ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಕುಸಿತ: ಹೇಗಿದೆ ಮಾರುಕಟ್ಟೆ ಸ್ಥಿತಿ

ವಾಲ್‌ಸ್ಟ್ರೀಟ್‌ನಲ್ಲಿ ಆದ ಬೆಳವಣಿಗೆಯನ್ನು ಅನುಸರಿಸಿ ಷೇರು ಮಾರುಕಟ್ಟೆಯು ಬುಧವಾರ ಆರಂಭಿಕ ವಹಿವಾಟಿನಲ್ಲಿ ಕುಸಿತವನ್ನು ಕಂಡಿದೆ. ಸೆನ್ಸೆಕ್ಸ್ ಹಾಗೂ ನಿಫ್ಟಿ ಬುಧವಾರದ ವಹಿವಾಟಿನ ಆರಂಭಕ್ಕೆ ಕೆಳಕ್ಕೆ ಇಳಿದಿದೆ. ಇನ್ನು ಜುಲೈ ತಿಂಗಳಲ್ಲಿ ಹಣದುಬ್ಬರ ಇಳಿಕೆಯಾಗಲಿದೆ ಎಂದು ಸಮೀಕ್ಷೆಯೊಂದು ಉಲ್ಲೇಖ ಮಾಡಿದೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 131.71 ಅಂಕ ಅಥವಾ ಶೇಕಡ 0.22ರಷ್ಟು ಕುಸಿದು 58,721.36ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿ 37.45 ಅಂಕ ಅಥವಾ ಶೇಕಡ 0.21ರಷ್ಟು ಕುಸಿದು 17,487.65ಕ್ಕೆ ವಹಿವಾಟು ಆರಂಭ ಮಾಡಿದೆ. ಮಂಗಳವಾರ ಮೊಹರಮ್ ಹಬ್ಬದ ಕಾರಣ ಷೇರುಪೇಟೆಯು ಬಂದ್ ಆಗಿತ್ತು. ಆದರೆ ಅದಕ್ಕೂ ಮುಂಚಿನ ಸೋಮವಾರದ ವಹಿವಾಟಿನ ಅಂತ್ಯದಲ್ಲಿ 30 ಷೇರುಗಳು ಬಿಎಸ್‌ಇ 465.14 ಅಂಕ ಅಥವಾ ಶೇಕಡ 0.80ರಷ್ಟು ಏರಿಕೆಯಾಗಿ 58,853.07ಕ್ಕೆ ತಲುಪಿದೆ. ನಿಫ್ಟಿ 127.60 ಅಂಕ ಅಥವಾ ಶೇಕಡ 0.73ರಷ್ಟು ಹೆಚ್ಚಳವಾಗಿ 17,525.10ಕ್ಕೆ ವಹಿವಾಟು ಅಂತ್ಯ ಮಾಡಿದೆ.

ಸೆನ್ಸೆಕ್ಸ್‌ನಲ್ಲಿ ಎನ್‌ಟಿಪಿಸಿ ಟಾಪ್ ಲೂಸರ್ ಆಗಿದ್ದು ಇದರ ಷೇರು ಸುಮಾರು ಶೇಕಡ 2.42ರಷ್ಟು ಕುಸಿದಿದೆ. ಇನ್ನು ನಿಫ್ಟಿ ಐಟಿ ಕೂಡಾ ಟಾಪ್ ಲೂಸರ್ ಆಗಿದೆ. ನಿಫ್ಟಿ ಐಟಿ ಸೂಚ್ಯಂಕವು ಶೇಕಡ 0.7ರಷ್ಟು ಇಳಿದಿದೆ. ಈ ಸಂದರ್ಭದಲ್ಲೇ ನಿಫ್ಟಿ ಪ್ರೈವೇಟ್ ಬ್ಯಾಂಕ್ ಶೇಕಡ 0.38ರಷ್ಟು ಏರಿದೆ. ಕನ್ಸ್ಯೂಮರ್ ಗೂಡ್ಸ್ ಶೇಕಡ 0.34ರಷ್ಟು ಮೇಲೇರಿದೆ. ಹಾಗಾದರೆ ಆರಂಭಿಕ ವಹಿವಾಟಿನಲ್ಲಿ ಯಾವ ಷೇರುಗಳು ಏರಿಕೆಯಾಗಿದೆ. ಯಾವ ಷೇರುಗಳು ಇಳಿಕೆಯಾಗಿದೆ. ಯಾವ ಷೇರುಗಳು ಇಂದಿನ ಪ್ರಮುಖ ಷೇರುಗಳು ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಯಾವೆಲ್ಲಾ ಷೇರುಗಳು ಏರಿಕೆ, ಇಳಿಕೆ

