ಕಳೆದ ವಾರದ ಕೊನೆಯ ವಹಿವಾಟಿನಲ್ಲಿ ನಷ್ಟದೊಂದಿಗೆ ವಹಿವಾಟು ಅಂತ್ಯ ಮಾಡಿದ್ದ ಷೇರು ಮಾರುಕಟ್ಟೆ, ಸೋಮವಾರ ಆರಂಭಿಕ ವಹಿವಾಟಿನಲ್ಲೂ ನಷ್ಟದೊಂದಿಗೆ ವಹಿವಾಟು ಆರಂಭಿಸಿದೆ. ಪ್ರಮುಖವಾಗಿ ಹಣದುಬ್ಬರವು ಷೇರು ಮಾರುಕಟ್ಟೆಯ ಮೇಲೆ ಭಾರೀ ಪರಿಣಾಮವನ್ನು ಉಂಟು ಮಾಡುತ್ತಿದೆ.
ಬಿಎಸ್‌ಇ ಸೆನ್ಸೆಕ್ಸ್ 1000 ಅಂಕ ಕುಸಿದು 52,990ದಲ್ಲಿ ವಹಿವಾಟು ಆರಂಭಿಸಿದರೆ, ಈ ಸಂದರ್ಭದಲ್ಲೇ ನಿಫ್ಟಿ ಶೇಕಡ 2ರಷ್ಟು ಕುಸಿದು 15,830ರಲ್ಲಿ ವಹಿವಾಟಿಗೆ ಇಳಿದಿದೆ. ಹೂಡಿಲೆದಾರರು ಜಾಗತಿಕವಾಗಿ ಈ ಹಣದುಬ್ಬರದ ನಡುವೆ ಬದಲಾಗುತ್ತಿರುವ ಹಣಕಾಸು ನೀತಿಯ ಬಗ್ಗೆ ಹೆಚ್ಚು ಚಿಂತಿತರಾಗಿದ್ದು, ಷೇರು ಮಾರುಕಟ್ಟೆಯತ್ತ ಅಧಿಕ ಮೋಹ ತೋರಿಸುತ್ತಿಲ್ಲ. ಸದ್ಯಕ್ಕೆ ಹೂಡಿಕೆ ವಿಚಾರದಲ್ಲಿ ರಿಸ್ಕ್‌ನಿಂದ ಕೊಂಚ ಹಿಂದೇಟು ಹಾಕುತ್ತಿದ್ದಾರೆ ಎಂದು ತಜ್ಞರು ಹೇಳಿದ್ದಾರೆ.
ಇನ್ನು ಭಾರತೀಯ ಮಾರುಕಟ್ಟೆಯಲ್ಲಿ ಏಷ್ಯನ್ ಷೇರುಗಳು ಭಾರೀ ಇಳಿಕೆ ಕಂಡಿದೆ. ಪ್ರಮುಖವಾಗಿ ಸೋಮವಾರ ಬ್ಯಾಂಕ್ ನಿಫ್ಟಿ ಭಾರೀ ಕೆಳಕ್ಕೆ ಕುಸಿದಿದೆ. ಸುಮಾರು 900ಕ್ಕಿಂತ ಅಧಿಕ ಅಂಕ ಅಥವಾ ಶೇಕಡ 2.50ರಷ್ಟು ಕುಸಿದು, 33,600ಕ್ಕೆ ತಲುಪಿದೆ.

ಇಂದು ಹೂಡಿಕೆದಾರರು ಮುಖ್ಯವಾಗಿ ರಿಲಾಯನ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಕೋಲ್ ಇಂಡಿಯಾ, ಮ್ಯಾಪ್‌ಮೈಇಂಡಿಯಾ, ಐಐಎಫ್‌ಎಲ್ ಫಿನಾನ್ಸ್, ಕಿಮ್ಸ್ ಸ್ಟಾಕ್ ಮೇಲೆ ಹೆಚ್ಚು ಚಿತ್ತ ನೆಟ್ಟಿದ್ದಾರೆ. ಹಲವಾರು ವಾರಗಳಿಂದ ಈ ಹಣದುಬ್ಬರದ ನಡುವೆಯೂ ರಿಲಾಯನ್ಸ್ ಷೇರು ಲಾಭವನ್ನು ಕಾಣುತ್ತಿದೆ. ಇಂದು ಆರಂಭಿಕವಾಗಿ ಲಾಭ ಕಂಡರೂ ನಡುವೆ ಏರಿಳಿತ ಕಾಣುತ್ತಿದೆ. ಎಲ್ಲಾ ಮೂವತ್ತು ಸೆನ್ಸೆಕ್ಸ್ ಸ್ಟಾಕ್‌ಗಳು ನಷ್ಟದೊಂದಿಗೆ ವಹಿವಾಟು ಆರಂಭ ಮಾಡಿದೆ. ನಿಫ್ಟಿ ಬ್ಯಾಂಕ್ ಶೇಕಡ 3 ಕೆಳಕ್ಕೆ ಕುಸಿತ ಕಂಡಿದೆ. ಬ್ಯಾಂಕ್ ಆಫ್ ಬರೋಡಾ, ಐಸಿಐಸಿಐ ಬ್ಯಾಂಕ್ ಶೇಕಡ 5ರಷ್ಟು ಮೇಲಕ್ಕೆ ಏರಿದೆ.
ಯಾವುದು ಟಾಪ್ ಲೂಸರ್?
ಬಜಾಜ್ ಟ್ವಿನ್ಸ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಇಂಡಸ್‌ಇಂಡ್ ಬ್ಯಾಂಕ್, ರಿಲಾಯನ್ಸ್, ಎಲ್&ಟಿ, ಕೋಟಕ್ ಬ್ಯಾಂಕ್, ಎಚ್‌ಡಿಎಫ್‌ಸಿ, ಟೆಕ್ ಎಂ, ಇನ್ಫೋಸಿಸ್ ಷೇರುಗಳು ವಹಿವಾಟು ಆರಂಭವಾಗಿ ಕೊಂಚ ಸಮಯದ ಬಳಿಕ ಶೇಕಡ ಮೂರರಷ್ಟು ಕುಸಿದಿದೆ. ಪ್ರಮುಖವಾಗಿ ವೊಡಾಫೋನ್ ಐಡಿಯಾ, ಆರ್‌ಬಿಎಲ್ ಬ್ಯಾಂಕ್, ಯೆಸ್ ಬ್ಯಾಂಕ್ ಉತ್ತಮ ವಹಿವಾಟು ನಡೆಸುತ್ತಿದೆ.


Click it and Unblock the Notifications