For Quick Alerts
ALLOW NOTIFICATIONS  
For Daily Alerts

ಕೇಂದ್ರದ ತೀರ್ಮಾನಕ್ಕೂ ಮುನ್ನ ಏಪ್ರಿಲ್ 30ರವರೆಗೆ ಲಾಕ್‌ಡೌನ್ ವಿಸ್ತರಿಸಿದ ಮೊದಲ ರಾಜ್ಯ ಒಡಿಶಾ

|

ದೇಶದಲ್ಲಿ ಕೊರೊನಾವೈರಸ್ ಲಾಕ್‌ಡೌನ್ ಮುಂದುವರಿಯುತ್ತಾ? ಇಲ್ಲವೇ? ಎಂಬ ಚರ್ಚೆಯ ನಡುವೆಯೇ ಒಡಿಶಾ ರಾಜ್ಯ ಸರ್ಕಾರ ಲಾಕ್‌ಡೌನ್‌ ಅನ್ನು ಏಪ್ರಿಲ್ 30ರವರೆಗೆ ವಿಸ್ತರಿಸಿದೆ. ಈ ಮೂಲಕ ಕೇಂದ್ರದ ಆದೇಶಕ್ಕೂ ಮುನ್ನವೇ ಗುರುವಾರ ತೀರ್ಮಾನ ತೆಗೆದುಕೊಂಡಿದೆ. ಅಲ್ಲದೆ ಲಾಕ್‌ಡೌನ್ ಮುಂದುವರಿಸಿದ ದೇಶದ ಮೊದಲ ರಾಜ್ಯವೆನಿಸಿದೆ.

ಲಾಕ್‌ಡೌನ್ ವಿಸ್ತರಿಸಿ ಆದೇಶ ಹೊರಡಿಸಿರುವ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಜೂನ್ 17ರವರೆಗೆ ಶಾಲಾ-ಕಾಲೇಜುಗಳನ್ನು ತೆರೆಯದಂತೆ ನಿರ್ಧರಿಸಿದ್ದಾರೆ. ಈ ಮಧ್ಯೆ ರಾಜ್ಯಕ್ಕೆ ಯಾವುದೇ ರೈಲು , ವಿಮಾನ ಬಿಡದಿರಲು ಕೇಂದ್ರ ಸರ್ಕಾರವನ್ನು ಕೋರಿದೆ.

ಏಪ್ರಿಲ್ 30ರವರೆಗೆ  ಲಾಕ್‌ಡೌನ್ ವಿಸ್ತರಿಸಿದ ಮೊದಲ ರಾಜ್ಯ ಒಡಿಶಾ

''ಲಾಕ್‌ಡೌನ್ ಅವಧಿಯನ್ನು ಏಪ್ರಿಲ್ 30 ರವರೆಗೆ ವಿಸ್ತರಿಸಲು ನಾವು ನಿರ್ಧರಿಸಿದ್ದೇವೆ ಮತ್ತು ಈ ನಿಟ್ಟಿನಲ್ಲಿ ಶಿಫಾರಸುಗಳನ್ನು ಕೇಂದ್ರಕ್ಕೆ ಕಳುಹಿಸಲಾಗುವುದು'' ಎಂದು ಅವರು ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

ಒಡಿಶಾದಲ್ಲಿ ಈವರೆಗೂ ಸಕ್ರಿಯ ಸೋಂಕಿತರ ಸಂಖ್ಯೆಯು 39 ಇದ್ದು, ಇಬ್ಬರು ಗುಣಮುಖರಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 24ರಂದು 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಿದ್ದರು ಮತ್ತು ಏಪ್ರಿಲ್ 15 ತೆಗೆಯಲು ನಿರ್ಧರಿಸಲಾಗಿತ್ತು.

English summary

Odisha Extends Corona Lockdown Till April 30

The Odisha government on Thursday decided to extend the ongoing lockdown in the state till April 30 to effectively contain the spread of coronavirus.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X