ಕಳೆದ ವರ್ಷ ಆರಂಭವಾದ ಉದ್ಯೋಗ ಕಡಿತವು ಈ ವರ್ಷವೂ ಕೂಡಾ ಮುಂದುವರಿದಿದೆ. ಒಎಲ್‌ಎಕ್ಸ್ ಗ್ರೂಪ್ ಆನ್‌ಲೈನ್ ಮಾರುಕಟ್ಟೆ ನಡೆಸುತ್ತಿರುವ ಸಂಸ್ಥೆಯು ವಿಶ್ವದಾದ್ಯಂತ ಸುಮಾರು 800 ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ. ಇನ್ನು ಸಂಭಾವ್ಯ ಖರೀದಿದಾರರು ಮತ್ತು ಹೂಡಿಕೆದಾರರು ಲಭ್ಯವಾದ ಬಳಿಕ ಕಂಪನಿಯು ತನ್ನ ಆಟೋಮೋಟಿವ್ ಘಟಕವಾದ ಒಎಲ್‌ಎಕ್ಸ್‌ನ ಕಾರ್ಯಾಚರಣೆಯನ್ನು ಕೆಲವು ಮಾರುಕಟ್ಟೆಗಳಲ್ಲಿ ಮುಚ್ಚಲು ಪ್ರಾರಂಭಿಸಿದೆ.
ಈ ಉದ್ಯೋಗ ಕಡಿತವು ನಿರ್ದಿಷ್ಟ ಮಾರುಕಟ್ಟೆ ಅಥವಾ ವಿಭಾಗಕ್ಕೆ ಸೀಮಿತವಾಗಿಲ್ಲ. ಈ ಉದ್ಯೋಗ ಕಡಿತದ ಪ್ರಭಾವಕ್ಕೆ ಒಳಗಾದ ಉದ್ಯೋಗಿಗಳಿಗೆ ನಿರ್ಧಾರದ ಬಗ್ಗೆ ತಿಳಿಸಲಾಗುತ್ತಿದೆ ಎಂದು ವರದಿಯಾಗಿದೆ. ಒಎಲ್‌ಎಕ್ಸ್ ವಕ್ತಾರರು ಉದ್ಯೋಗ ಕಡಿತವನ್ನು ದೃಢಪಡಿಸಿದ್ದಾರೆ. ಒಎಲ್‌ಎಕ್ಸ್ ಆಟೋಸ್‌ನಲ್ಲಿ ಉದ್ಯೋಗ ಕಡಿತದ ಬಗ್ಗೆ ಮಾರ್ಚ್‌ನಲ್ಲಿ ಕಂಪನಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಒಎಲ್‌ಎಕ್ಸ್ ಗ್ರೂಪ್ ಜಾಗತಿಕವಾಗಿ 30 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಆಮ್ಸ್ಟರ್‌ಡ್ಯಾಮ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. "ಈ ವರ್ಷದ ಆರಂಭದಲ್ಲಿ, ನಾವು ಒಎಲ್‌ಎಕ್ಸ್ ಆಟೋಸ್ ವ್ಯವಹಾರದಿಂದ ನಿರ್ಗಮಿಸಲು ಕಾರ್ಯತಂತ್ರದ ನಿರ್ಧಾರವನ್ನು ಮಾಡಿದ್ದೇವೆ. ಅಂದಿನಿಂದ ಸಂಭಾವ್ಯ ಖರೀದಿದಾರರು ಅಥವಾ ಹೂಡಿಕೆದಾರರ ಹುಡುಕಾಟ ಮಾಡಲಾಗುತ್ತಿದೆ," ಎಂದು ಕಂಪನಿಯು ಇಮೇಲ್ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಸಂಭಾವ್ಯ ಖರೀದಿದಾರರು ಅಥವಾ ಹೂಡಿಕೆದಾರರ ಕೊರತೆಯಿಂದಾಗಿ ಓಲ್ಕ್ಸ್ ಗ್ರೂಪ್ ಅರ್ಜೆಂಟೀನಾ, ಮೆಕ್ಸಿಕೋ ಮತ್ತು ಕೊಲಂಬಿಯಾದಲ್ಲಿ ಕಾರ್ಯಾಚರಣೆಯನ್ನು ಮುಚ್ಚಿದೆ. ಇತರ ಮಾರುಕಟ್ಟೆಗಳಲ್ಲಿ ಅದರ ಭವಿಷ್ಯದ ಯೋಜನೆಗಳ ಬಗ್ಗೆ ಅನಿಶ್ಚಿತತೆ ಹಾಗೆಯೆ ಉಳಿದಿದೆ. "ಈ ಪರಿವರ್ತನೆಯಿಂದಾಗಿ ಪ್ರಭಾವಕ್ಕೆ ಒಳಗಾಗುವ ಎಲ್ಲ ಜನರನ್ನು ಬೆಂಬಲಿಸಲು ನಾವು ಬದ್ಧರಾಗಿದ್ದೇವೆ," ಎಂದು ಕಂಪನಿ ಹೇಳಿದೆ.
