ಸತತ ಮೂರನೇ ಸೆಷನ್ ಆರಂಭದಲ್ಲಿ ಷೇರು ಪೇಟೆಯು ಕುಸಿದಿದೆ. ಪ್ರಮುಖವಾಗಿ ಯುಎಸ್ ಫೆಡರಲ್ ಸಭೆಯು ನಡೆಯಲಿರುವ ಕಾರಣದಿಂದಾಗಿ ಹೂಡಿಕೆದಾರರ ಗಮನ ಸಭೆಯ ಮೇಲಿದೆ. ಯುಎಸ್ ಫೆಡರಲ್ ಬಡ್ಡಿದರವನ್ನು ಏರಿಕೆ ಮಾಡುವ ನಿರೀಕ್ಷೆಯಿದೆ. ಇದು ಷೇರು ಪೇಟೆ ಮೇಲೆ ಪರಿಣಾಮ ಬೀರಿದೆ.
ವಾಲ್‌ಸ್ಟ್ರೀಟ್‌ನಲ್ಲಿ ಏಷ್ಯನ್ ಷೇರುಗಳು ಕುಸಿತವನ್ನು ಕಂಡಿದೆ. ಇನ್ನು ಈಗಾಗಲೇ ಕಳೆದ ತಿಂಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಮುಖ ವಿತ್ತೀಯ ನೀತಿಯಲ್ಲಿ ಬದಲಾವಣೆ ತಂದಿದೆ. ಕೇಂದ್ರ ಬ್ಯಾಂಕ್ ಈ ಹಣದುಬ್ಬರದ ನಡುವೆ ರೆಪೋ ದರವನ್ನು ಸುಮಾರು 50 ಮೂಲಾಂಕ ಏರಿಕೆ ಮಾಡಿದೆ.
ಆದರೆ ಹಣದುಬ್ಬರವು ಕೇಂದ್ರ ಬ್ಯಾಂಕ್ ನಿರೀಕ್ಷೆಯಷ್ಟು ಕಡಿಮೆಯಾಗಿಲ್ಲ. ಈ ಹಿನ್ನೆಲೆಯಿಂದಾಗಿ ಜುಲೈನಲ್ಲಿ ರಿಸರ್ವ್ ಬ್ಯಾಂಕ್ ರೆಪೋ ದರವನ್ನು ಸುಮಾರು 75 ಮೂಲಾಂಕ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇದು ಹೂಡಿಕೆದಾರರ ಮೇಲೆ ಅಧಿಕ ಪರಿಣಾಮ ಉಂಟು ಮಾಡಿದೆ.
ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಸುಮಾರು 27 ಅಂಕ ಅಥವಾ ಶೇಕಡ 0.05ರಷ್ಟು ಕುಸಿದು 55,241ಕ್ಕೆ ತಲುಪಿದೆ. ಇನ್ನು ಎನ್‌ಎಸ್‌ಇಯಲ್ಲಿ ನಿಫ್ಟಿಯು 9 ಅಂಕ ಅಥವಾ ಶೇಕಡ 0.05ರಷ್ಟು ಕೆಳಕ್ಕೆ ಇಳಿದು 16,475ಕ್ಕೆ ವಹಿವಾಟು ಆರಂಭ ಮಾಡಿದೆ. 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಮಂಗಳವಾರ ವಹಿವಾಟಿನ ಅಂತ್ಯದಲ್ಲಿ ಸುಮಾರು 498 ಅಂಕ ಅಥವಾ ಶೇಕಡ 0.89ರಷ್ಟು ಇಳಿಕೆಯಾಗಿ 55,268ಕ್ಕೆ ತಲುಪಿದೆ. ಇನ್ನು ಎನ್‌ಎಸ್‌ಇಯಲ್ಲಿ ನಿಫ್ಟಿಯು 147 ಅಂಕ ಅಥವಾ ಶೇಕಡ 0.88 ರಷ್ಟು ಕೆಳಕ್ಕೆ ಇಳಿದು 16,484ಕ್ಕೆ ವಹಿವಾಟು ಅಂತ್ಯ ಮಾಡಿದೆ.
