ಒಮಾನ್ (Oman) ತನ್ನ ನಾಗರಿಕರ ಮೇಲೆ ಆದಾಯ ತೆರಿಗೆಯನ್ನು(Income tax) ವಿಧಿಸುವ ಮೊದಲ ಗಲ್ಫ್ (Gulf state) ರಾಷ್ಟ್ರವಾಗಲು ಸಿದ್ಧವಾಗುತ್ತಿದೆ ಎಂದು ಬ್ಲೂಮ್‌ಬರ್ಗ್ ವರದಿಯನ್ನು ಮಾಡಿದೆ.
ಹೌದು, ಕಚ್ಚಾ ತೈಲ ರಫ್ತಿನಿಂದ ಬರುವ ಆದಾಯದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಒಮಾನ್ ಈ ಆದಾಯ ತೆರಿಗೆ ಕಾರ್ಯತಂತ್ರವನ್ನು ಅಳವಡಿಸಿಕೊಳ್ಳಲು ಸಿದ್ದವಾಗಿತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಒಮಾನ್ ರಾಷ್ಟ್ರ ತನ್ನ ನಾಗರಿಕರಿಗೆ 2028 ರಿಂದ ಆದಾಯ ತೆರಿಗೆ ವಿಧಿಸಲಿದೆ ಇದರ ಮೂಲಕ ತೆರಿಗೆ ವಿಧಿಸಿದ ಮೊದಲ ಗಲ್ಸ್ ರಾಷ್ಟ್ರ ಎಂಬ ಹೆಗ್ಗಳಿಕೆಯನ್ನು ಪಡೆದುಕೊಳ್ಳಲಿದೆ. ಈ ಹೊಸ ಶೇ. 5 ತೆರಿಗೆಯು 42,000 ರಿಯಾಲ್‌ಗಳು $109,000) ಮತ್ತು ಅದಕ್ಕಿಂತ ಹೆಚ್ಚಿನ ವಾರ್ಷಿಕ ಆದಾಯ ಹೊಂದಿರುವವರಿಗೆ ಮಾತ್ರ ಈತೆರಿಗೆಗಳು ಅನ್ವಯವಾಗುತ್ತದೆ. ಸರಿಸುಮಾರು ಇದು ಶೇ. 1 ಆದಾಯಗಳಿಸಿದವರ ಮೇಲೆ ಪರಿಣಾಮವನ್ನು ಬೀರುತ್ತದೆ ಎಮದು ವರದಿಯಲ್ಲಿ ಮಾಹಿತಿಯನ್ನು ತಿಳಿಸಲಾಗಿದೆ.
ಒಮಾನ್ ತನ್ನ ನಾಗರಿಕರ ಮೇಲೆ ಆದಾಯ ತೆರಿಗೆಯನ್ನು ವಿಧಿಸುವ ಕ್ರಮವು ಸಾಮಾಜಿಕ ವೆಚ್ಚವನ್ನು ಉಳಿಸಿಕೊಂಡು ತೈಲ ಆದಾಯದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯನ್ನು ಒಳಗೊಂಡಿದೆ ಎಂದು ಎಂದು ಆರ್ಥಿಕ ಸಚಿವ ಸೈದ್ ಬಿನ್ ಮೊಹಮ್ಮದ್ ಅಲ್-ಸಕ್ರಿ ಮಾಹೊತಿಯನ್ನು ತಿಳಿಸಿದ್ದಾರೆ.
ಒಮಾನ್‌ನ ಹೊಸ ಆದಾಯ ತೆರಿಗೆ ನೀತಿ
ಆರು ರಾಷ್ಟ್ರಗಳ ಗಲ್ಫ್ ಸಹಕಾರ ಮಂಡಳಿಯ (GCC) ಯಾವುದೇ ಸದಸ್ಯರು ಆದಾಯ ತೆರಿಗೆಯನ್ನು ವಿಧಿಸದ ಪ್ರದೇಶದಲ್ಲಿ ಈ ಕ್ರಮವು ಒಂದು ಪ್ರಮುಖ ಮಹತ್ವದ ಬದಲಾವಣೆಯಾಗುಲು ಸಾಧ್ಯವಾಗುತ್ತದೆ. ಈ ನೀತಿಯು ವರ್ಷದಿಂದ ಹೆಚ್ಚಿನ ಸಂಬಳ ಪಡೆಯುವ ವಿದೇಶಿ ಕಾರ್ಮಿಕರನ್ನು ಈ ಪ್ರದೇಶಕ್ಕೆ ಕರೆತರುತ್ತದೆ ಎಂದು ಒಮಾನ್‌ನ ಈ ನಿರ್ಧಾರವು ಆರ್ಥಿಕವಾಗಿ ಹೆಚ್ಚಿನ ಬೆಂಬಲ ಸಿಗುವಂತೆ ಆಗುತ್ತದೆ ಎಮದು ಈ ನಿರ್ಧಾರವನ್ನು ಕೈಗೊಂಡಿದೆ.