ಒಎಲ್‌ಎಕ್ಸ್‌ನ ಇತ್ತೀಚಿನ ಉದ್ಯೋಗ ಕಡಿತದ ಸುದ್ದಿಯು ಜನವರಿಯಲ್ಲಿ ತನ್ನ ಜಾಗತಿಕ ಉದ್ಯೋಗಿಗಳಲ್ಲಿ (1,500 ಉದ್ಯೋಗಗಳು) ಶೇಕಡ 15ರಷ್ಟು ಕಡಿತವನ್ನು ಘೋಷಿಸಿದ ನಂತರ ಬಂದಿವೆ. ಮಾರ್ಚ್ 31, 2022 ರಂದು ಕೊನೆಗೊಳ್ಳುವ ವರ್ಷದ ವಾರ್ಷಿಕ ವರದಿಯಲ್ಲಿ, ಒಎಲ್‌ಎಕ್ಸ್ ಜಾಗತಿಕವಾಗಿ 11,375 ಉದ್ಯೋಗಿಗಳನ್ನು ಹೊಂದಿದೆ ಎಂದು ಹೇಳಿದೆ.
ಹಲವಾರು ಸಂಸ್ಥೆಗಳಲ್ಲಿ ಉದ್ಯೋಗ ಕಡಿತ
"ಸರಿಸುಮಾರು ಒಂದು ಸಾವಿರ ಉದ್ಯೋಗಿಗಳನ್ನು ಬೈಜೂಸ್ ಉದ್ಯೋಗದಿಂದ ವಜಾಗೊಳಿಸಿದೆ. ಹೊಸದಾಗಿ ಉದ್ಯೋಗಿಗಳ ಸೇರ್ಪಡೆಯಾಗಿರುವ ಕಾರಣದಿಂದಾಗಿ ಈ ಕಡಿತದ ಬಳಿಕವೂ ಸಂಸ್ಥೆಯಲ್ಲಿ ಸುಮಾರು 50,000 ಉದ್ಯೋಗಿಗಳು ಇದ್ದಾರೆ," ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.
ಮನರಂಜನಾ ದೈತ್ಯ ಸಂಸ್ಥೆಯಾದ ಡಿಸ್ನಿಯು ಮೂರನೇ ಹಂತದ ಉದ್ಯೋಗ ಕಡಿತವನ್ನು ಆರಂಭ ಮಾಡಿದೆ. ಮೂರನೇ ಹಂತದ ಉದ್ಯೋಗ ಕಡಿತದಲ್ಲಿ ಡಿಸ್ನಿಯು 2500 ಮಂದಿಯನ್ನು ವಜಾಗೊಳಿಸುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ. ಡಿಸ್ನಿ ಸಂಸ್ಥೆಯಲ್ಲಿ 7,000 ಮಂದಿಯನ್ನು ಕೆಲಸದಿಂದ ವಜಾಗೊಳಿಸಲಾಗುವುದು ಎಂದು ಸಂಸ್ಥೆಯು ಈ ಹಿಂದೆ ಘೋಷಣೆ ಮಾಡಿದೆ. ಡಿಸ್ನಿ ಸಂಸ್ಥೆಯು ಅದಾದ ಬಳಿಕ ಸುಮಾರು 4000 ಮಂದಿಯನ್ನು ವಜಾಗೊಳಿಸುವ ಸಿದ್ಧತೆಯನ್ನು ಮಾಡಿಕೊಂಡಿದೆ.
ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವಾಟ್ಸಾಪ್‌ನ ಪೋಷಕ ಸಂಸ್ಥೆಯಾದ ಮೆಟಾ ಇನ್ನೊಂದು ಹಂತದ ಉದ್ಯೋಗ ಕಡಿತವನ್ನು ಈಗಾಗಲೆ ಘೋಷಣೆ ಮಾಡಿದೆ. ಕಳೆದ ವರ್ಷದ ನವೆಂಬರ್ ತಿಂಗಳಿನಲ್ಲೇ ಮೆಟಾ ಹಾಗೂ ಟ್ವಿಟ್ಟರ್ ಸಾವಿರಾರು ಉದ್ಯೋಗಿಗಳನ್ನು ವಜಾ ಮಾಡಿದೆ. ಮೆಟಾ ಸುಮಾರು 1,100 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ. ಸುಮಾರು ಶೇಕಡ 13ರಷ್ಟು ಉದ್ಯೋಗಿಗಳನ್ನು ದಿಡೀರ್ ವಜಾಗೊಳಿಸಿದೆ. ಫೇಸ್‌ಬುಕ್ ಅನ್ನು ನಿರ್ವಹಣೆ ಮಾಡುವ ಮೆಟಾದ ಷೇರುಗಳು ಈ ವರ್ಷ ಭಾರೀ ನಷ್ಟವನ್ನು ಅನುಭವಿಸಿದೆ. ಮೆಟಾ ಷೇರುಗಳು ಶೇಕಡ 70ರಷ್ಟು ಕುಸಿದಿದೆ. ಸುಮಾರು 255.79 ಬಿಲಿಯನ್ ಡಾಲರ್ ಕುಸಿತ ಕಂಡಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ



Click it and Unblock the Notifications