ಓಲಾ ಕಂಪೆನಿಯು ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಿಸುತ್ತಿದೆ. ಹೌದು, ಇದೀಗ ಭಾರತದಲ್ಲಿ ಓಲಾ ದಿನಸಿ ಸೇವೆಯನ್ನು ಆರಂಭಿಸುವುದಾಗಿ ಹೊಸ ಪ್ಲಾಟ್‌ಫಾರ್ಮ್ ಓಲಾ ದಿನಸಿಯನ್ನು ಸಹ ಪ್ರಾರಂಭಿಸುವುದಾಗಿ ಘೋಷಿಸಿದೆ. ಈ ಡೆಲಿವರಿ ಸೇವೆಯು ದೇಶಾದ್ಯಂತ ಇತ್ತೀಚಿನ ಸೇವೆ ಪ್ರಾರಂಭವಾಗಿದೆ. ಜನರು ಕೇವಲ 10 ನಿಮಿಷಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ದೈನಂದಿನ ಅಗತ್ಯ ವಸ್ತುಗಳನ್ನು ಮತ್ತು ದಿನಸಿಗಳನ್ನು ಪಡೆಯಬಹುದು ಎಂದು ಕಂಪನಿ ಹೇಳಿದೆ.
ಹೌದು, ಓಲಾ ಭಾರತದಲ್ಲಿ ಓಲಾ ದಿನಸಿ ಸೇವೆಯನ್ನು ಗ್ರಾಹಕರಿಗೆ ನೀಡಲು ಘೋಷಿಸಿದೆ. ಕೇವಲ 10 ನಿಮಿಷಗಳಲ್ಲಿ ದೈನಂದಿನ ಅಗತ್ಯ ವಸ್ತುಗಳನ್ನು ಮತ್ತು ದಿನಸಿಗಳನ್ನು ಮನೆ ಬಾಗಿಲಿಗೆ ತಲುಪಿಸುವ ಗುರಿಯನ್ನು ನಾವು ಹೊಂದಿದ್ದೇವೆ ಎಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈಗಲೇ ಓಲಾ ಕ್ಯಾಬ್ಸ್ ಸೇವೆಯು ದೇಶಾದ್ಯಂತ ಸೇವೆಯನ್ನು ನೀಡುತ್ತಿದೆ. ಇದೀಗ ಓಲಾ ಹೊಸ ಸಾಹಸಕ್ಕೆ ಕೈ ಹಾಕಿದೆ.ಈ ಓಲಾ ಕಂಪನಿಯ ದಿನಸಿ ಆ್ಯಪ್ ಬಳಕೆದಾರರಿಗೆ ಕೇವಲ 10 ನಿಮಿಷಗಳಲ್ಲಿ ವಿತರಣೆಯನ್ನು ಪಡೆಯಬಹುದು ಎಂದು ಅವರು ವಿವರಿಸಿದ್ದಾರೆ.
Olaದಲ್ಲಿ ಆರ್ಡರ್ ಮಾಡಿದ್ರೆ ಶೇ.30ವರೆಗೆ ರಿಯಾಯಿತಿ
Ola ದಿನಸಿಯಿಂದ ಆರ್ಡರ್ ಮಾಡುವ ಗ್ರಾಹಕರಿಗೆ ತಮ್ಮ ಆರ್ಡರ್‌ಗಳಲ್ಲಿ ಮೇಲೆ ಶೇ.30ವರೆಗೆ ರಿಯಾಯಿತಿಗಳನ್ನು ಪಡೆಯಬಹುದು ಹಾಗೂ ನೀವು ಉಚಿತ ವಿತರಣೆಯ ಪ್ರಯೋಜನವನ್ನು ಸಹ ಪಡೆಯಬಹುದು ಎಂದು ತಿಳಿಸಿದೆ.
ಉಚಿತ ಡೆಲಿವರಿ ಸೇವೆ
ಓಲಾ ದಿನಸಿಗಳಿಗೆ ಉಚಿತ ಡೆಲಿವರಿ ಸೇವೆ ಸಹ ಇದೆ. ಹಾಗೂ ಮುಂದಿನ ಆರ್ಡರ್‌ಗಳಿಗಾಗಿ ಡೆಲಿವರಿಗಳನ್ನು ನಿಗದಿಪಡಿಸುವ ಆಯ್ಕೆಯೂ ಇದೆ.
ಓಲಾ ದಿನಸಿ ಘೋಷಿಸಿದೆ
ಪ್ಯಾನ್ ಇಂಡಿಯಾ ರೋಲ್‌ಔಟ್ ಕುರಿತು ಅಧಿಕೃತ ಪ್ರಕಟಣೆಯ ಹೊರತಾಗಿಯೂ, ಈ ಸೇವೆಯು ಸದ್ಯಕ್ಕೆ ಎಲ್ಲೆಡೆ ಲೈವ್ ಆಗಿರುವಂತೆ ತೋರುತ್ತಿಲ್ಲ. ಮುಂಬೈನಲ್ಲಿ ಪರೀಕ್ಷಿಸಿದ ನಂತರ, ಅಪ್ಲಿಕೇಶನ್ ಓಲಾ ದಿನಸಿ ಶೀಘ್ರದಲ್ಲೇ ಬರಲಿದೆ ಈ ಸೇವೆಯು ಬೆಂಗಳೂರಿನಲ್ಲೂ ಆರಂಭವಾಗಲಿದೆ.
ಭಾರತದ ತ್ವರಿತ ವಾಣಿಜ್ಯ ಮಾರುಕಟ್ಟೆ
ಮೋತಿಲಾಲ್ ಓಸ್ವಾಲ್ ಅವರ ವರದಿಯ ಪ್ರಕಾರ ಭಾರತದ ತ್ವರಿತ ವಾಣಿಜ್ಯ ಮಾರುಕಟ್ಟೆಯು ವಿಶ್ವದ ಪ್ರಬಲ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಪ್ರಸ್ತುತ, ಜೊಮ್ಯಾಟೋನ Blinkit ಈ ಮಾರುಕಟ್ಟೆಯಲ್ಲಿ 46 ಶೇಕಡಾ ಮಾರುಕಟ್ಟೆ ಪಾಲನ್ನು ಹೊಂದಿರುವ ಮೊದಲ ಸ್ಥಾನದಲ್ಲಿದೆ. 29 ಶೇಕಡಾದೊಂದಿಗೆ ಜೆಪ್ಟೋ ಎರಡನೇ ಸ್ಥಾನದಲ್ಲಿದೆ. Swiggy Instamart ನ ಮಾರುಕಟ್ಟೆ ಪಾಲು ಶೇಕಡಾ 25 ರಷ್ಟಿದೆ.


Click it and Unblock the Notifications