ಈ ಕುರಿತು ಅಬುಧಾಬಿ ಕಮರ್ಷಿಯಲ್ ಬ್ಯಾಂಕಿನ ಮುಖ್ಯ ಅರ್ಥಶಾಸ್ತ್ರಜ್ಞೆ ಮೋನಿಕಾ ಮಲಿಕ್ ಒಮಾನ್ ರಾಷ್ಟ್ರದ
ವ್ಯಾಪ್ತಿ ಚಿಕ್ಕದಾದರೂ ಈ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಆರ್ಥಿಕ ಅಭಿವೃದ್ಧಿಯಾಗಲಿದೆ ಎಂದು ಬ್ಲೂಮ್‌ಬರ್ಗ್‌ಗೆ ವರದಿಯಲ್ಲಿ ಮಾಹಿತಿಯನ್ನು ತಿಳಿಸಿದ್ದಾರೆ.
ಒಮಾನ್ ಆದಾಯ ತೆರಿಗೆಯ ವಿಧಿಸುವಂತಹ ಪ್ರಸ್ತಾವನೆಯಿಂದಾಗಿ ತನ್ನ ರಾಷ್ಟ್ರದ ಮೇಲಿರುವಂತಹ ಅಪಾರವಾದ ಆಕರ್ಷಣೆಯನ್ನು ಕಳೆದುಕೊಳ್ಳಬಹುದಾದ ಭೀತಿ ಇದ್ದರೂ, ಅದು ಇನ್ನಿತರೆ ಆರ್ಥಿಕ ಸುಧಾರಣೆಗಳ ಮೂಲಕ ಸ್ಪರ್ಧಾತ್ಮಕತೆಯನ್ನು ಕಾಯ್ದುಕೊಳ್ಳಲು ಪ್ರಯತ್ನವನ್ನು ಮಾಡುತ್ತಿದೆ.
ಒಮಾನ್ ರಾಷ್ಟ್ರವು ಹಣಕಾಸು ಸುಧಾರಣೆಗಳಾದ ಬಜೆಟ್ ನಿಯಂತ್ರಣ, ಆದಾಯ ವಿಸ್ತರಣೆ, ಖಾಸಗಿ ಹೂಡಿಕೆಗಳಿಗೆ ಉತ್ತೇಜನೆ, ಇತ್ಯಾದಿ ಕ್ರಮಗಳನ್ನೂ ಒಮಾನ್ ಒಳಗೊಂಡಿದೆ.
ತೈಲ ಅನಿಲಗಳುGCC ರಾಷ್ಟ್ರಗಳು ಹೆಚ್ಚಿನ ಹಣಕಾಸಿನ ಸ್ಥಾನಗಳನ್ನು ಹೊಂದಿದ್ದರೂ ಸಹ ಸೌದಿ ಅರೇಬಿಯಾ ಮತ್ತು ಬಹ್ರೇನ್ ಮಾತ್ರ ಈ ವರ್ಷ ಕೊರತೆಯನ್ನು ಎದುರಿಸುವಂತಹ ನೀರೀಕ್ಷೆಗಳ ಇವೆ.ಜಾಗತಿಕ ಮಟ್ಟದಲ್ಲಿ
ಪಳೆಯುಳಿಕೆ ಇಂಧನಗಳಿಗೆ ಬೇಡಿಕೆ ಕಡಿಮೆಯಾಗುತ್ತಿದ್ದಂತೆ ಈ ರಾಜ್ಯಗಳಿಗೆ ಅಂತಿಮವಾಗಿ ಆದಾಯ ತೆರಿಗೆಗಳು ಅವಶ್ಯಕತೆ ಇದೆ ಅಂತರರಾಷ್ಟ್ರೀಯ ಹಣಕಾಸು ನಿಧಿ ಮಾಹಿತಿಯನ್ನು ತಿಳಿಸಿದೆ.
2023 ರಲ್ಲಿ ಒಮಾನ್ ರಾಷ್ಟ್ರವು OEC ದತ್ತಾಂಶದ ಪ್ರಕಾರ $29.3 ಶತಕೋಟಿ ಮೌಲ್ಯದ ಕಚ್ಚಾ ತೈಲವನ್ನು ರಫ್ತು ಮಾಡಿದೆ.
ಗಲ್ಫ್ ಸಹಕಾರ ಮಂಡಳಿಯ (GCC) ರಾಷ್ಟ್ರಗಳು ವರ್ಷಗಳ ಕಾಲ ತೈಲ ಆಧಾರಿತ ಆರ್ಥಿಕತೆಯ ಮೇಲೆ ನಂಬಿಕೆ ಇಟ್ಟುಕೊಂಡಿದ್ದರೂ, ಹೊಸ ಜಾಗತಿಕ ಆರ್ಥಿಕ ಸವಾಲುಗಳು ಇದೀಗ ಈ ರಾಷ್ಟ್ರಗಳನ್ನು ತಮ್ಮ ನೀತಿಯ ಮೌಲ್ಯಮಾಪನಕ್ಕೆ ಒತ್ತಾಯಿಸುತ್ತಿವೆ. ತೈಲ ಮತ್ತು ಅನಿಲದ ಮೇಲೆ ಅವಲಂಬನೆಯಿರುವ ಈ ರಾಷ್ಟ್ರಗಳಲ್ಲಿ, ಇದೀಗ ಆದಾಯ ತೆರಿಗೆ (Income Tax) ಎಂಬ ವಿಷಯವು ಗಂಭೀರ ಚರ್ಚೆಗೆ ಕಾರಣವಾಗಿದೆ.


Click it and Unblock the Notifications