ಆನ್‌ಲೈನ್ ಪ್ಲಾಟ್‌ಫಾರ್ಮ್‌ ಉಪಟಳ; 140 ಹಾಪ್​ಕಾಮ್ಸ್ ಮಳಿಗೆಗಳು ಸ್ಥಗಿತ! ಎಲ್ಲೆಲ್ಲಿ ಗೊತ್ತಾ?

ಪ್ರಸ್ತುತ ಕುಳಿತಲ್ಲಿಗೇ ಏನು ಬೇಕಾದರೂ ತರಿಸಿಕೊಳ್ಳಬಹುದು. ಆ ಪರಿಯಾಗಿ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಜಯಮಾನ ಬಂದಿದೆ ಎಂದೇ ಹೇಳಬಹುದು. ಕಾರಣ, ಜನರು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಎಲ್ಲವನ್ನು ಖರೀದಿ ಮಾಡುತ್ತಿದ್ದಾರೆ. ಬಹುತೇಕರು ಇದನ್ನೇ ಅವಲಂಬಿಸಿದ್ದಾರೆ. ಇದರಿಂದ ಸರ್ಕಾರಿ ಸ್ವಾಮ್ಯದ ತೋಟಗಾರಿಕಾ ಉತ್ಪಾದಕರ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣಾ ಸೊಸೈಟಿ (HoOPCOMS) ಮಳಿಗೆಗಳು ಮುಚ್ಚುವ ಹಂತವನ್ನು ತಲುಪಿವೆ.

ಹೌದು, ಖಾಸಗಿ ಕಂಪನಿಗಳು ತಮ್ಮ ಪ್ಲಾಟ್‌ಫಾರ್ಮ್‌ ಮೂಲಕ ರೈತರಿಂದ ನೇರವಾಗಿ ಸ್ಪರ್ಧಾತ್ಮಕ ಬೆಲೆಗೆ ತರಕಾರಿಗಳು ಮತ್ತು ಹಣ್ಣುಗಳನ್ನು ಮಾರಾಟ ಮಾಡುತ್ತಿವುದೇ ಇದಕ್ಕೆ ಕಾರಣ.

ಆನ್‌ಲೈನ್ ಪ್ಲಾಟ್‌ಫಾರ್ಮ್‌ ಹಾವಳಿ; 140 ಹಾಪ್​ಕಾಮ್ಸ್ ಮಳಿಗೆ ಸ್ಥಗಿತ!

ಸರ್ಕಾರಿ ಸ್ವಾಮ್ಯದ ಹಾಪ್​ಕಾಮ್ಸ್​ನ 140 ಮಳಿಗೆಗಳು ಬಂದ್​

ರೈತರು ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಲಾಭದಾಯಕ ಬೆಲೆಗಳನ್ನು ಪಡೆಯಲು ಹಾಗೂ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಗುಣಮಟ್ಟದ ತಾಜಾ ಕೃಷಿ ಉತ್ಪನ್ನಗಳನ್ನು ನೀಡಲು 1965 ರಲ್ಲಿ ಹಾಪ್‌ಕಾಮ್ಸ್​​ ಅನ್ನು ಆರಂಭಿಸಲಾಯಿತು. ಆದರೆ ಸದ್ಯ ಸರ್ಕಾರಿ ಸ್ವಾಮ್ಯದ ತೋಟಗಾರಿಕಾ ಉತ್ಪಾದಕರ ಸಹಕಾರ ಮಾರುಕಟ್ಟೆ ಮತ್ತು ಸಂಸ್ಕರಣಾ ಸೊಸೈಟಿ ಮಳಿಗೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು, ಕಳೆದ ಐದು ವರ್ಷಗಳಲ್ಲಿ 140 ಮಳಿಗೆಗಳನ್ನು ಮುಚ್ಚಲಾಗಿದೆ ಎಂಬ ಮಾಹಿತಿ ಇದೆ.