ಯಾವೆಲ್ಲಾ ಷೇರುಗಳು ಏರಿಕೆ, ಇಳಿಕೆ

ಸೆನ್ಸೆಕ್ಸ್‌ನಲ್ಲಿ ಎನ್‌ಟಿಪಿಸಿ ಷೇರು ಭಾರೀ ಇಳಿಕೆಯಾಗಿದೆ. ಇನ್ನು ವಿಪ್ರೋ, ಬಜಾಜ್ ಫೈನಾನ್ಸ್, ಎಚ್‌ಸಿಎಲ್ ಟೆಕ್, ಇನ್ಫೋಸಿಸ್, ಟೆಕ್ ಮಹೀಂದ್ರಾ ಷೇರುಗಳು ಕುಸಿತವಾಗಿದೆ. ಈ ಸಂದರ್ಭದಲ್ಲೇ ಐಸಿಐಸಿಐ ಬ್ಯಾಂಕ್, ಸನ್ ಫಾರ್ಮಾ, ನೆಸ್ಲೆ ಇಂಡಿಯಾ, ಎಚ್‌ಯುಎಲ್, ರಿಲಯನ್ಸ್ ಇಂಡಸ್ಟ್ರೀಸ್, ಮಾರುತಿ ಷೇರುಗಳು ಲಾಭವನ್ನು ಕಂಡಿದೆ. ಇನ್ನು ಸನ್‌ಫಾರ್ಮಾ, ನೆಸ್ಲೆ ಇಂಡಿಯಾ, ಪವರ್ ಗ್ರಿಡ್ ಕಾರ್ಫೋರೇಷನ್, ಭಾರ್ತಿ ಏರ್‌ಟೆಲ್, ಹಿಂದೂಸ್ತಾನ್ ಯೂನಿಲಿವರ್ ಸೆನ್ಸೆಕ್ಸ್‌ನಲ್ಲಿ ಲಾಭ ಕಂಡ ಷೇರುಗಳು ಆಗಿದೆ.

 ಪ್ರಮುಖ ಷೇರುಗಳು

ಪ್ರಮುಖ ಷೇರುಗಳು

ಐಸಿಐಸಿಐ ಬ್ಯಾಂಕ್ ಷೇರು ಶೇಕಡ 1.58ರಷ್ಟು ಏರಿಕೆಯಾಗಿ ರೂಪಾಯಿ 849.65ಕ್ಕೆ ತಲುಪಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಷೇರು ಶೇಕಡ 0.66ರಷ್ಟು ಜಿಗಿದು, ರೂಪಾಯಿ 2583.85ಕ್ಕೆ ತಲುಪಿದೆ. ಎನ್‌ಟಿಪಿಸಿ ಷೇರು ಶೇಕಡ 2.39ರಷ್ಟು ಕುಸಿದು ರೂಪಾಯಿ 155.40ಕ್ಕೆ ತಲುಪಿದೆ. ಬಜಾಜ್ ಫೈನಾನ್ಸ್ ಷೇರು ಶೇಕಡ 1.20ರಷ್ಟು ಕುಸಿದು ರೂಪಾಯಿ 7255.10ಕ್ಕೆ ವಹಿವಾಟು ಆರಂಭ ಮಾಡಿದೆ. ಏಷ್ಯನ್ ಪೇಂಟ್ಸ್, ಎಚ್‌ಡಿಎಫ್‌ಸಿ, ಟಿಸಿಎಸ್, ಆಕ್ಸಿಸ್ ಬ್ಯಾಂಕ್ ಷೇರುಗಳು ಭಾರೀ ನಷ್ಟವನ್ನು ದಾಖಲಿಸಿದೆ.

