For Quick Alerts
ALLOW NOTIFICATIONS  
For Daily Alerts

ಓಲಾ ಎಲೆಕ್ಟ್ರಿಕ್ ಸ್ಕೂಟರ್: ಕೇವಲ 499 ರೂಪಾಯಿಗೆ ಬುಕ್‌ ಮಾಡಿ

|

ಓಲಾ, ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ ಆರಂಭಿಸುವ ಮೊದಲೇ ತನ್ನ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗಾಗಿ ಬುಕಿಂಗ್ ತೆರೆದಿದೆ. ಅದೂ ಕೂಡ ಈ ಸ್ಕೂಟರ್‌ ಅನ್ನು ಕೇವಲ 499 ರೂಪಾಯಿಗೆ ಬುಕ್ಕಿಂಗ್ ಮಾಡುವ ಅವಕಾಶ ನೀಡಿದೆ.

ಸ್ವತಃ ಈ ಮಾಹಿತಿಯನ್ನ ಕಂಪನಿಯ ಸಿಇಒ ಭವೀಶ್ ಅಗರ್ವಾಲ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಬುಕ್ಕಿಂಗ್ ಮೊತ್ತವನ್ನ ಸಂಪೂರ್ಣವಾಗಿ ಮರುಪಾವತಿಸಲಾಗುವುದು ಎಂದು ಸಹ ಹೇಳಿದ್ದಾರೆ.

ಓಲಾ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಆರಂಭ

ಓಲಾ ವೆಬ್‌ಸೈಟ್‌ನಲ್ಲಿ ಬುಕ್ಕಿಂಗ್ ಆರಂಭ

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಬುಕ್ಕಿಂಗ್‌ ಮಾಡಲು ಓಲಾ ಎಲೆಕ್ಟ್ರಿಕ್ ಅಧಿಕೃತ ವೆಬ್‌ಸೈಟ್‌ಗೆ (olaelectric.com) ಭೇಟಿ ನೀಡುವ ಮೂಲಕ ಆನ್‌ಲೈನ್‌ನಲ್ಲಿ ಕಾಯ್ದಿರಿಸಬಹುದು. ಸ್ಕೂಟರ್ ಬಿಡುಗಡೆಯ ಸಮಯದಲ್ಲಿ ಬುಕ್ಕಿಂಗ್ ಮಾಡಿರುವವರಿಗೆ ಆದ್ಯತೆಯ ಮೇಲೆ ಸ್ಕೂಟರ್ ಅನ್ನು ನೀಡಲಾಗುವುದು ಎಂದು ಕಂಪನಿ ತಿಳಿಸಿದೆ.

18 ನಿಮಿಷದಲ್ಲಿ ಶೇ. 50ರಷ್ಟು ಚಾರ್ಜ್

18 ನಿಮಿಷದಲ್ಲಿ ಶೇ. 50ರಷ್ಟು ಚಾರ್ಜ್

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು 18 ನಿಮಿಷಗಳಲ್ಲಿ 50 ಪ್ರತಿಶತದವರೆಗೆ ಚಾರ್ಜ್ ಮಾಡಬಹುದು. ಮೂಲಕ, ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ, ಈ ಸ್ಕೂಟರ್ 150 ಕಿ.ಮೀ.ವರೆಗೆ ಹೋಗಲು ಸಾಧ್ಯವಾಗುತ್ತದೆ. ಆದ್ದರಿಂದ ಅರ್ಧದಷ್ಟು ಚಾರ್ಜ್ ಮಾಡಿದರೆ ಅದು 75 ರಿಂದ 80 ಕಿ.ಮೀ. ತಲುಪಬಹುದು.

ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ-2021 ಪರಿಚಯಿಸಿದ ಕರ್ನಾಟಕ ಸರ್ಕಾರಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಯೋಜನೆ-2021 ಪರಿಚಯಿಸಿದ ಕರ್ನಾಟಕ ಸರ್ಕಾರ

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಎಷ್ಟು?
 

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಎಷ್ಟು?

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇನ್ನೂ ಬಿಡುಗಡೆ ಮಾಡದ ಕಾರಣ, ಕಂಪನಿಯು ಅದರ ಬೆಲೆಯನ್ನು ಘೋಷಿಸಿಲ್ಲ. ಆದರೆ ಇದು 1 ಲಕ್ಷದಿಂದ 1.25 ಲಕ್ಷ ರೂ.ಗಳವರೆಗೆ ಇರಬಹುದು ಎಂಬ ಊಹಾಪೋಹಗಳಿವೆ. ಪೂರ್ಣ ಎಲ್ಇಡಿ ಹೆಡ್‌ಲೈಟ್ ಹೊರತಾಗಿ, ಓಲಾ ಎಲೆಕ್ಟ್ರಿಕ್ ಸ್ಕೂಟರ್ ವೇಗದ ಚಾರ್ಜಿಂಗ್ ಸಾಮರ್ಥ್ಯವನ್ನು ಸಹ ಹೊಂದಿರುತ್ತದೆ. ಫ್ರಂಟ್ ಡಿಸ್ಕ್ ಬ್ರೇಕ್ ಅನ್ನು ಸಹ ಹೊಂದಿರುವ ಸಾಧ್ಯತೆಯಿದೆ.

ಭಾರೀ ಉತ್ಪಾದನೆಗೆ ತಯಾರಿ

ಭಾರೀ ಉತ್ಪಾದನೆಗೆ ತಯಾರಿ

ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ಉತ್ಪಾದನಗೆ ಕಂಪನಿಯು ದೊಡ್ಡ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಮಾಹಿತಿಯ ಪ್ರಕಾರ ಕಂಪನಿಯು ವಾರ್ಷಿಕವಾಗಿ 20 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ತಯಾರಿಸಬಹುದು. ಇದಕ್ಕಾಗಿ ಕಂಪನಿ 2,400 ಕೋಟಿ ರೂ. ವ್ಯಯಿಸಲು ಮುಂದಾಗಿದೆ. ಜೊತೆಗೆ ಕಂಪನಿಯು ಮೊದಲ ವರ್ಷದಲ್ಲಿ ದೇಶದಲ್ಲೇ ಸುಮಾರು 10 ಲಕ್ಷ ಇ-ಸ್ಕೂಟರ್‌ಗಳನ್ನು ಮಾರಾಟ ಮಾಡಲು ಸಿದ್ಧವಾಗಿದೆ. ಉತ್ತಮ ಬ್ಯಾಟರಿ ಆಧಾರಿತ ಸ್ಕೂಟರ್‌ ಅನ್ನು ಮನೆಯಲ್ಲಿ ಆರಾಮವಾಗಿ ಚಾರ್ಜ್ ಮಾಡಬಹುದು. ಇದಲ್ಲದೆ ಕಂಪನಿಯು ಚಾರ್ಜಿಂಗ್ ನೆಟ್‌ವರ್ಕ್ ಅನ್ನು ಸಹ ನಿರ್ಮಿಸುತ್ತಿದೆ.

English summary

Now you can pre-book Ola electric scooter at just Rs 499

Ola Electric has finally opened bookings for its upcoming electric scooter. The scooter can be reserved for a refundable deposit of just Rs 499
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X