ಈ ದೇಶದಲ್ಲಿ ಕ್ಯಾಶ್ ಇದ್ದರಷ್ಟೇ ವ್ಯವಹಾರ, ಇಲ್ಲದಿದ್ದರೆ ಹೆಚ್ಚಿಗೆ ಪಾವತಿ ಮಾಡ್ತಾರೆ

ಜಿಂಬಾಬ್ವೆ ದೇಶದ ಆರ್ಥಿಕತೆಗೆ ಸಂಬಂಧಿಸಿದ ಬಹಳ ಆಸಕ್ತಿಕರ ವರದಿ ಇದು. ಭಾರತದಲ್ಲಿ ನೋಟು ನಿಷೇಧದ ಮೂರು ವರ್ಷ ಪೂರ್ತಿಯಾದ ಸಂದರ್ಭದಲ್ಲಿ ಈ ಲೇಖನದ ತೂಕ ಮತ್ತೂ ಹೆಚ್ಚು. ಏಕೆಂದರೆ ಜಿಂಬಾಬ್ವೆಯಲ್ಲಿ ಈಗ 'ನಗದು ಬಾದ್ ಷಾ'. ಕ್ಯಾಶ್ ಈಸ್ ಕಿಂಗ್. ಒಂದು ವೇಳೆ ನಗದು ಇಲ್ಲದಿದ್ದರೆ ಯಾವುದೇ ವಸ್ತು ಖರೀದಿಗೆ, ಸೇವೆ ಪಡೆಯುವುದಕ್ಕೆ ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗುತ್ತದೆ.

ಜಿಂಬಾಬ್ವೆಯಲ್ಲಿ ಚಲಾವಣೆಯಲ್ಲಿ ಇರುವುದು ಜಿಂಬಾಬ್ವೆಯನ್ ಡಾಲರ್. ಅಲ್ಲೀಗ ನಗದು ಹಣಕ್ಕೆ ಕೊರತೆ ಇರುವುದರಿಂದ ಮೂರು ಬಗೆಯ ಹಣ ಪಾವತಿಯ ಮಾದರಿ ಇದೆ. ಅದನ್ನು ಉದಾಹರಣೆ ನೀಡಬೇಕು ಅಂದರೆ, ಸೂಪರ್ ಮಾರ್ಕೆಟ್ ವೊಂದಕ್ಕೆ ಹೋಗಿ, ಜಿಂಬಾಬ್ವೆ ಕರೆನ್ಸಿ ಮೌಲ್ಯದ ಹದಿನೈದು ಡಾಲರ್ ವಸ್ತು ಖರೀದಿಗೆ ಮುಂದಾದರೆ,

ನಗದು ಪಾವತಿಸಿದರೆ: Z$ 15 ಮಾತ್ರ ನೀಡಬೇಕಾಗುತ್ತದೆ

ಮೊಬೈಲ್ ಮನಿಯಲ್ಲಿ ಪಾವತಿ ಮಾಡಿದರೆ Z$ 18 ಕೊಡಬೇಕಾಗುತ್ತದೆ

ಡೆಬಿಟ್ ಕಾರ್ಡ್ ಮೂಲಕ ಪಾವತಿಸಿದರೆ Z$ 20 ತೆರಬೇಕಾಗುತ್ತದೆ.

