿಎಸ್ ಕಂಪನಿಯ ಷೇರು ಮೌಲ್ಯದಲ್ಲಿ 0.49ರಷ್ಟು ಏರಿಕೆಯಾಗಿದ್ದು 3,438.25ಕ್ಕೆ ಮುಟ್ಟಿದೆ.

ಅತಿಹೆಚ್ಚು ಇಳಿಕೆ ದಾಖಲಿಸಿದ ಕಂಪನಿ ಷೇರು ದರ:

ಸೆನ್ಸೆಕ್ಸ್ ಮತ್ತು ನಿಫ್ಟಿ ಷೇರು ಮಾರುಕಟ್ಟೆ ಕುಸಿತದೊಂದಿಗೆ ಕೆಲವು ಕಂಪನಿಗಳ ಷೇರು ಬೆಲೆಯು ಪಾತಾಳಕ್ಕೆ ಕುಸಿದಿದೆ. ಹೀಗೆ ಶುಕ್ರವಾರ ಮಾರುಕಟ್ಟೆಯಲ್ಲಿ ಅತಿಹೆಚ್ಚು ಕುಸಿತ ಕಂಡಿರುವ ಟಾಪ್-5 ಷೇರು ಕಂಪನಿಗಳ ದರವನ್ನೊಮ್ಮೆ ನೋಡೋಣ. ಇಂಡಸ್ ಇಂಡ್ ಬ್ಯಾಂಕ್ ಷೇರು ಬೆಲೆಯಲ್ಲಿ ಶೇ.2.89ರಷ್ಟು ಇಳಿಮುಖವಾಗಿದ್ದು, 1,142 ರೂಪಾಯಿಗೆ ಇಳಿಕೆಯಾಗಿದೆ. ಎಲ್ ಆಂಡ್ ಟಿ ಕಂಪನಿ ಷೇರು ದರದಲ್ಲಿ ಶೇ.2.31ರಷ್ಟು ಕುಸಿದಿದ್ದು, 1,772.35ಕ್ಕೆ ಇಳಿಕೆಯಾಗಿದೆ. ಹೆಚ್ ಡಿಎಫ್ ಸಿ ಶೇ.2.18ರಷ್ಟು ಕುಸಿತ ಕಂಡಿದ್ದು, 2,837.45ಕ್ಕೆ ಇಳಿಕೆಯಾಗಿದೆ. ಆಕ್ಸಿಸ್ ಬ್ಯಾಂಕ್ ಶೇ.2.11ರಷ್ಟು ಇಳಿಕೆಯಾಗಿದ್ದು, 742.35ರಷ್ಟು ಕುಸಿತ ಕಂಡಿದೆ. ಇನ್ನು ಬಜಾಜ್ ಫೈನಾನ್ಸ್ ಕಂಪನಿಯು ಶೇ.2.09ರಷ್ಟು ಇಳಮುಖವಾಗಿದ್ದು, ಷೇರು ದರವು 17,611.50 ರೂಪಾಯಿಗೆ ಕುಸಿದಿದೆ.

ರೂಪಾಯಿ ಮೌಲ್ಯದ ಎದುರು ಡಾಲರ್ ಏರಿಳಿತ

ಆಮದುದಾರರಿಂದ ತಿಂಗಳಾಂತ್ಯದ ಡಾಲರ್ ಬೇಡಿಕೆ ಮತ್ತು ದೇಶೀಯ ಷೇರುಗಳಲ್ಲಿನ ತಟಸ್ಥ ಟ್ರೆಂಡ್‌ನಿಂದಾಗಿ ರೂಪಾಯಿ ಮೌಲ್ಯವು ಬುಧವಾರ US ಕರೆನ್ಸಿ ಎದುರು 7 ಪೈಸೆ ಇಳಿಕೆಯೊಂದಿಗೆ 75.03ಕ್ಕೆ ಕುಸಿದಿತ್ತು. ದೇಶೀಯ ಷೇರುಗಳಲ್ಲಿನ ಏರಿಳಿತದ ನಡುವೆ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಬೆಲೆ ಏರಿಕೆಯಾಗಿದೆ. ಗುರುವಾರ ಭಾರತೀಯ ರೂಪಾಯಿ ಮೌಲ್ಯವು 74.88 ರೂಪಾಯಿ ಆಗಿದ್ದು, ಶುಕ್ರವಾರ ಪ್ರತಿ ಡಾಲರ್‌ಗೆ 74.80ಕ್ಕೆ ಇಳಿಕೆಯಾಗಿದೆ. US ನಿಂದ ಸುಧಾರಿತ ಆರ್ಥಿಕ ಮಾಹಿತಿ ಮತ್ತು ವಿತ್ತೀಯ ಬಿಗಿಗೊಳಿಸುವಿಕೆಯ ನಿರೀಕ್ಷೆಯ ಹಿನ್ನೆಲೆ US ಡಾಲರ್ ಶೇ. 0.15ರಷ್ಟು ಇಳಿಮುಖವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+