ಒನ್ ಪ್ಲಸ್ ನಿಂದ ಭಾರತದಲ್ಲಿ ಸೋಮವಾರ ಅದರ ಮೊದಲ ಧರಿಸುವಂಥ ಫಿಟ್ ನೆಸ್ ಟ್ರ್ಯಾಕರ್ ಬಿಡುಗಡೆ ಮಾಡಲಾಗಿದೆ. ಇದನ್ನು ಸರಳವಾಗಿ OnePlus ಬ್ಯಾಂಡ್ ಎಂದು ಕರೆಯಲಾಗಿದೆ. ಈ ಸ್ಮಾರ್ಟ್ ಬ್ಯಾಂಡ್ ತನ್ನ ಪ್ರತಿಸ್ಪರ್ಧಿಯಾದ ಶಿಯೋಮಿಯ ಹೆಸರಾಂತ Mi ಬ್ಯಾಂಡ್ 5 ಜತೆಗೆ ಸೆಣಸಲಿದೆ.
ಒನ್ ಪ್ಲಸ್ ಫಿಟ್ ನೆಸ್ ಬ್ಯಾಂಡ್ ನಲ್ಲಿ ಟಚ್ ಸೆನ್ಸೆಟಿವ್ AMOLED ಡಿಸ್ ಪ್ಲೇ ಇದೆ. ರಕ್ತದಲ್ಲಿನ ಆಮ್ಲಜನಕದ ಗರಿಷ್ಠ ಪ್ರಮಾಣ ಟ್ರ್ಯಾಕ್ ಮಾಡುತ್ತದೆ ಮತ್ತು ಹೃದಯ ಬಡಿತದ ನಿಗಾ ಮಾಡುತ್ತದೆ. ಆರೋಗ್ಯದ ಬಗ್ಗೆ ಕಾಳಜಿ ಇರುವವರಿಗಾಗಿ ಈ ಬ್ಯಾಂಡ್ ರೂಪಿಸಲಾಗಿದೆ.
ಇದರ ಮೂಲಕ ಒನ್ ಪ್ಲಸ್ ಹೆಲ್ತ್ ಆಪ್ ಬಳಸಿಕೊಂಡು ಹೃದಯ ಬಡಿತದ ಜತೆಗೆ ನಿದ್ದೆಯ ಪ್ರಮಾಣ, ನಿತ್ಯದ ಚಟುವಟಿಕೆಗಳ ನಿಗಾ ಮಾಡಬಹುದು. ಈ ಬ್ಯಾಂಡ್ ಗಳ ಮೂಲಕವಾಗಿ ಹದಿಮೂರು ವಿಧವಾದ ವ್ಯಾಯಾಮಗಳ ಮೋಡ್ ಹೊಂದಿದೆ. ಬ್ಯಾಂಡ್ ಬೆಲೆ 2499 ರುಪಾಯಿ ಇದೆ. ಕಪ್ಪು ಸ್ಟ್ರಾಪ್ ನೊಂದಿಗೆ ಬರುತ್ತದೆ.

ಈ ಬ್ಯಾಂಡ್ ಖರೀದಿ ಮಾಡಬೇಕು ಎಂದಿದ್ದಲ್ಲಿ ಒನ್ ಪ್ಲಸ್.ಇನ್, ಅಮೆಜಾನ್, ಒನ್ ಪ್ಲಸ್ ಆನ್ ಲೈನ್ ಸ್ಟೋರ್ ಆಪ್ ಮತ್ತು ಇತರ ಆಫ್ ಲೈನ್ ಸ್ಟೋರ್ಸ್ ಮೂಲಕ ಜನವರಿ 13ರಿಂದ ಖರೀದಿಸಬಹುದು. ರೆಡ್ ಕೇಬಲ್ ಕ್ಲಬ್ ಸದಸ್ಯರು ಒನ್ ಪ್ಲಸ್ ಆಪ್ ಸ್ಟೋರ್ ಮತ್ತು ಒನ್ ಪ್ಲಸ್.ಇನ್ ನಲ್ಲಿ ಎಕ್ಸ್ ಕ್ಲೂಸಿವ್ ಆಗಿ ಬುಕ್ ಮಾಡಿದ್ದಲ್ಲಿ ಜನವರಿ 12ರಂದೇ ದೊರೆಯುತ್ತದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?



Click it and Unblock the Notifications