ವಾರಕ್ಕೆ ಮುನ್ನೂರು ಡಾಲರ್ ಮಾತ್ರ ವಿಥ್ ಡ್ರಾ

ವಾರಕ್ಕೆ ಮುನ್ನೂರು ಡಾಲರ್ ಮಾತ್ರ ವಿಥ್ ಡ್ರಾ

ಅಷ್ಟೇ ಅಲ್ಲ, ಸಾರ್ವಜನಿಕ ಸಾರಿಗೆಗಳಲ್ಲೂ ಎಲೆಕ್ಟ್ರಾನಿಕ್ ವ್ಯವಹಾರಗಳನ್ನು ಮಾಡುತ್ತಿಲ್ಲ. ಬಸ್ ಟಿಕೆಟ್ ಗೆ ಕೂಡ ನಗದು ಪಾವತಿ ಮಾಡಬೇಕು. ರಸ್ತೆ ಬದಿಯಲ್ಲಿ ಸಣ್ಣ- ಪುಟ್ಟ ಹಣ್ಣು, ತರಕಾರಿಗಳನ್ನು ಮಾರುವವರು ಸಹ ನಗದು ಮಾತ್ರ ತೆಗೆದುಕೊಳ್ಳುತ್ತಾರೆ. ಐದು ಮಂದಿ ಶಾಲೆಗೆ ಹೋಗುವ ವಯಸ್ಸಿನ ಮಕ್ಕಳು ಇರುವ ಕುಟುಂಬವೊಂದಕ್ಕೆ ವಾರಕ್ಕೆ ಸಾರಿಗೆಗೆ ಇನ್ನೂರೈವತ್ತು ಡಾಲರ್ (ಜಿಂಬಾಬ್ವೆ ಡಾಲರ್) ಬೇಕಾಗುತ್ತದೆ. ಇನ್ನು ವಾರಕ್ಕೆ ಬ್ರೆಡ್, ಟೊಮೆಟೊ ಹಾಗೂ ಸಕ್ಕರೆ ಇತ್ಯಾದಿಗಳಿಗೆ ನೂರೈವತ್ತು ಡಾಲರ್ ಬೇಕು. ಆದರೆ ಜಿಂಬಾಬ್ವೆಯ ಬ್ಯಾಂಕ್ ಗಳಲ್ಲಿ ನಗದು ಎಂದು ಇಂತಿಷ್ಟೇ ಪಾವತಿ ಎಂಬ ಮಿತಿ ಇದೆ. ಒಂದು ವಾರಕ್ಕೆ ಮುನ್ನೂರು ಡಾಲರ್ ಮಾತ್ರ ವಿಥ್ ಡ್ರಾ ಮಾಡಬಹುದು. ಮತ್ತು ಎಟಿಎಂಗಳಂತೂ ಖಾಲಿ ಖಾಲಿ. ದುಡ್ಡು ಸಿಗುವುದೋ ಇಲ್ಲವೋ ಎಂಬ ಯಾವ ಖಾತ್ರಿ ಸಹ ಇಲ್ಲದೆ ಬ್ಯಾಂಕ್ ಗಳ ಮುಂದೆ ಸಾಲುಗಟ್ಟಿ ನಿಲ್ಲುವ ಜನ ಎಲ್ಲೆಲ್ಲೂ ಕಾಣ ಸಿಗುತ್ತಾರೆ. ಆದರೆ ಬ್ಯಾಂಕ್ ಗಳ ಬಳಿಯೇ ಹಣ ಇಲ್ಲ.

ಮುನ್ನೂರರಿಂದ ನಾನೂರು ಪರ್ಸೆಂಟ್ ಹಣದುಬ್ಬರ

ಮುನ್ನೂರರಿಂದ ನಾನೂರು ಪರ್ಸೆಂಟ್ ಹಣದುಬ್ಬರ

ಯಾವಾಗ ವ್ಯವಸ್ಥೆಯೊಳಗೆ ನಗದು ಇಲ್ಲ ಅಂತಾಯಿತೋ ಹಣದುಬ್ಬರ ದರ ವಿಪರೀತ ಹೆಚ್ಚಾಗಿದೆ. ಜೂನ್ ನಲ್ಲಿ ಸ್ಥಳೀಯ ಕರೆನ್ಸಿಗಳನ್ನು ಮತ್ತೆ ಪರಿಚಯಿಸಿದಾಗ ನೂರು ಪರ್ಸೆಂಟ್ ಇದ್ದದ್ದು, ಈಗ ಮುನ್ನೂರರಿಂದ ನಾನೂರು ಪರ್ಸೆಂಟ್ ಇದೆ. ಭಾರತದ ಹಣದುಬ್ಬರದ ಪ್ರಮಾಣ ಸದ್ಯಕ್ಕೆ ಐದು ಪರ್ಸೆಂಟ್ ಗಿಂತ ಕಡಿಮೆ ಇದೆ. ನಮ್ಮ ದೇಶದ ಹಣದುಬ್ಬರಕ್ಕಿಂತ ಅದೆಷ್ಟು ಪಟ್ಟು ಹೆಚ್ಚಾಯಿತು ಎಂಬುದನ್ನು ನೀವೇ ಊಹಿಸಬಹುದು. (ಹಣದುಬ್ಬರ ಅಂದರೆ ನಿರ್ದಿಷ್ಟ ಅವಧಿಯಲ್ಲಿನ ಆಯ್ದ ಪದಾರ್ಥ ಹಾಗೂ ಸೇವೆಗಳ ಬೆಲೆಯನ್ನು ಅಳೆಯುವ ಮಾಪನ). ಪರಿಸ್ಥಿತಿ ಹೀಗೆ ಇರುವುದರಿಂದಲೇ ನಗದು ಇದ್ದವರೇ ಯಜಮಾನರು ಎಂಬ ಸ್ಥಿತಿ ನಿರ್ಮಾಣವಾಗಿದೆ. ಇಂಥವರಿಗೆ ನಗದು ಪಡೆಯುವುದೋ ಅಥವಾ ಅವುಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದೋ ಕಷ್ಟವಾಗುತ್ತಿಲ್ಲ. ಆದರೆ ಅವರು ಸಹ ಹಣದುಬ್ಬರದ ಹೊಡೆತಕ್ಕೆ ತತ್ತರಿಸಿಹೋಗಿದ್ದಾರೆ.