 ಈ ಷೇರುಗಳು ಇಂದಿನ ಫೋಕಸ್

ಈ ಷೇರುಗಳು ಇಂದಿನ ಫೋಕಸ್

ಕೋಲ್ ಇಂಡಿಯಾ, ಈಷರ್ ಮೋಟಾರ್ಸ್, ಹಿಂಡಾಲ್ಕೊ ಇಂಡಸ್ಟ್ರೀಸ್, ಟಾಟಾ ಕನ್ಸ್ಯೂಮರ್ ಪ್ರೊಡೆಕ್ಟ್ಸ್, ಐಆರ್‌ಸಿಟಿಸಿ, ಆರತಿ ಇಂಡಸ್ಟ್ರೀಸ್, ಅಬಾಟ್ ಇಂಡಿಯಾ, ಅರವಿಂದ್ ಫ್ಯಾಶನ್ಸ್, ಅಶೋಕ ಬಿಲ್ಡ್‌ಕಾನ್, ಸಿಇಎಸ್‌ಸಿ, ಕೊಚ್ಚಿನ್ ಶಿಪ್‌ಯಾರ್ಡ್, ಕಮ್ಮಿನ್ಸ್ ಇಂಡಿಯಾ, ಎಂಡ್ಯೂರೆನ್ಸ್ ಟೆಕ್ನಾಲಜೀಸ್, ಜೆನರಲ್ ಇನ್ಶುರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ , ಗ್ಲೆನ್‌ಮಾರ್ಕ್ ಫಾರ್ಮಾಸ್ಯುಟಿಕಲ್ಸ್, ಇಂಡಿಯಾಬುಲ್ಸ್ ಹೌಸಿಂಗ್ ಫೈನಾನ್ಸ್, ಇಪ್ಕಾ ಲ್ಯಾಬೊರೇಟರೀಸ್, ಇಂಡಿಯನ್ ರೈಲ್ವೇ ಫೈನಾನ್ಸ್ ಕಾರ್ಪೊರೇಷನ್, ಐಟಿಐ, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಜೈಪ್ರಕಾಶ್ ಅಸೋಸಿಯೇಟ್ಸ್, ಮಜಗಾನ್ ಡಾಕ್ ಶಿಪ್ ಬಿಲ್ಡರ್ಸ್, ಮೆಡ್‌ಪ್ಲಸ್ ಹೆಲ್ತ್ ಸರ್ವಿಸಸ್, ಮೆಟ್ರೋಪೊಲಿಸ್ ಹೆಲ್ತ್‌ಕೇರ್, ಎನ್‌ಎಚ್‌ಪಿಸಿ, ಆಯಿಲ್ ಇಂಡಿಯಾ, ಪತಂಜಲಿ ಫುಡ್ಸ್, ಪಿಡಿಲೈಟ್ ಇಂಡಸ್ಟ್ರೀಸ್, ಪಿಬಿ ಫಿನ್ಟೆಕ್, ರಾಡಿಕೊ ಖೈತಾನ್, ಸದ್ಭವ್ ಇಂಜಿನಿಯರಿಂಗ್, ಸೈಲ್, ಝೈಡಸ್ ಲೈಫ್ ಸೈನ್ಸಸ್ ಇಂದಿನ ಪ್ರಮುಖ ಫೋಕಸ್ ಹೊಂದಿರುವ ಷೇರುಗಳು ಆಗಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+