ಈರುಳ್ಳಿ ಬೆಳೆಗಾರರಿಗೆ ಸರ್ಕಾರದಿಂದ ಗುಡ್‌ನ್ಯೂಸ್ ಸಿಕ್ಕಿದೆ. ಅದೇನೆಂದರೆ ಈರುಳ್ಳಿಯ ಮೇಲಿನ ರಫ್ತು ಸುಂಕವನ್ನು ರದ್ದುಗೊಳಿಸುವುದಾಗಿ ಸರ್ಕಾರ ತಿಳಿಸಿದೆ. ಈ ನಿರ್ಧಾರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಮತ್ತು ಇದು ರೈತರು ಹಾಗೂ ರಫ್ತುದಾರರಿಗೆ ಮುಗ್ಗರ ಬೆಳೆಯಿಂದ ಆಗಿರುವ ತೊಂದರೆಗೆ ಪರಿಹಾರ ನೀಡಲಿದೆ ಎಂಬುದಾಗಿದೆ.

ಪ್ರಸ್ತುತ ಈರುಳ್ಳಿಯ ರಫ್ತು ಮೇಲೆ 20% ಸುಂಕ ವಿಧಿಸಲಾಗಿತ್ತು. ಆದರೆ ಅದನ್ನು ಶೂನ್ಯಗೊಳಿಸಲಾಗಿದೆ. ಅಂದರೆ ರಫ್ತು ಮೇಲಿನ ಸುಂಕವೇ ರದ್ದಾಗಿದೆ ಎನ್ನಬಹುದು. ಈ ನಿರ್ಧಾರವನ್ನು ಕಂದಾಯ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ. ಕೃಷಿ ಮಾರುಕಟ್ಟೆ ಮತ್ತು ಚಿಲ್ಲರೆ ಬೆಲೆಗಳು ಸಹಜ ಸ್ಥಿತಿಗೆ ಮರಳುತ್ತಿದ್ದಂತೆ, ಈ ಸುಂಕ ರದ್ದತಿ ರೈತರಿಗೆ ಉತ್ತಮ ಬೆಲೆ ದೊರಕಿಸುವಂತೆ ಮಾಡುತ್ತದೆ. ಹಾಗೂ ಇದು ಗ್ರಾಹಕರಿಗೂ ಅನುಕೂಲವಾಗುತ್ತದೆ, ಏಕೆಂದರೆ ಈರುಳ್ಳಿಯ ಕೈಗೆಟುಕುವ ಬೆಲೆ ನಿರ್ವಹಿಸಬಹುದು ಎಂಬುದಾಗಿದೆ.
ಇನ್ನು ಸದ್ಯ ಕೃಷಿ ಮಾರುಕಟ್ಟೆಗಳಲ್ಲಿ ಬೆಲೆಗಳು ಹಿಂದಿನ ವರ್ಷಕ್ಕಿಂತಲೂ ಹೆಚ್ಚಾಗಿವೆ. ಅಖಿಲ ಭಾರತ ತೂಕದ ಸರಾಸರಿ ಬೆಲೆಯಲ್ಲಿ 39% ಕುಸಿತ ಕಂಡುಬಂದಿದೆ. ಕಳೆದ ಒಂದು ತಿಂಗಳಲ್ಲಿ ಚಿಲ್ಲರೆ ಬೆಲೆಯೂ 10% ತಗ್ಗಿದೆ. ಅಂದರೆ ಕಳೆದ ಮೂರು ವಾರಗಳಲ್ಲಿ, ಕ್ವಿಂಟಲ್‌ಗೆ ಈರುಳ್ಳಿಯ ಬೆಲೆ ರೂ. 2,270 ರಿಂದ ರೂ. 1,420 ಗೆ ಕುಸಿದಿದೆ. ಇದರ ಜೊತೆಗೆ ಮಾರ್ಕೆಟ್ ಬೆಲೆ ಕೂಡಾ ಕ್ವಿಂಟಲ್‌ಗೆ ರೂ. 850 ಕ್ಕೆ ಇಳಿದಿದೆ ಎನ್ನಬಹುದಾಗಿದೆ.
ಇನ್ನು ಸಾಮಾನ್ಯವಾಗಿ ಈರುಳ್ಳಿಯನ್ನು ಭಾರತದಿಂದಲೇ ರಪ್ತು ಮಾಡಲಾಗುತ್ತಿತ್ತು. ಆದರೆ ರಫ್ತು ಸುಂಕದಿಂದಾಗಿ ಭಾರತದ ಮಾರುಕಟ್ಟೆ ಪಾಲು ಇಳಿಯುವ ಸಾಧ್ಯತೆ ಇತ್ತು. ಇದರಿಂದ ವ್ಯಾಪರಿಗಳು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಹೀಗಾಗಿ ಸರ್ಕಾರ ಈ ಸುಂಕವನ್ನು ಸಂಪೂರ್ಣವಾಗಿಇ ರದ್ದುಗೊಳಿಸಿತು. ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಸ್ಥಾನವನ್ಉ ಪುನಃ ಬಲಪಡಿಸಲು ಈ ನಿರ್ಧಾರ ತೆಗೆದುಕೊಂಡಿದೆ.