ಮೂವತ್ತು ಪರ್ಸೆಂಟ್ ಹೆಚ್ಚು ಪಾವತಿಸಿ ಕರೆನ್ಸಿ ಖರೀದಿ

ಮೂವತ್ತು ಪರ್ಸೆಂಟ್ ಹೆಚ್ಚು ಪಾವತಿಸಿ ಕರೆನ್ಸಿ ಖರೀದಿ

ಆದರೆ, ಇಂಥವರು ಸ್ಥಳೀಯ ನಗದು ಹಾಗೂ ವಿದೇಶಿ ಕರೆನ್ಸಿ ಬೇಕಾದವರಿಗೆ ಅವುಗಳನ್ನು ಮಾರುತ್ತಿದ್ದಾರೆ. ಜನರು ಕರೆನ್ಸಿ ಖರೀದಿಗಾಗಿ ಅದರ ಮುಖಬೆಲೆಯ ಮೂವತ್ತು ಪರ್ಸೆಂಟ್ ಹೆಚ್ಚು ಪಾವತಿಸುತ್ತಿದ್ದಾರೆ. ಕರೆನ್ಸಿ ಮಾರಾಟ ಲಾಭ ತರುವ ದಂಧೆ ಆಗಿದ್ದು, ಜಿಂಬಾಬ್ವೆಯ ರಾಜಧಾನಿ ಹರಾರೆ ಅಥವಾ ತುಂಬ ಜನಸಂದಣಿ ಇರುವ ಮಾರುಕಟ್ಟೆಗಳನ್ನು ವ್ಯವಹಾರದ ಕೇಂದ್ರಗಳಾಗಿ ಮಾಡಿಕೊಂಡಿದ್ದಾರೆ. ಸರಿ, ಜನರಿಗೆ ನೋಟುಗಳು ಸಿಗುತ್ತಿಲ್ಲ. ಆದರೆ ಈ ವ್ಯವಹಾರ ಮಾಡುವವರು ಹೇಗೆ ಅಷ್ಟು ಕರೆನ್ಸಿ ಇಟ್ಟುಕೊಳ್ತಾರೆ ಅಂದರೆ, ಬ್ಯಾಂಕ್ ಅಧಿಕಾರಿಗಳ ಜತೆಗೆ ಅನೈತಿಕವಾಗಿ ವ್ಯವಹಾರ ಕುದುರಿಸಿಕೊಂಡು ದಂಧೆ ನಡೆಸುತ್ತಿದ್ದಾರೆ. ಕಳೆದ ವಾರ ಜಿಂಬಾಬ್ವೆಯ ಬ್ಯಾಂಕ್ ಗಳಿಗೆ ಎರಡು, ಐದು ಡಾಲರ್ ನ ಹೊಸ ಸರಬರಾಜು ಆಯಿತು. ಅದರ ಒಟ್ಟು ಮೌಲ್ಯ್ ಮೂವತ್ತು ಮಿಲಿಯನ್ ನಷ್ಟಿತ್ತು. ಕೆಲವು ಬ್ಯಾಂಕ್ ಗಳು ದಿನಕ್ಕೆ ಇಂತಿಷ್ಟೇ ವಿಥ್ ಡ್ರಾ ಮಾಡಬೇಕು ಎಂದು ನಿಯಮ ಮಾಡಿವೆ. ಜತೆಗೆ ಒಂದು ವಾರಕ್ಕೆ ಮುನ್ನೂರು ಡಾಲರ್ ನ ಮಿತಿ ವಿಧಿಸಿದ್ದು, ಅದು ಕೂಡ ಒಂದು ಸಲಕ್ಕೆ ವಿಥ್ ಡ್ರಾ ಮಾಡಲು ಅವಕಾಶ ನೀಡುತ್ತಿಲ್ಲ.

