For Quick Alerts
ALLOW NOTIFICATIONS  
For Daily Alerts

ಷೇರುಪೇಟೆ ಕುಸಿತ: ಯಾವೆಲ್ಲ ಸ್ಟಾಕ್ಸ್‌ ಇಳಿಕೆ ನೋಡಿ

|

ಷೇರು ಮಾರುಕಟ್ಟೆ ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ಮತ್ತೆ ಕುಸಿದಿದೆ. ಯುಎಸ್‌ ಫೆಡ್ ದರ ಏರಿಕೆ ಬೆನ್ನಲ್ಲೇ ಹಾಗೂ ಯುಎಸ್‌ ಫೆಡ್ ಮತ್ತಷ್ಟು ದರ ಏರಿಕೆ ಮಾಡುವ ಸಾಧ್ಯತೆಯ ಸುದ್ದಿ ನಡುವೆ ಭಾರತೀಯ ಷೇರುಪೇಟೆಯು ನಿರಂತರವಾಗಿ ಪಾತಾಳಕ್ಕೆ ಇಳಿಯುತ್ತಿದೆ. ರೂಪಾಯಿ ಕೂಡಾ ಸಾರ್ವಕಾಲಿಕ ಕುಸಿತ ಕಾಣುತ್ತಿದೆ.

 

30 ಷೇರುಗಳ ಬಿಎಸ್‌ಇ ಸೂಚ್ಯಂಕ 337.06 ಅಂಕ ಕುಸಿದು 59,119.72 ವಹಿವಾಟು ಅಂತ್ಯ ಮಾಡಿತ್ತು. ಇನ್ನು ನಿಫ್ಟಿ 88.55 ಅಂಕ ಕುಸಿದು 17,629.80ಕ್ಕೆ ವಹಿವಾಟು ಅಂತ್ಯ ಮಾಡಿತ್ತು. ವಹಿವಾಟಿನ ಆರಂಭದಲ್ಲಿ 776 ಷೇರುಗಳು ಏರಿಕೆಯಾಗಿದ್ದರೆ, 1013 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 114 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿತ್ತು.

 

ಯುಎಸ್‌ ಫೆಡ್ ದರ ಏರಿಕೆ, ಷೇರುಪೇಟೆ ಡೌನ್: ರೂಪಾಯಿ ಸಾರ್ವಕಾಲಿಕ ಕುಸಿತಯುಎಸ್‌ ಫೆಡ್ ದರ ಏರಿಕೆ, ಷೇರುಪೇಟೆ ಡೌನ್: ರೂಪಾಯಿ ಸಾರ್ವಕಾಲಿಕ ಕುಸಿತ

ಶುಕ್ರವಾರ ವಹಿವಾಟಿನ ಆರಂಭದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 149.96 ಅಂಕ ಅಥವಾ ಶೇಕಡ 0.25ರಷ್ಟು ಕುಸಿದು 58969.76 ವಹಿವಾಟು ಆರಂಭಿಸಿದೆ. ಇನ್ನು ನಿಫ್ಟಿ 40.60 ಅಂಕ ಅಥವಾ ಶೇಕಡ 0.23ರಷ್ಟು ಕುಸಿದು 17589.20ಕ್ಕೆ ವಹಿವಾಟಿಗೆ ಇಳಿದಿದೆ. ವಹಿವಾಟಿನ ಆರಂಭದಲ್ಲಿ 1274 ಷೇರುಗಳು ಏರಿಕೆಯಾಗಿದ್ದರೆ, 711 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 121 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿತ್ತು.

ಷೇರುಪೇಟೆ ಕುಸಿತ: ಯಾವೆಲ್ಲ ಸ್ಟಾಕ್ಸ್‌ ಇಳಿಕೆ ನೋಡಿ

ಯಾವೆಲ್ಲ ಸ್ಟಾಕ್‌ಗಳು ಏರಿಕೆ, ಇಳಿಕೆ

ನಿಫ್ಟಿಯಲ್ಲಿ ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಟೆಕ್ ಮಹೀಂದ್ರಾ, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಟಾಟಾ ಮೋಟಾರ್ಸ್ ಪ್ರಮುಖ ಲಾಭ ಗಳಿಸಿದರೆ, ಟಾಟಾ ಸ್ಟೀಲ್, ಸಿಪ್ಲಾ, ಹೀರೋ ಮೊಟೊಕಾರ್ಪ್, ಅಪೊಲೊ ಹಾಸ್ಪಿಟಲ್ಸ್ ಮತ್ತು ಜೆಎಸ್‌ಡಬ್ಲ್ಯೂ ಸ್ಟೀಲ್ ಲಾಭ ಗಳಿಸಿದೆ.

Closing Bell: ಸೆನ್ಸೆಕ್ಸ್, ನಿಫ್ಟಿ ಏರಿಕೆ, ಟಾಪ್ ಗೇನರ್ ಯಾವುದು?Closing Bell: ಸೆನ್ಸೆಕ್ಸ್, ನಿಫ್ಟಿ ಏರಿಕೆ, ಟಾಪ್ ಗೇನರ್ ಯಾವುದು?

ಟಾಟಾ ಸ್ಟೀಲ್ಸ್, ಐಟಿಸಿ, ಹಿಂದೂಸ್ತಾನ್ ಯೂನಿಲಿವರ್, ಟೈಟಾನ್, ಸನ್‌ಫಾರ್ಮಾ ಸ್ಟಾಕ್ ಆರಂಭಿಕ ವಹಿವಾಟಿನಲ್ಲಿ ಏರಿಕೆಯಾಗಿದ್ದರೆ, ಡಾ ರೆಡ್ಡೀಸ್, ಮಾರುತಿ, ಇನ್ಫೋಸಿಸ್, ಎಚ್‌ಸಿಎಲ್‌ ಟೆಕ್, ಐಸಿಐಸಿಐ ಬ್ಯಾಂಕ್, ರಿಲಯನ್ಸ್, ಅಲ್ಟ್ರಾಟೆಕ್ ಸಿಮೆಂಟ್, ಎಲ್‌ಟಿ, ಎಸ್‌ಬಿಐ ಇನ್ಶೂರೆನ್ಸ್, ಭಾರ್ತಿ ಏರ್‌ಟೆಲ್, ಎಂ&ಎಂ, ಪವರ್ ಗ್ರಿಡ್, ವಿಪ್ರೋ, ಟಿಸಿಎಸ್, ಏಷ್ಯನ್ ಪೇಂಟ್ಸ್, ಬಜಾಜ್ ಫೈನಾನ್ಸ್, ನೆಸ್ಲೆ ಇಂಡಿಯಾ, ಬಜಾಜ್ ಫಿನ್‌ಸರ್ವ್, ಆಕ್ಸಿಸ್ ಬ್ಯಾಂಕ್, ಎನ್‌ಟಿಪಿಸಿ, ಕೋಟಕ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ, ಟೆಕ್ ಎಂ ಷೇರುಗಳು ಆರಂಭಿಕ ವಹಿವಾಟಿನಲ್ಲಿ ಇಳಿಕೆಯಾಗಿದೆ.

English summary

Opening Bell: Sensex Crashes 140 Points, Nifty Trades Below 17,500

Opening Bell: Sensex Crashes 140 Points, Nifty Trades Below 17,500.
Story first published: Friday, September 23, 2022, 11:26 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X