ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಷೇರು ಮಾರುಕಟ್ಟೆಯು ಭಾರೀ ಕುಸಿತವನ್ನು ಕಂಡಿದೆ. ಬಿಎಸ್‌ಇ ಸೆನ್ಸೆಕ್ಸ್ ಸುಮಾರು ನೂರು ಅಂಕ ಕುಸಿದು 52,757ರಲ್ಲಿ ವಹಿವಾಟು ಆರಂಭಿಸಿದೆ. ನಿಫ್ಟಿ ಕೂಡಾ ಇಳಿದಿದೆ. ಸುಮಾರು 30 ಅಂಕ ಕುಸಿತ ಕಂಡಿದೆ.
ಮೇ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು ಕೊಂಚ ಇಳಿಕೆ ಕಂಡಿದೆ. ಮೇ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು ಶೇಕಡ 7.04ಕ್ಕೆ ಇಳಿದಿದೆ. ಏಪ್ರಿಲ್‌ನಲ್ಲಿ ಚಿಲ್ಲರೆ ಹಣದುಬ್ಬರ ಭಾರೀ ಏರಿಕೆ ಕಂಡಿದೆ. ಸುಮಾರು ಶೇಕಡ 7.79ಕ್ಕೆ ಏರಿಕೆ ಕಂಡಿತ್ತು.
ಷೇರು ಮಾರುಕಟ್ಟೆಯಲ್ಲಿ ಹಣಕಾಸು ಹಾಗೂ ಬ್ಯಾಂಕ್ ಸ್ಟಾಕ್‌ಗಳು ಭಾರೀ ಇಳಿಕೆ ಕಂಡಿದೆ. ನಿಫ್ಟಿ ಫಿನಾನ್ಸ್ ಸೂಚ್ಯಂಕ ಶೇಕಡ 0.8ರಷ್ಟು ಕುಸಿದಿದೆ. ಈ ನಡುವೆ ನಿಫ್ಟಿ ಮೆಟಲ್ ಸೂಚ್ಯಂಕ ಶೇಕಡ 0.5ರಷ್ಟು ಏರಿಕೆ ಕಂಡಿದೆ. ರತ್ನಮಣಿ ಮೆಟಲ್ ಹಾಗೂ ಟ್ಯೂಬ್ಸ್ ಟಾಪ್ ಗೇನರ್ ಆಗಿದೆ. ಶೇಕಡ 2.5ರಷ್ಟು ಹೆಚ್ಚಳವಾಗಿದೆ.

ಯಾವ ಷೇರು ಡೌನ್, ಅಪ್?
ಏಷ್ಯನ್ ಪೇಂಟ್ಸ್, ಟೆಕ್ ಮಹೀಂದ್ರಾ, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಟೈಟಾನ್ ಹಾಗೂ ಎಚ್‌ಡಿಎಫ್‌ಸಿ ಷೇರುಗಳು ಆರಂಭಿಕ ವಹಿವಾಟಿನಲ್ಲಿ ಇಳಿಕೆ ಕಂಡಿದೆ. ಈ ನಡುವೆ ಭಾರ್ತಿ ಏರ್‌ಟೆಲ್, ಪವರ್ ಗ್ರಿಡ್, ಎನ್‌ಟಿಪಿಸಿ, ಎಂ&ಎಂ, ಬಜಾಜ್ ಫಿನ್‌ಸೆರ್ವ್ ಭಾರೀ ಲಾಭ ಕಂಡಿದೆ.
ಯುಎಸ್ ಮಾರುಕಟ್ಟೆಯಲ್ಲಿ ಸೋಮವಾರ ಏಷ್ಯನ್ ಷೇರುಗಳು ಇಳಿಕೆ ಕಂಡಿದೆ. ಟೋಕಿಯೋ, ಹಾಂಗ್‌ಕಾಂಗ್, ಶಾಂಘೈ ಷೇರುಗಳು ಇಳಿಕೆ ಕಂಡಿದೆ. ಯುಎಸ್‌ನಲ್ಲಿ ಷೇರು ಮಾರುಕಟ್ಟೆ ನಷ್ಟದೊಂದಿಗೆ ವಹಿವಾಟು ಅಂತ್ಯ ಮಾಡಿದೆ.


Click it and Unblock the Notifications