ರಾಜ್ಯದಲ್ಲಿ 26 ಹಾಪ್‌ಕಾಮ್ಸ್ ಶಾಖೆಗಳು

ಬೆಂಗಳೂರು, ಬೆಳಗಾವಿ, ಬೀದರ್, ಬಳ್ಳಾರಿ, ಚಿಕ್ಕಮಗಳೂರು. ಶಿವಮೊಗ್ಗ, ಗದಗ, ಧಾರವಾಡ, ದಾವಣಗೆರೆ ಮತ್ತು ಇತರ ಸ್ಥಳಗಳಲ್ಲಿ ಸುಮಾರು 600 ಮಳಿಗೆಗಳಿವೆ. ಅದರಲ್ಲೂ ಈಗಲೇ 140 ಮಳಿಗೆಗಳನ್ನು ಮುಚ್ಚಲಾಗಿದೆ.

ಮಾಲ್​ಗಳಿಂದ ಹೆಚ್ಚಿನ ಪೈಪೋಟಿ

ಎಲ್ಲಿ ನೋಡಿದ್ದರೂ ಇಂದು ಮಾಲ್‌ಗಳದ್ದೇ ಅಬ್ಬರ. ಇನ್ನೂ ನಗರದ ಹಲವು ಕಡೆಗಳಲ್ಲಿರುವ ಮಾಲ್‌ಗಳಲ್ಲಿ ತರಕಾರಿ, ಹಣ್ಣುಗಳು ಕಡಿಮೆಯಲ್ಲಿ ಸಿಗುವುದರಿಂದ ಗ್ರಾಹಕರು ಅತಿ ಹೆಚ್ಚಾಗಿ ಅಲ್ಲಿ ಖರೀದಿ ಮಾಡುತ್ತಾರೆ. ಇದರಿಂದಾಗಿ ಹಾಪ್​ಕಾಮ್​ಗಳ ಮಳಿಕೆಗಳ ಕಡೆಗೆ ಹೋಗುವವರೇ ಕಡಿಮೆಯಾಗುತ್ತಿದ್ದಾರೆ.

ಇನ್ನೂ ಮಾರುಕಟ್ಟೆಯಲ್ಲಿ ಮಾರಾಟಗಾರರಲ್ಲಿ ಹೆಚ್ಚಿನ ಪೈಪೋಟಿ ಇದ್ದು, ತಾನು ಮುಂದೆ ಹೋಗಬೇಕು ಎಂದು ವಿವಿಧ ಆಫರ್ಗಳನ್ನು ನೀಡಿ ಗ್ರಾಹರನ್ನು ತನ್ನ ಹತ್ತಿರ ಸಳೆಯುತ್ತಿದೆ. ಖಾಸಗಿ ಕಂಪನಿಗಳು ಹಲವು ಕಡೆಗಳಲ್ಲಿ ವಿಶೇಷ ಅಂಗಡಿಗಳನ್ನು ತೆರೆಯುತ್ತಿರುವುದು ಹಾಪ್​ಕಾಮ್​ಗಳ ಬೇಡಿಕೆ ಕುಸಿಯಲು ಕಾರಣವಾಗಿದೆ. ಹಲವು ಕಡೆಗಳಲ್ಲಿ ಜನಸಂಚಾರ ಕಡಿಮೆಯಿರುವ ಕಡೆಗಳಲ್ಲಿ ಹಾಪ್​ಕಾಮ್ಸ್​​ ಮಳಿಗೆಗಳಿರುವುದು ವ್ಯಾಪಾರ ವಹಿವಾಟಿಗೆ ಹಿಂದೆಸೆರೆದಿದೆ.

ಕೆಲವು ಕಡೆಗಳಲ್ಲಿ ದಿನಕ್ಕೆ 500 ರಿಂದ 600 ರೂಪಾಯಿಗಳಷ್ಟು ಮಾತ್ರ ವ್ಯವಹಾರ ನಡೆಯುತ್ತಿರುವುದರಿಂದ ನಷ್ಟವುಂಟಾಗಿ ಮಳಿಗೆಗಳನ್ನು ಮುಚ್ಚಲಾಗುತ್ತಿದೆ ಎಂದು ವರದಿಯಾಗಿದೆ.

