ಅದಾನಿ ಗ್ರೂಪ್ ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆಯನ್ನು ಮಾಡಿದೆ ಎಂಬ ಆರೋಪದ ಬಳಿಕ ಷೇರುಪೇಟೆಯಲ್ಲಿ ಅದಾನಿ ಸ್ಟಾಕ್‌ಗಳು ಭಾರೀ ಪ್ರಮಾಣದಲ್ಲಿ ಕುಸಿತ ಕಾಣುತ್ತಾ ಬಂದಿದೆ. ಈಗಾಗಲೇ ಭಾರೀ ನಷ್ಟವನ್ನು ಕಂಡಿರುವ ಅದಾನಿ ಗ್ರೂಪ್ ಸ್ಟಾಕ್‌ಗಳು ಸ್ವಲ್ಪ ಚೇತರಿಕೆ ಕಂಡಿದೆ. ಆದರೆ ಈಗ ಅದಾನಿ ಪೋರ್ಟ್ಸ್‌ಗೆ ಆಡಿಟರ್‌ಗಳ ರಾಜೀನಾಮೆ ಗ್ರೂಪ್‌ನ ಸ್ಟಾಕ್ ಮೇಲೆ ಪ್ರಭಾವ ಉಂಟು ಮಾಡಿದೆ.
ಡೆಲಾಯ್ಟ್ ಹ್ಯಾಸ್ಕಿನ್ಸ್ ಮತ್ತು ಸೇಲ್ಸ್ ಎಲ್‌ಎಲ್‌ಪಿ ಕಂಪನಿಯ ಆಡಿಟರ್‌ಗಳು ಅದಾನಿ ಪೋರ್ಟ್ಸ್‌ಗೆ ರಾಜೀನಾಮೆ ನೀಡಿದ್ದಾರೆ. ಈ ರಾಜೀನಾಮೆಯನ್ನು ಸಂಸ್ಥೆಯು ಅಂಗೀಕಾರ ಮಾಡಿ, ಹೊಸ ಆಡಿಟರ್‌ಗಳ ನೇಮಕಾತಿಯನ್ನು ಕೂಡಾ ಮಾಡಿದೆ. ಆದರೆ ಈ ನಡುವೆ ಆಡಿಟರ್‌ಗಳ ರಾಜೀನಾಮೆ ಅದಾನಿ ಗ್ರೂಪ್‌ನ ಸ್ಟಾಕ್‌ಗಳ ಮೇಲೆ ಪ್ರಭಾವ ಉಂಟು ಮಾಡುವ ನಿರೀಕ್ಷೆಯಿದೆ. ಅದಾನಿ ಸಂಸ್ಥೆಯ ಗ್ರೂಪ್‌ಗಳು ಇಂದು ಟಾಪ್ ಲೂಸರ್ ಸಂಸ್ಥೆಗಳಾಗಿದೆ.

ಆರಂಭಿಕ ವಹಿವಾಟು ಹೇಗಿದೆ?
ಸೋಮವಾರ ಆರಂಭಿಕ ವಹಿವಾಟಿನ ಸೆನ್ಸೆಕ್ಸ್ 337.48 ಪಾಯಿಂಟ್ ಅಥವಾ ಶೇ.0.52ರಷ್ಟು ಕುಸಿದು, 64,985.17ಕ್ಕೆ ತಲುಪಿದೆ. ನಿಫ್ಟಿ 110.80 ಅಂಕ, ಶೇ.0.57ರಷ್ಟು ಇಳಿದು 19,317.50ಕ್ಕೆ ತಲುಪಿದೆ. 1040 ಷೇರುಗಳು ಏರಿಕೆಯಾಗಿದ್ದರೆ, 1227 ಷೇರುಗಳು ಇಳಿಕೆಯಾಗಿದೆ. 1227 ಷೇರುಗಳು ಸ್ಥಿರವಾಗಿದೆ.
ಟಾಪ್ ಲೂಸರ್ ಸಂಸ್ಥೆಗಳು?
