Ola, Rapido Strike: ಇಂದು ಓಲಾ, ಊಬರ್‌, ರ್ಯಾಪಿಡೋ ಮುಷ್ಕರ! ಬೆಂಗಳೂರಿನಲ್ಲಿ ಇರುತ್ತಾ ಕ್ಯಾಬ್‌?

ಬೆಂಗಳೂರು: ಇಂದಿನ ದಿನದಲ್ಲಿ ಎಲ್ಲವೂ ಡಿಜಿಟಲ್‌ ಮಯವಾಗಿದೆ. ಮನೆಯಲ್ಲೇ ಕೂತು ಆರ್ಡರ್‌ ಮಾಡಿದರೆ ಸಾಕು ಊಟ, ಕ್ಯಾಬ್‌, ಟ್ಯಾಕ್ಸಿ ಎಲ್ಲವೂ ಬರುತ್ತೆ. ಆದರೆ ಇದೀಗ ಓಲಾ, ಊಬರ್‌, ರ್ಯಾಪಿಡೋ ಸೇರಿದಂತೆ ಹಲವು ಆಪ್‌ ಆಧಾರಿತ ರೈಡ್‌-ಹೈಲಿಂಗ್‌ ಪ್ಲಾಟ್‌ಫಾರ್ಮ್‌ಗಳ ಡ್ರೈವರ್‌ಗಳು ಇಂದು (ಫೆಬ್ರವರಿ 07) ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. 6 ಗಂಟೆಗಳ 'ಆಲ್‌ ಇಂಡಿಯಾ ಬ್ರೇಕ್‌ಡೌನ್‌' (All India Breakdown) ಎಂಬ ಮುಷ್ಕರ ಕೈಗೊಂಡಿದ್ದು, ಈ ಪರಿಣಾಮ ಬೆಂಗಳೂರು ಸೇರಿದಂತೆ ದೆಹಲಿ, ಹೈದರಾಬಾದ್‌ ಮತ್ತು ಇತರ ಮಹಾನಗರಗಳಲ್ಲಿ ಇಂದು ಕ್ಯಾಬ್‌, ಆಟೋ, ಬೈಕ್‌ ಟ್ಯಾಕ್ಸಿ (Cab, Auto, Bike Taxi) ಸೇವೆಗಳಲ್ಲಿ ವ್ಯತ್ಯಯ ಉಂಟಾಗಲಿದೆ.

ಓಲಾ, ಊಬರ್‌, ರ್ಯಾಪಿಡೋ ಮುಷ್ಕರ! ಬೆಂಗಳೂರಿನಲ್ಲಿ ಇರುತ್ತಾ ಕ್ಯಾಬ್‌?

ಹೌದು, ಫೆಬ್ರವರಿ 7, 2026, ಶನಿವಾರದಂದು ಓಲಾ, ಊಬರ್, ರ‍್ಯಾಪಿಡೋ (Ola, Uber, Rapido Strike) ಸೇರಿದಂತೆ ಆ್ಯಪ್ ಆಧಾರಿತ ಕ್ಯಾಬ್ ಮತ್ತು ಬೈಕ್ ಟ್ಯಾಕ್ಸಿ ಸೇವೆಗಳು ಕರ್ನಾಟಕ (Karnataka) ಹಾಗೂ ದೇಶಾದ್ಯಂತ ಸ್ಥಗಿತಗೊಳ್ಳಲಿದೆ. ಆರು ಗಂಟೆಗಳ ಈ ದೇಶವ್ಯಾಪಿ ಮುಷ್ಕರದಿಂದ ಅನೇಕ ಸೇವೆಗಳಲ್ಲಿ ಅಡ್ಡಿಯಾಗಲಿದೆ. ಸರ್ಕಾರಿ ಕನಿಷ್ಠ ಮೂಲ ದರಗಳ ನಿಗದಿ ಮತ್ತು ವಾಣಿಜ್ಯ ಬಳಕೆಗೆ ಖಾಸಗಿ ವಾಹನಗಳಿಹೆ ನಿಯಂತ್ರಣ ಹೇರಿರುವುದಕ್ಕೆ ಸರ್ಕಾರದ ಹಸ್ತಕ್ಷೇಪವನ್ನು ಒತ್ತಾಯಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. "ಆಲ್ ಇಂಡಿಯಾ ಬ್ರೇಕ್‌ಡೌನ್" ಎಂದು ಕರೆದಿರುವ ಈ ಪ್ರತಿಭಟನೆಯಲ್ಲಿ ಚಾಲಕರು ತಮ್ಮ ಆ್ಯಪ್‌ಗಳಿಂದ ಲಾಗ್ ಔಟ್ ಆಗಿದ್ದಾರೆ.