ದಶಕದ ಹಿಂದಿನ ಸ್ಥಿತಿಗಿಂತ ಸುಧಾರಣೆ ಕಾಣುತ್ತಿರುವ ಭರವಸೆ

ದಶಕದ ಹಿಂದಿನ ಸ್ಥಿತಿಗಿಂತ ಸುಧಾರಣೆ ಕಾಣುತ್ತಿರುವ ಭರವಸೆ

ಆದರೆ, ನೋಟು ಮಾರಾಟ ವ್ಯವಹಾರಸ್ಥರಿಗೆ ರಾಶಿ ರಾಶಿ ಹೊಸ ನೋಟುಗಳು ದೊರೆಯುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಆ ಚಿತ್ರಗಳು ವೈರಲ್ ಆಗಿವೆ. ಹೊಸದಾಗಿ ಬಿಡುಗಡೆಯಾದ ಎರಡು ಡಾಲರ್ ನ ಹೊಸ ನೋಟುಗಳನ್ನು ಕಟ್ಟು ಕಟ್ಟು ಇರುವುದರ ಫೋಟೋ ವೈರಲ್ ಆಗಿದೆ. ಈ ರೀತಿ ವ್ಯವಹಾರ ನಡೆಸುತ್ತಿರುವ ಗುಮಾನಿ ಮೇಲೆ ಎರಡು ಬ್ಯಾಂಕ್ ಗಳ ಮೇಲೆ ತನಿಖೆ ನಡೆಸಲಾಗುತ್ತಿದೆ. ಜತೆಗೆ ಜಿಂಬಾಬ್ವೆಯ ಅಧ್ಯಕ್ಷ ಎಮರ್ಸನ್ ನಂಗಗ್ವ್ ಎಚ್ಚರಿಕೆ ನೀಡಿದ್ದು, ಕರೆನ್ಸಿ ನೋಟುಗಳ ಕಾಳಸಂತೆ ಮಾರಾಟಗಾರರಿಗೆ ತಕ್ಕ ಶಿಕ್ಷೆ ವಿಧಿಸುವ ಬಗ್ಗೆ ಹೇಳಿದ್ದಾರೆ. ಆದರೆ ಕರೆನ್ಸಿಗಳ ಅಗತ್ಯ ಇರುವ ಜನರು ಹೆಚ್ಚಿನ ಮೊತ್ತ ಪಾವತಿಸಿ, ಪಡೆಯುತ್ತಿದ್ದಾರೆ. ಅದರಲ್ಲೂ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರ ಸ್ಥಿತಿ ಮತ್ತೂ ಶೋಚನೀಯವಾಗಿದೆ. ಆದರೆ ಕಳೆದ ಒಂದು ದಶಕದಿಂದ ಆರ್ಥಿಕತೆಯನ್ನು ಸುಧಾರಿಸುತ್ತಿರುವ ಸರ್ಕಾರದ ಬಗ್ಗೆ ಜನರಿಗೆ ನಂಬಿಕೆ ಇದೆ.