ನಿಫ್ಟಿ ಮಿಡ್‌ಕ್ಯಾಪ್, ಸ್ಮಾಲ್ ಕ್ಯಾಪ್
ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡ 0.21 ಹಾಗೂ ಸ್ಮಾಲ್ ಕ್ಯಾಪ್ ಶೇಕಡ 0.34ರಷ್ಟು ಕುಸಿದಿದೆ. 15 ಸೆಕ್ಟರ್ ಗೇಜ್‌ಗಳಲ್ಲಿ 12 ನಷ್ಟವನ್ನು ಕಂಡಿದೆ. ಉಪ ಸೂಚ್ಯಂಕಗಳಾದ ನಿಫ್ಟಿ ಕನ್ಸೂಮರ್ ಡ್ಯೂರೆಬಲ್ಸ್, ನಿಫ್ಟಿ ಫೈನಾನ್ಶಿಯಲ್ ಸರ್ವಿಸಸ್ ಕ್ರಮವಾಗಿ ಶೇಕಡ 1.04, ಶೇಕಡ 0.33ರಷ್ಟು ಕುಸಿದಿದೆ. ನಿಫ್ಟಿ ಫಾರ್ಮಾ ಬೆಸ್ಟ್ ಸೆಕ್ಟರ್ ಆಗಿದ್ದರೆ, ನಿಫ್ಟಿ ಆಟೋ ತೀರಾ ಕೆಳಕ್ಕೆ ಇಳಿದ ಸೆಕ್ಟರ್ ಆಗಿದೆ.
ಬಜಾಜ್ ಫಿನ್‌ಸರ್ವ್ ಟಾಪ್ ನಿಫ್ಟಿ ಲೂಸರ್
ಸ್ಟಾಕ್ ಮಾರುಕಟ್ಟೆಯಲ್ಲಿ ಬಜಾಜ್ ಫಿನ್‌ಸರ್ವ್ ಟಾಪ್ ನಿಫ್ಟಿ ಲೂಸರ್ ಆಗಿದೆ. ಬಜಾಜ್ ಫಿನ್‌ಸರ್ವ್ ಸ್ಟಾಕ್ ಸುಮಾರು ಶೇಕಡ 2ರಷ್ಟು ಕುಸಿತ ಕಂಡು ರೂಪಾಯಿ 13,046.80ಕ್ಕೆ ತಲುಪಿದೆ. ಅಪೋಲೀ ಹಾಸ್ಪಿಟಲ್, ಭಾರ್ತಿ ಏರ್‌ಟೆಲ್, ಕೋಟಕ್ ಮಹೀಂದ್ರಾ ಬ್ಯಾಂಕ್, ಜೆಎಸ್‌ಡಬ್ಲ್ಯೂ ಸ್ಟೀಲ್ ಕೂಡಾ ಭಾರೀ ಕುಸಿತವನ್ನು ಕಂಡಿದೆ. ಈ ನಡುವೆ ಲಾರ್ಸೆನ್ ಸ್ಟಾಕ್ ಏರಿಕೆಯಾಗಿದೆ. ಲಾರ್ಸೆನ್ ಸ್ಟಾಕ್ ಶೇಕಡ 3.12ರಷ್ಟು ಏರಿಕೆಯಾಗಿ ರೂಪಾಯಿ 1,805.90ಕ್ಕೆ ತಲುಪಿದೆ.