ತೆಲಂಗಾಣ ಗಿಗ್ ಮತ್ತು ಪ್ಲಾಟ್‌ಫಾರ್ಮ್ ಕಾರ್ಮಿಕರ ಒಕ್ಕೂಟದ (TGPWU) ನೇತೃತ್ವದಲ್ಲಿ, ಈ ಆರು ಗಂಟೆಗಳ ಮುಷ್ಕರ ಕೈಗೊಳ್ಳಲಾಗಿದೆ. ಕರ್ನಾಟಕ ರಾಜ್ಯದಲ್ಲಿಯೂ ಓಲಾ, ಊಬರ್, ರ‍್ಯಾಪಿಡೋ ಚಾಲಕರು ಇದರಲ್ಲಿ ಭಾಗಿಯಾಗಿದ್ದಾರೆ. ಬೆಂಗಳೂರು ಸೇರಿದಂತೆ ಕರ್ನಾಟಕದ ಇತರೆ ಭಾಗಗಳಲ್ಲೂ ಈ ಮುಷ್ಕರದಲ್ಲಿ ಭಾಗವಹಿಸುವ ಸಾಧ್ಯತೆ ಇದೆ.

ಏನಿದು TGPWU?
TGPWU (Telangana Gig and Platform Workers Union), ಆ್ಯಪ್ ಆಧಾರಿತ ಸಾರಿಗೆ ಕಾರ್ಮಿಕರನ್ನು ಪ್ರತಿನಿಧಿಸುವ ಪ್ರಮುಖ ಸಂಸ್ಥೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಮುಷ್ಕರದ ಬಗ್ಗೆ ಘೋಷಣೆ ಮಾಡಿದ್ದು ಮಾತ್ರವಲ್ಲದೇ, ಚಾಲಕರು "ಏಕಪಕ್ಷೀಯ ಬೆಲೆ ನಿರ್ಧಾರ ಮತ್ತು ಸರ್ಕಾರದ ನಿಯಂತ್ರಣ" ಖಂಡಿಸಿ ಆರು ಗಂಟೆಗಳ ಕಾಲ ಆ್ಯಪ್‌ಗಳಿಂದ ಲಾಗ್ ಔಟ್ ಆಗಲಿದ್ದಾರೆ ಎಂದು ತಿಳಿಸಿತ್ತು.

ಕರ್ನಾಟಕದಲ್ಲೂ ಬೆಂಬಲ!
ಕರ್ನಾಟಕದಲ್ಲಿ, ಕರ್ನಾಟಕ ಆ್ಯಪ್-ಆಧಾರಿತ ಕಾರ್ಮಿಕರ ಒಕ್ಕೂಟವು ಅಧಿಕೃತವಾಗಿ ಈ ಮುಷ್ಕರಕ್ಕೆ ಬೆಂಬಲ ನೀಡಿದೆ. ಒಕ್ಕೂಟವು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮತ್ತು ಕರ್ನಾಟಕ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಪತ್ರ ಬರೆದಿದೆ. ಈ ಪತ್ರದಲ್ಲಿ, ಕನಿಷ್ಠ ಮೂಲ ದರಗಳನ್ನು ತಕ್ಷಣ ಘೋಷಿಸುವಂತೆ ಮತ್ತು ವಾಣಿಜ್ಯ ಸಾರಿಗೆಗೆ ವಾಣಿಜ್ಯೇತರ ವಾಹನಗಳ ಬಳಕೆಯನ್ನು ನಿಷೇಧಿಸುವಂತೆ ಒತ್ತಾಯಿಸಲಾಗಿದೆ.

ಮುಷ್ಕರಕ್ಕೆ ಕಾರಣಗಳೇನು?

  • ಸರ್ಕಾರಿ ಕನಿಷ್ಠ ಬೇಸ್‌ ಫೇರ್‌ ಇಲ್ಲದಿರುವುದು: ಓಲಾ, ಊಬರ್‌, ರ್ಯಾಪಿಡೋ, ಪೋರ್ಟರ್‌ ಮುಂತಾದ ಪ್ಲಾಟ್‌ಫಾರ್ಮ್‌ಗಳು ಏಕಪಕ್ಷೀಯ ದರಗಳನ್ನು ನಿಗದಿಪಡಿಸುತ್ತಿವೆ. ಇದರಿಂದ ಡ್ರೈವರ್‌ಗಳ ಆದಾಯಕ್ಕೂ ಪರಿಣಾಮ ಬೀರಿದೆ.
  • ಮೋಟಾರ್‌ ವೆಹಿಕಲ್‌ ಅಗ್ರಿಗೇಟರ್‌ ಗೈಡ್‌ಲೈನ್ಸ್‌ 2025 ಅನುಷ್ಠಾನಗೊಳ್ಳದಿರುವುದು: ಈ ಮಾರ್ಗಸೂಚಿ ಬಂದರೆ, ದರ ವ್ಯವಸ್ಥೆ, ಡ್ರೈವರ್‌ಗಳ ಜೀವನೋಪಾಯಕ್ಕೆ ಸಹಕಾರಿಯಾಗಲಿದೆ.
  • ಕಮಿಷನ್‌ ಹೆಚ್ಚು, ಇನ್ಸೆಂಟಿವ್‌ಗಳು ಕಡಿಮೆ, ಕೆಲಸದ ಸಮಯ ಹೆಚ್ಚು. ಹಾಗಾಗಿ ಸರಿಯಾದ ಚೌಕಟ್ಟು ರೂಪಿಸುವಂತೆ ಆಗ್ರಹ.
  • ಅಕ್ರಮ ಬೈಕ್‌ ಟ್ಯಾಕ್ಸಿ ಮತ್ತು ಖಾಸಗಿ ವಾಹನಗಳ ವಾಣಿಜ್ಯ ಬಳಕೆ: ಇದಕ್ಕೆ ನಿಷೇಧ ಹೇರುವಂತೆ ಚಾಲಕರ ಬೇಡಿಕೆ.

ಕರ್ನಾಟಕದಲ್ಲಿ ಏನನ್ನು ನಿರೀಕ್ಷಿಸಬಹುದು?
ಬೆಂಗಳೂರಿನಲ್ಲಿ, ಆ್ಯಪ್ ಆಧಾರಿತ ಸಾರಿಗೆಯು ದೈನಂದಿನ ಪ್ರಯಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ, ಆರು ಗಂಟೆಗಳ ಕಾಲ ಚಾಲಕರು ಲಾಗ್ ಔಟ್ ಆಗಲಿದ್ದಾರೆ. ಈ ಹಿನ್ನೆಲೆ ಕಚೇರಿಗೆ ಹೋಗುವವರು, ವಿಮಾನ ನಿಲ್ದಾಣದ ಪ್ರಯಾಣಿಕರು ಮತ್ತು ಕೊನೆಯ ಮೈಲಿ ಸಂಪರ್ಕದ ಮೇಲೆ ಅವಲಂಬಿತರಾಗಿರುವವರ ಮೇಲೆ ಪರಿಣಾಮ ಬೀರಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+