ಇನ್ನು ಸರ್ಕಾರದ ಈ ಈರುಳ್ಳಿಯ ರಫ್ತು ಸುಂಕವನ್ನು 0%ಗೆ ಇಳಿಸುವ ಈ ನಿರ್ಧಾರವು ರೈತರಿಗೆ ಉತ್ತಮ ಬೆಲೆ ನೀಡಲಿದೆ. ಮತ್ತು ರಫ್ತುದಾರರಿಗೆ ಸವಲತ್ತು ನೀಡಲಿದೆ. ಇದು ಭಾರತದ ಈರುಳ್ಳಿ ರಫ್ತು ಮಾರುಕಟ್ಟೆಯನ್ನು ಮತ್ತೆ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ, ಹಾಗೆಯೇ ಗ್ರಾಹಕರಿಗೂ ಕಡಿಮೆ ದರದಲ್ಲಿ ಈರುಳ್ಳಿ ಲಭ್ಯವಾಗುವಂತೆ ಮಾಡುತ್ತದೆ.
ಇನ್ನು ಇದರಿಂದ ರೈತರಿಗೂ ಉಪಯೋಗವಿದೆ. ಸುಂಕ ಇಳಿಕೆಯಾಗಿರುವ ಪರಿಣಾಮದಿಂದ, ಅಂತರಾಷ್ಟ್ರೀಯ ಮಾರುಕಟ್ಟೆಇಯಲ್ಲಿ ಭಾರತೀಯ ಈರುಳ್ಳಿಗೆ ಬೇಡಿಕೆ ಮತ್ತೆ ಹೆಚ್ಚಾಗುತ್ತದೆ. ಇದರಿಂದ ರೈತರು ಉತ್ತಮ ಬೆಲೆ ಪಡೆಯುವ ಸಾಧ್ಯತೆ ಹೆಚ್ಚುತ್ತದೆ. ಈಗ ಈರುಳ್ಳಿಯನ್ನು ರಫ್ತು ಮಾಡಲು ಯಾವುದೇ ಸುಂಕವಿಲ್ಲ, ಆದ್ದರಿಂದ ಹೆಚ್ಚು ದೇಶಗಳು ಭಾರತದಿಂದ ಈರುಳ್ಳಿಯನ್ನು ಖರೀದಿಸಲು ಮುಂದೆ ಬರುತ್ತವೆ. ಬೇಡಿಕೆ ಹೆಚ್ಚಿದರೆ, ಬೆಲೆ ಸಹ ಪ್ರಾಕೃತಿಕವಾಗಿ ಏರುತ್ತದೆ, ಇದು ರೈತರಿಗೆ ಹೆಚ್ಚು ಆದಾಯ ತರುವಂತೆ ಮಾಡುತ್ತದೆ. ಇನ್ನು ಹಿಂದಿನ 20% ರಫ್ತು ಸುಂಕದಿಂದಾಗಿ, ಭಾರತ, ಪಾಕಿಸ್ತಾನ, ಈಜಿಪ್ಟ್ ಮತ್ತು ಚೀನಾ ಮುಂತಾದ ದೇಶಗಳಿಗೆ ಮಾರುಕಟ್ಟೆ ಹಂಚಿಕೆಯನ್ನು ಕಳೆದುಕೊಳ್ಳುತ್ತಿತ್ತು. ಆದರೆ ಈಗ ನಮ್ಮ ಈರುಳ್ಳಿಯ ರಫ್ತು ಮತ್ತೆ ಹೆಚ್ಚಾಗಲಿದೆ, ಇದು ಭಾರತದ ಕೃಷಿ ರಫ್ತು ವಲಯಕ್ಕೆ ಒಳ್ಳೆಯದಾಗಿದೆ.
ಇನ್ನು ಈ ನಿರ್ಧಾರದಿಂದ ಈರುಳ್ಳಿ ಬೆಳೆಗಾರರು ನೇರವಾಗಿ ಲಾಭ ಪಡೆಯಬಹುದು. ಅಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಿಂದ, ಹೆಚ್ಚಿನ ಬೇಡಿಕೆ ಮತ್ತು ಬೆಲೆ ಏರಿಕೆ ರೈತರಿಗೆ ಹೆಚ್ಚು ಆದಾಯ ತರಬಹುದು. ಆದರೆ ದೇಶೀಯ ಮಾರುಕಟ್ಟೆಯಲ್ಲಿ ಈರುಳ್ಳಿಯ ಬೆಲೆ ತುಂಬಾ ಹೆಚ್ಚಾದರೆ ಗ್ರಾಹಕರಿಗೆ ಬಾಧೆಯಾಗಬಹುದು. ಆದ್ದರಿಂದ, ಸರ್ಕಾರ ರೈತರಿಗೂ, ಗ್ರಾಹಕರಿಗೂ ಸಮತೋಲನ ಕಾಯ್ದುಕೊಳ್ಳಬೇಕಾಗಿದೆ. ಒಟ್ಟಿನಲ್ಲಿ ಈ ನಿರ್ಧಾರದಿಂದ ಹೊಲದಲ್ಲಿ ಕಷ್ಟಪಟ್ಟು ಬೆಳೆ ಬೆಳೆಯುವ ರೈತರಿಗೆ ಹೊರೆಯಾಗುವುದಿಲ್ಲ.


Click it and Unblock the Notifications