ಬಿಗ್ ರಿಲೀಫ್! ಇನ್ಮುಂದೆ ರೈಡ್-ಹೇಲಿಂಗ್ ಸಂಸ್ಥೆಯಾದ ನಮ್ಮ ಯಾತ್ರಿ,ತನ್ನ ಅಪ್ಲಿಕೇಶನ್‌ನಲ್ಲಿ 'ನಮ್ಮ ಟ್ರಾನ್ಸಿಟ್' ( Namma Transit app) ಎಂಬ ಹೊಸ ವೈಶಿಷ್ಟ್ಯವನ್ನು ಬಿಡುಗಡೆಯನ್ನು ಮಾಡಿದೆ. ಇದರಲ್ಲಿ ಒಂದೇ ಕಡೆ ಒಂದೇ ಆ್ಯಪ್‌ನಲ್ಲಿ ಮೆಟ್ರೋ, ಆಟೋ, ಕ್ಯಾಬ್ ಸೇವೆಯನ್ನು ಒದಗಿಸುತ್ತದೆ.ಈ ಹೊಸ ವೈಶಿಷ್ಟ್ಯವು ಪ್ರಯಾಣಿಕರಿಗೆ ಪ್ರಯಾಣದ ಸಮಯದಲ್ಲಿ ಹೆಚ್ಚಿನ ಅನುಕೂಲವಾಗುತ್ತದೆ. ಯಾವುದೇ ತೊಂದರೆ ಇಲ್ಲದ ಹಿತಕರವಾದ ಪ್ರಯಾಣದ ಅನುಭವವನ್ನು ನೀಡುತ್ತದೆ. ಪ್ರತಿ ಹಂತದಲ್ಲೂ ಇದು ರಿಯಲ್-ಟೈಮ್ ನ್ನು ಪ್ರಯಾಣಿಕರಿಗೆ ಒದಗಿಸುತ್ತದೆ.
ಹೌದು, 'ನಮ್ಮ ಟ್ರಾನ್ಸಿಟ್' ಮೂಲಕ ಬಳಕೆದಾರಿಗೆ ಹತ್ತಿರದ ಮೆಟ್ರೋ ನಿಲ್ದಾಣ, ರೈಲು ಸಮಯ ಮತ್ತು ಇತರ ಅಗತ್ಯ ಮಾಹಿತಿಗಳು ಸಿಗುತ್ತೇವೆ. ನಮ್ಮ ಟ್ರಾನ್ಸಿಟ್ ಮೆಟ್ರೋ,ಆಟೋ ಮತ್ತು ಕ್ಯಾಬ್ ಸೇವೆಗಳನ್ನು ಒಂದೇ ಅಪ್ಲಿಕೇಶನ್‌ನಲ್ಲಿ ಒದಗಿಸುವ ಮೂಲಕ ಪ್ರಯಾಣವನ್ನು ಸುಲಭವನ್ನು ಮಾಡುತ್ತದೆ.

ಈ 'ನಮ್ಮ ಟ್ರಾನ್ಸಿಟ್' ಹೊಸ ವೈಶಿಷ್ಟ್ಯವು ಬಳಕೆದಾರರಿಗೆ ವೈಯಕ್ತಿಕ ಸಾರಿಗೆ ಸಹಾಯಕವಾಗಿ ಕಾರ್ಯನಿರ್ವಹಿಸುತ್ತದೆ. ನೀವು ಯಾವ ಮೆಟ್ರೋ ನಿಲ್ದಾಣಕ್ಕೆ ಹೋಗಬೇಕು,ಯಾವ ಪ್ಲಾಟ್‌ಫಾರ್ಮ್ ಮತ್ತು ಗೇಟ್ ಬಳಸಬೇಕು.ಯಾವಾಗ ಸಾರಿಗೆ ವಿಧಾನಗಳನ್ನು ಬದಲಾಯಿಸಬೇಕು ಎಂಬ ಮಾಹಿತಿಗಳು ಇದರಲ್ಲಿ ನಿಮ್ಮಗೆ ಸಿಗುತ್ತದೆ. ಇದಲ್ಲದೇ ಮೆಟ್ರೋ ಮತ್ತು ಆಟೋಗಳನ್ನು ರಿಯಲ್ ಟೈಮ್‌ನಲ್ಲಿ ಟ್ರ್ಯಾಕ್ ಸಹ ನೀವು ಮಾಡಬಹುದು. ಆದ್ದರಿಂದ ಇಡೀ ಪ್ರಯಾಣ ಪ್ರಯಾಣಿಕರ ನಿಯಂತ್ರಣದಲ್ಲಿರುತ್ತದೆ ಎಂದು ಕಂಪನಿ ಮಾಹಿತಿಯನ್ನು ತಿಳಿಸಿದೆ.
ಕೇಂದ್ರದ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾಮರ್ಸ್ (ONDC) ಪ್ರೋಟೋಕಾಲ್ ಅಡಿಯಲ್ಲಿ 'ನಮ್ಮ ಟ್ರಾನ್ಸಿಟ್' ಎಂಬ ಹೊಸ ವೈಶಿಷ್ಟ್ಯವನ್ನು ಆರಂಭಮಾಡಲಾಗಿದೆ. ಇದು ಸಾರ್ವಜನಿಕ ಸಾರಿಗೆಯನ್ನು ಉತ್ತೇಜಿಸಲು ಈ ವೈಶಿಷ್ಟ್ಯ ಸಹಾಯ ಮಾಡುತ್ತದೆ ಎಂದು ನಮ್ಮ ಯಾತ್ರಿಯ ಸಹ-ಸಂಸ್ಥಾಪಕರಾದ ಮಾಗಿಝನ್ ಸೆಲ್ವನ್ ಮತ್ತು ಶಾನ್ ಎಂಎಸ್ ಅವರು ಹೇಳಿದ್ದಾರೆ.
ನಮ್ಮ ಟ್ರಾನ್ಸಿಟ್‌ನೊಂದಿಗೆ, ಬುಕಿಂಗ್‌ನಿಂದ ಹಿಡಿದು ಎಚ್ಚರಿಕೆಗಳವರೆಗೆ ಸಾರ್ವಜನಿಕ ಸಾರಿಗೆಯನ್ನು ಮೊದಲ ಆಯ್ಕೆಯನ್ನಾಗಿ ಮಾಡಲು ಪ್ರತಿಯೊಂದು ಅಂಶವನ್ನು ವಿನ್ಯಾಸಗೊಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ. ಪ್ರಯಾಣವು ದಿನನಿತ್ಯದ ಕೆಲಸದಂತೆ ಅಲ್ಲ, ಮ್ಯಾಜಿಕ್‌ನಂತೆ ಭಾಸವಾಗಬೇಕು ಎಂದು ಅವರು ಹೇಳಿದ್ದಾರೆ.
ಬೆಂಗಳೂರು ದಕ್ಷಿಣದ ಸಂಸದ ಎಲ್.ಎಸ್. ತೇಜಸ್ವಿ ಸೂರ್ಯ ಹೇಳಿರುವ ಪ್ರಕಾರ ಖಾಸಗಿ ಸಾರಿಗೆಗಿಂತ ಸಾರ್ವಜನಿಕ ಸಾರಿಗೆ ಉತ್ತಮವಾದಾಗ ನಮ್ಮ ಬೆಂಗಳೂರು ಗೆಲ್ಲುತ್ತದೆ. ನಮ್ಮ ಬೆಂಗಳೂರು ತನ್ನ ಸಂಚಾರ ಕಥೆಗಳನ್ನು ಮೀರಿಸುತ್ತದೆ ಎಂದು ಸಾಬೀತುಪಡಿಸೋಣ, ಮೆಟ್ರೋವನ್ನು ವಿಸ್ತರಿಸೋಣ ಮತ್ತು ಪ್ರತಿಯೊಂದು ಫೀಡರ್ ಅನ್ನು ವಿದ್ಯುದ್ದೀಕರಿಸೋಣ
ಎಂದು ಅವರು ಅಭಿಪ್ರಾಯಪಟ್ಟಿದ್ಧಾರೆ.
ಪ್ರಸ್ತುತ, ನಮ್ಮ ಟ್ರಾನ್ಸಿಟ್ ಆಯ್ದ ಬಳಕೆದಾರರಿಗೆ ಮಾತ್ರ ಸೇವೆಯಲ್ಲಿ ಸಲ್ಲಿಸುತ್ತದೆ. ಮುಂದಿನ ವಾರದಲ್ಲಿ ಎಲ್ಲಾ ಬಳಕೆದಾರರಿಗೆ ಈ ಸೇವೆ ಸಿಗಲಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಒಲಾ, ಉಬರ್ ರ್‍ಯಾಪಿಡೋ ಆಪ್‌ಗಳಿಗಿಂತ ಹೆಚ್ಚಿನ ಸೌಲಭ್ಯ ಪ್ರಯಾಣಿಕರಿಗೆ ಇದರ ಮೂಲಕ ಸಿಗುತ್ತದೆ.ಮತ್ತು ವಂಚನೆಯಂತಹ ಪ್ರಕರಣಗಳು ಕಡಿಮೆಯಾಗುತ್ತದೆ. ಇದರಿಂದಗಿ ಸಮದ ಉಳಿತಾಯವಾಗುತ್ತದೆ. ಮೆಟ್ರೋ, ಆಟೋ, ಕ್ಯಾಬ್ ಒಂದೇ ಆ್ಯಪ್‌ನಲ್ಲಿ ಇರುವುದರಿಂದ ಪ್ರಯಾಣಿಕರಿಗೆ ಯಾವುದೇ ಕಿರಿಕಿರಿಯ ಅನುಭವವಾಗುವುದಿಲ್ಲ ಎಲ್ಲಾ ಸೌಲಭ್ಯಗಳು ಒಂದೇ ಕಡೆಯಲ್ಲಿ ಸಿಗುತ್ತದೆ.
More From GoodReturns

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಭಾರತೀಯ ಷೇರು ಮಾರುಕಟ್ಟೆ: ಇಂದಿನ ವಹಿವಾಟಿನಲ್ಲಿ ಅಡಗಿದೆ ಅಚ್ಚರಿಯ ತಿರುವು!

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!



Click it and Unblock the Notifications