ಲಕ್ಷ ಕೋಟಿಯ ನೋಟುಗಳಿದ್ದ ಜಿಂಬಾಬ್ವೆ

ಲಕ್ಷ ಕೋಟಿಯ ನೋಟುಗಳಿದ್ದ ಜಿಂಬಾಬ್ವೆ

2009ರಲ್ಲಿ ಜಿಂಬಾಬ್ವೆಯಲ್ಲಿ ಹೈಪರ್ ಹಣದುಬ್ಬರದ ಕಾರಣಕ್ಕೆ ಅಲ್ಲಿನ ಡಾಲರ್ ನಿಷೇಧಿಸಲಾಯಿತು. ಅದರ ಬದಲಿಗೆ ಯು.ಎಸ್. ಡಾಲರ್ ಹಾಗೂ ದಕ್ಷಿಣ ಆಫ್ರಿಕಾ ರಾಂಡ್ ಚಲಾವಣೆಗೆ ತರಲಾಯಿತು. 2008ರ ಜುಲೈನಲ್ಲಿ ವಾರ್ಷಿಕ ಹಣದುಬ್ಬರ ದರವು 231 ಮಿಲಿಯನ್ ಪರ್ಸೆಂಟ್, ಅಂದರೆ 23.1 ಕೋಟಿ ಪರ್ಸೆಂಟ್ ತಲುಪಿತು. 2008ರ ನವೆಂಬರ್ ಮಧ್ಯದ ಹೊತ್ತಿಗೆ 80 ಬಿಲಿಯನ್ ಪರ್ಸೆಂಟ್ ಗೆ ಹಣದುಬ್ಬರ ತಲುಪಿದ ಮೇಲೆ ಸರ್ಕಾರದಿಂದ ವರದಿ ನೀಡುವುದನ್ನೇ ನಿಲ್ಲಿಸಲಾಯಿತು. ಈ ವರ್ಷದ ಜೂನ್ ನಿಂದ ಜಿಂಬಾಬ್ವೆ ಡಾಲರ್ ಮತ್ತೆ ಪರಿಚಯಿಸಲಾಗಿದೆ. ವಿದೇಶಿ ವಿನಿಮಯವೇ ಇಲ್ಲ ಎಂಬ ಕಾರಣಕ್ಕೆ ವಿದೇಶಿ ಕರೆನ್ಸಿ ನಿಷೇಧಿಸಲಾಗಿದೆ. ಏಕೆಂದರೆ ಜಿಂಬಾಬ್ವೆಯ ಆಮದು ಪ್ರಮಾಣವೇ ರಫ್ತಿಗಿಂತ ಹೆಚ್ಚಿದೆ. ಸಂಬಳ ಅಷ್ಟೇ ಇದ್ದರೂ ಸರಾಸರಿ ದರಗಳು ಎರಡು ಪಟ್ಟಿಗಿಂತ ಹೆಚ್ಚಾಗುತ್ತಿದೆ. ಜಿಂಬಾಬ್ವೆ ಕೇಂದ್ರ ಬ್ಯಾಂಕ್ ಹೇಳಿರುವ ಪ್ರಕಾರ, ಮುಂದಿನ ಐದು ತಿಂಗಳಲ್ಲಿ ಆರ್ಥಿಕ ವ್ಯವಸ್ಥೆಯೊಳಗೆ Z$ 1 ಬಿಲಿಯನ್ ನಗದು ಪೂರೈಸಲಾಗುತ್ತದೆ. ಒಂದು ಕಾಲದಲ್ಲಿ 100 ಲಕ್ಷ ಕೋಟಿಯ ಮೊತ್ತದ (ಟ್ರಿಲಿಯನ್) ಡಾಲರ್ ಗಳಿದ್ದ ಜಿಂಬಾಬ್ವೆಯಲ್ಲಿ ಈಗ ಗರಿಷ್ಠ Z$ 50ರ ನೋಟಿಗಾಗಿ ಜನ ಬೇಡಿಕೆ ಇಡುತ್ತಿದ್ದಾರೆ. ಸದ್ಯಕ್ಕೆ ಅತಿ ಹೆಚ್ಚಿನ ಮುಖಬೆಲೆಯ ನೋಟು ಅಂದರೆ, Z$ 5ರದು ಚಲಾವಣೆಯಲ್ಲಿದೆ. ಅದರ ಮೌಲ್ಯ 30 ಸೆಂಟ್ಸ್ ಅಮೆರಿಕನ್ ಡಾಲರ್. ಅದರಿಂದ ಒಂದು ಸಾಫ್ಟ್ ಡ್ರಿಂಕ್ ಅಥವಾ ಐಸ್ ಕ್ರೀಮ್ ಖರೀದಿ ಕೂಡ ಸಾಧ್ಯವಿಲ್ಲ.

(ಮಾಹಿತಿ: ಬಿಬಿಸಿ)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+