ನಿಫ್ಟಿಯಲ್ಲಿ ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್, ಟಾಟಾ ಮೋಟಾರ್ಸ್, ಹಿಂಡಾಲ್ಕೊ ಇಂಡಸ್ಟ್ರೀಸ್ ಮತ್ತು ಈಚರ್ ಮೋಟಾರ್ಸ್ ಪ್ರಮುಖ ನಷ್ಟವನ್ನು ಅನುಭವಿಸಿದ ಸಂಸ್ಥೆಗಳಾಗಿದೆ. ಇನ್ನು ಒಎನ್‌ಜಿಸಿ, ಎನ್‌ಟಿಪಿಸಿ, ಕೋಲ್ ಇಂಡಿಯಾ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್ ಲಾಭ ಗಳಿಸಿದೆ.
ಅದಾನಿ ಸ್ಟಾಕ್‌ಗಳು ಹೇಗಿದೆ?
ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್: ಆಗಸ್ಟ್ 14ರಂದು ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಟಾಪ್ ಲೂಸರ್ ಆಗಿದೆ. ಅದಾನಿ ಪೋರ್ಟ್ಸ್ ಆಡಿಟರ್‌ಗಳ ರಾಜೀನಾಮೆಯು ಅದಾನಿ ಗ್ರೂಪ್‌ನ ಎಲ್ಲ ಸ್ಟಾಕ್‌ಗಳ ಮೇಲೆ ಪ್ರಭಾವ ಬೀರಿದೆ. ಪ್ರಸ್ತುತ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಮೌಲ್ಯವು ಶೇಕಡ 4.43ರಷ್ಟು ಇಳಿಕೆಯಾಗಿ 2,426.0 ರೂಪಾಯಿ ಆಗಿದೆ.
ಅದಾನಿ ಗ್ರೀನ್ ಎನರ್ಜಿ ಲಿಮಿಟೆಡ್: ಅದಾನಿ ಗ್ರೂಪ್‌ನ ಇನ್ನೊಂದು ಸ್ಟಾಕ್ ಆದ ಅದಾನಿ ಗ್ರೀನ್ ಎನರ್ಜಿ ಆಗಸ್ಟ್ 14ರಂದು ಇಳಿಕೆಯಾಗಿದೆ. ಅದಾನಿ ಗ್ರೀನ್ ಎನರ್ಜಿಯ ಸ್ಟಾಕ್ ಬೆಲೆಯು ಈ ಸಮಯಕ್ಕೆ ಶೇಕಡ 2.21ರಷ್ಟು ಇಳಿಕೆಯಾಗಿ 949.40 ರೂಪಾಯಿ ಆಗಿದೆ.
ಅದಾನಿ ಟ್ರಾನ್ಸ್‌ಮಿಷನ್ ಲಿಮಿಟೆಡ್: ಅದಾನಿ ಗ್ರೂಪ್‌ನ ಅದಾನಿ ಟ್ರಾನ್ಸ್‌ಮಿಷನ್ ಲಿಮಿಟೆಡ್ ಸ್ಟಾಕ್ ಕೂಡಾ ಸೋಮವಾರ ಕುಸಿತ ಕಂಡಿದೆ. ಅದಾನಿ ಟ್ರಾನ್ಸ್‌ಮಿಷನ್‌ನ ಪ್ರಸ್ತುತ ಶೇಕಡ 3.82ರಷ್ಟು ಕುಸಿತ ಕಂಡು ಸ್ಟಾಕ್ ಬೆಲೆಯು 799.35 ರೂಪಾಯಿ ಆಗಿದೆ.
ಅದಾನಿ ವಿಲ್ಮಾರ್ ಲಿಮಿಟೆಡ್: ಅದಾನಿ ಎಂಟರ್‌ಪ್ರೈಸಸ್ ವಿಲ್ಮಾರ್ ಇಂಟರ್‌ನ್ಯಾಶನಲ್‌ನೊಂದಿಗೆ ಜಂಟಿ ಉದ್ಯಮವಾಗಿರುವ ಅದಾನಿ ವಿಲ್ಮಾರ್‌ನಲ್ಲಿ ತನ್ನ ಪಾಲನ್ನು ಮಾರಾಟ ಮಾಡಲು ಮುಂದಾಗಿದೆ ಎಂದು ಇತ್ತೀಚೆಗೆ ವರದಿಯಾಗಿದೆ. ಇದಾದ ಬಳಿಕ ಸಂಸ್ಥೆಯ ಅದಾನಿ ವಿಲ್ಮಾರ್ ಸ್ಟಾಕ್ ಇಳಿದಿದ್ದು, ಇಂದು ಮತ್ತೆ ಕುಸಿದಿದೆ. ಈ ಸಮಯಕ್ಕೆ ಸ್ಟಾಕ್ ಶೇಕಡ 2.19ರಷ್ಟು ಇಳಿಕೆಯಾಗಿ 374.70 ರೂಪಾಯಿಗೆ ತಲುಪಿದೆ.
ಅದಾನಿ ಟೋಟಲ್ ಗ್ಯಾಸ್: ಸಂಸ್ಥೆಯ ಅದಾನಿ ಟೋಟಲ್ ಗ್ಯಾಸ್ ಸ್ಟಾಕ್ ಕೂಡಾ ಕುಸಿದಿದೆ. ಆಗಸ್ಟ್ 14ರಂದು ಅದಾನಿ ಟೋಟಲ್ ಗ್ಯಾಸ್ ಸ್ಟಾಕ್ ಬೆಲೆ ಶೇಕಡ 1.86ರಷ್ಟು ಕುಸಿತ ಕಂಡು 637.00 ರೂಪಾಯಿಗೆ ತಲುಪಿದೆ.
ಅದಾನಿ ಪವರ್ ಲಿಮಿಟೆಡ್: ಆಗಸ್ಟ್ 14ರಂದು ಅದಾನಿ ಪವರ್ ಲಿಮಿಟೆಡ್ ಸ್ಟಾಕ್ ಕೂಡಾ ಶೇಕಡ 2.43ರಷ್ಟು ಕುಸಿತ ಕಂಡಿದ್ದು, 281.40 ರೂಪಾಯಿ ಆಗಿದೆ. ಆದರೆ ಕೆಲವು ತಿಂಗಳ ಹಿಂದೆ ಈ ಸ್ಟಾಕ್ ಬೆಲೆ 679 ರೂಪಾಯಿಯಷ್ಟಿತ್ತು.
ಎನ್‌ಡಿಟಿವಿ: ಬಿಎಸ್‌ಇಯಲ್ಲಿ ನ್ಯೂ ದೆಲ್ಲಿ ಟೆಕಿವಿಜನ್ ಲಿಮಿಟೆಡ್‌ನ ಷೇರುಗಳು ಶೇಕಡ 1.70ರಷ್ಟು ಇಳಿಕೆಯಾಗಿದ್ದು ರೂಪಾಯಿ 219.50ಕ್ಕೆ ತಲುಪಿದೆ. ಸ್ಟಾಕ್‌ನ 52 ವಾರಗಳ ಗರಿಷ್ಠ ಮಟ್ಟ 573 ರೂಪಾಯಿ ಮತ್ತು ಕನಿಷ್ಠ ಮಟ್ಟ 168 ರೂಪಾಯಿ ಆಗಿದೆ.
ಅಂಬುಜಾ ಸಿಮೆಂಟ್: ಆಗಸ್ಟ್ 14ರಂದು ಈ ಸಮಯಕ್ಕೆ ಅಂಬುಜಾ ಸಿಮೆಂಟ್ ಸ್ಟಾಕ್ ಶೇಕಡ 3.03ರಷ್ಟು ಕುಗ್ಗಿದ್ದು 442.55 ರೂಪಾಯಿಗೆ ತಲುಪಿದೆ. ಸ್ಟಾಕ್‌ನ 52 ವಾರಗಳ ಗರಿಷ್ಠ ಮಟ್ಟ 598 ರೂಪಾಯಿ ಕನಿಷ್ಠ ಮಟ್ಟ 315 ರೂಪಾಯಿ ಆಗಿದೆ.


Click it and Unblock the Notifications