ಹಾಪ್​ಕಾಮ್ಸ್​​ ಮಳಿಗೆಗಳು ಮುಚ್ಚಿರುವುದು ಸತ್ಯ

ಹಲವು ಕಾರಣಗಳಿಂದ ಹಾಪ್​ಕಾಮ್ಸ್ ಮಳಿಗೆಗಳನ್ನು ಮುಚ್ಚಿರುವುದು ನಿಜ. ಅದು ಬೇಡಿಕೆ ಹೆಚ್ಚಿಸಲು, ವ್ಯಾಪಾರ ವಹಿವಾಟಿನ ಸಂಬಂಧ ತೆಗೆದುಕೊಂಡ ಕ್ರಮಗಳಾಗಿವೆ. ಹಲವು ಸುಧಾರಣಾ ಕರ್ಮಗಳನ್ನು ಕೈಗೊಂಡು ಕೈಗೆಟಕುವ ಬೆಲೆಗೆ ಹಣ್ಣು ತರಕಾರಿಗಳನ್ನು ಮಾರಲು, ಹೆಚ್ಚು ಡಿಸ್ಕೌಂಟ್​ಗಳನ್ನು ನೀಡುವ ಯೋಜನೆಗಳನ್ನು ರೂಪಿಸಿಕೊಂಡು ಹೆಚ್ಚು ಗ್ರಾಹಕರನ್ನು ಸೆಳೆಯಲು ಕ್ರಮ ಕೈಗೊಳ್ಳುವ ಕಾರ್ಯ ನಡೆಯುತ್ತಿದೆ ಎಂದು ಹಾಪ್​ಕಾಮ್ಸ್ ವ್ಯವಸ್ಥಾಪಕ ನಿರ್ದೇಶಕ ಉಮೇಶ್ ಮಿರ್ಜಿಯವರು ಮಾಹಿತಿ ತಿಳಿಸಿದ್ದಾರೆ.

ಹಾಪ್‌ಕಾಮ್ಸ್ ಮಳಿಗೆಗಳನ್ನು ಮುಚ್ಚಲು ಕಾರಣ ಏನು?

ಕೆಲವೆಡೆ ನೌಕರರು ನಿವೃತ್ತರಾಗಿರುವುದರಿಂದ ಮತ್ತು ಹೊಸ ನೇಮಕಾತಿಗಳನ್ನು ಮಾಡದ ಕಾರಣ ಅವುಗಳನ್ನು ಮುಚ್ಚಬೇಕಾಯಿತು ಎಂದು ವಿಧಾನ ಪರಿಷತ್ತಿನಲ್ಲಿ ತೋಟಗಾರಿಕಾ ಸಚಿವ ಎಸ್‌ಎಸ್ ಮಲ್ಲಿಕಾರ್ಜುನ್ ಹಾಪ್‌ಕಾಮ್ಸ್ ಮಳಿಗೆಯ ಮುಚ್ಚಿಕೆಯ ಕಾರಣವನ್ನು ತಿಳಿಸಿದ್ದಾರೆ.

ಅತಿ ಹೆಚ್ಚಾಗಿ ಮಾಲ್‌ಗಳಲ್ಲಿ ತರಕಾರಿಗಳು ಮತ್ತು ಹಣ್ಣುಗಳನ್ನು ಮಾರಾಟ ಮಾಡುವುದಕ್ಕಾಗಿ ಮಾರಾಟಗಾರರ ಸ್ಪರ್ಧೆಗೆ ಇಳಿಯುತ್ತಿದ್ದಾರೆ. ಖಾಸಗಿ ಕಂಪನಿಗಳು ಅನೇಕ ಸ್ಥಳಗಳಲ್ಲಿ ವಿಶೇಷ ಅಂಗಡಿಗಳನ್ನು ತೆರೆಯುವುದು ಬೆಂಗಳೂರಿನಲ್ಲಿ ಮಳಿಗೆಗಳನ್ನು ಮುಚ್ಚಲಾಗಿದೆ. ಬೆಂಗಳೂರಿನಲ್ಲಿ ರಸ್ತೆ ವಿಸ್ತರಣೆ ಮತ್ತು ಮೆಟ್ರೋ ಕಾಮಗಾರಿಯಿಂದಾಗಿ ಬೆಂಗಳೂರಿನ ಕೆಲವು ಮಳಿಗೆಗಳನ್ನು ಮುಚ್ಚಲಾಗಿದೆ ಅವರು ಹೇಳಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+