ಯಾವ ಸ್ಟಾಕ್ ಏರಿಕೆ, ಇಳಿಕೆ
ಬಾಂಬೆ ಸ್ಟಾಕ್ ಮಾರುಕಟ್ಟೆಯಲ್ಲಿ 1,150 ಷೇರುಗಳು ಏರಿಕೆಯನ್ನು ಕಂಡಿದ್ದರೆ, 1,381 ಷೇರುಗಳು ಕುಸಿತವನ್ನು ಕಂಡಿದೆ. 30 ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ ಬಜಾಜ್ ಫಿನ್‌ಸರ್ವ್, ಏರ್‌ಟೆಲ್, ಕೋಟಕ್ ಬ್ಯಾಂಕ್, ಡಾ ರೆಡ್ಡೀಸ್, ಬಜಾಜ್ ಫೈನಾನ್ಸ್, ಟೈಟಾನ್, ರಿಲಯನ್ಸ್ ಇಂಡಸ್ಟ್ರೀಸ್, ಟೆಕ್ ಮಹೀಂದ್ರಾ, ಇನ್ಫೋಸಿಸ್, ಎಂ&ಎಂ, ಐಟಿಸಿ, ಇಂಡಸ್‌ಇಂಡ್ ಬ್ಯಾಂಕ್ ಟಾಪ್ ಲೂಸರ್‌ಗಳಾಗಿದೆ. ಇನ್ನು ಎಲ್&ಟಿ, ಸನ್‌ಫಾರ್ಮಾ, ಹಿಂದೂಸ್ತಾನ್ ಯೂನಿಲಿವರ್, ಅಲ್ಟ್ರಾಟೆಕ್ ಸಿಮೆಂಟ್, ಎಚ್‌ಸಿಎಲ್ ಟೆಕ್ನಾಲಜೀಸ್, ಪವರ್ ಗ್ರಿಡ್, ಏಷ್ಯನ್ ಪೇಂಟ್ಸ್, ನೆಸ್ಲೆ ಇಂಡಿಯಾ, ಟಿಸಿಎಸ್, ಟಾಟಾ ಸ್ಟೀಲ್ಸ್, ಮಾರುತಿ ವಿಪ್ರೋ ಲಾಭವನ್ನು ಕಂಡಿದೆ.
ಎಲ್‌ಐಸಿ, ಜೊಮ್ಯಾಟೊ ಷೇರು ಹೇಗಿದೆ?
ಭಾರತದ ಅತೀ ದೊಡ್ಡ ವಿಮಾ ಸಂಸ್ಥೆ, ದೊಡ್ಡ ಹೂಡಿಕೆದಾರ ಸಂಸ್ಥೆಯಾದ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಷೇರುಗಳು ಬುಧವಾರ ವಹಿವಾಟಿನ ಆರಂಭದಲ್ಲಿ ಮತ್ತೆ ಕುಸಿತವಾಗಿದೆ. ಷೇರುಗಳು ಸುಮಾರಿ 0.17ರಷ್ಟು ಕುಸಿದು ರೂಪಾಯಿ 674.20ಕ್ಕೆ ತಲುಪಿದೆ. ಇನ್ನು ಮಂಗಳವಾರ ವಹಿವಾಟಿನ ಅಂತ್ಯದಲ್ಲಿ ಎಲ್‌ಐಸಿ ಷೇರು ಶೇಕಡ 1.29ರಷ್ಟು ಕುಸಿದು ರೂಪಾಯಿ 675.35ಕ್ಕೆ ಇಳಿದಿತ್ತು. ಇನ್ನು ಜೊಮ್ಯಾಟೊ ಷೇರು ಬುಧವಾರ ವಹಿವಾಟಿನ ಆರಂಭದಲ್ಲಿ ಶೇಕಡ 3.60ರಷ್ಟು ಕುಸಿದು ರೂಪಾಯಿ 43.1ಕ್ಕೆ ತಲುಪಿದೆ. ಮಂಗಳವಾರ ವಹಿವಾಟಿನ ಅಂತ್ಯದಲ್ಲಿ ಜೊಮ್ಯಾಟೊ ಷೇರು ಶೇಕಡ 12.41ರಷ್ಟು ಕುಸಿದು ರೂಪಾಯಿ 41.65ಕ್ಕೆ ತಲುಪಿತ್ತು.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications