ಭಾರತದಲ್ಲಿ ಉತ್ಪಾದನಾ ಚಟುವಟಿಕೆಗಳು ಚುರುಕು; ಅಕ್ಟೋಬರ್ ನಲ್ಲಿ ದಾಖಲೆ

ಭಾರತದಲ್ಲಿ ಅಕ್ಟೋಬರ್ ತಿಂಗಳಲ್ಲಿ ಉತ್ಪಾದನಾ ಚಟುವಟಿಕೆಯಲ್ಲಿ ಚೇತರಿಕೆ ಕಂಡಿದೆ. ಬೇಡಿಕೆ ಕುದುರಿಕೊಂಡಿರುವುದರಿಂದ ಚಟುವಟಿಕೆಗೆ ಚುರುಕು ನೀಡಿದೆ. ಐಎಚ್ ಎಸ್ ಮಾರ್ಕ್ ಇಟ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಪ್ರಕಾರ, ಮಾರಾಟದಲ್ಲಿ ಬೆಳವಣಿಗೆ ಕಂಡುಬಂದ ಹಿನ್ನೆಲೆಯಲ್ಲಿ ಹದಿಮೂರು ವರ್ಷಗಳಲ್ಲೇ ಗರಿಷ್ಠ ಮಟ್ಟದ ಪ್ರಗತಿ ಕಂಡುಬಂದು, ಕಂಪೆನಿಗಳ ಪಿಎಂಐ (ಪರ್ಚೇಸಿಂಗ್ ಮ್ಯಾನುಫ್ಯಾಕ್ಚರಿಂಗ್ ಇಂಡೆಕ್ಸ್) ಹೆಚ್ಚಾಗಿದೆ.

ಉತ್ಪಾದನಾ ಚಟುವಟಿಕೆಗಾಗಿ ಸಂಸ್ಥೆಗಳು ಹೆಚ್ಚುವರಿ ಉತ್ಪನ್ನಗಳನ್ನು ಖರೀದಿಸಿವೆ. ಸರ್ಕಾರಿ ನಿಯಮಗಳ ಪ್ರಕಾರ ಕೂಲಿ ಕಾರ್ಮಿಕರ ಸಂಖ್ಯೆ ಕಡಿಮೆ ಇದೆ. ಹಣದುಬ್ಬರದ ಒತ್ತಡ, ಇನ್ ಪುಟ್ ವೆಚ್ಚದಲ್ಲಿ ಅಲ್ಪ ಪ್ರಮಾಣದ ಹೆಚ್ಚಳ ಹಾಗೂ ಸ್ವಲ್ಪ ಮಟ್ಟಿಗೆ ಮಾರಾಟ ದರದ ಹೆಚ್ಚಳ ಆಗಿದೆ ಎಂದು ಐಎಚ್ ಎಸ್ ಮಾರ್ಕ್ ಇಟ್ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಹೇಳಿದೆ.

ಭಾರತದಲ್ಲಿ ಉತ್ಪಾದನಾ ಚಟುವಟಿಕೆಗಳು ಚುರುಕು; ಅಕ್ಟೋಬರ್ ನಲ್ಲಿ ದಾಖಲೆ

ಸೆಪ್ಟೆಂಬರ್ ನಲ್ಲಿ 56.8 ಇದ್ದ ಉತ್ಪಾದನಾ ಚಟುವಟಿಕೆ ಅಕ್ಟೋಬರ್ ನಲ್ಲಿ 58.9ಕ್ಕೆ ಏರಿಕೆ ಆಗಿದೆ. ಕೊರೊನಾ ನಿರ್ಬಂಧ ಕಾರಣಕ್ಕೆ ಉತ್ಪಾದನಾ ಚಟುವಟಿಕೆ ಸ್ತಬ್ಧವಾಗಿತ್ತು. ಆ ನಂತರ ನಿರ್ಬಂಧ ತೆರವಿನ ಕಾರಣಕ್ಕೆ ಚಟುವಟಿಕೆ ಚುರುಕು ಪಡೆದು, ಉತ್ಪಾದನೆಯೂ ಹೆಚ್ಚಾಯಿತು. ಅಷ್ಟೇ ಅಲ್ಲ, ಕಳೆದ ಹದಿಮೂರು ವರ್ಷದಲ್ಲೇ ಕಾಣದಂಥ ದಾಖಲೆ ಬರೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+