ಷೇರುಪೇಟೆ ಕುಸಿತ: ಯಾವೆಲ್ಲಾ ಷೇರುಗಳು ಇಳಿಕೆ?

ವಾರದ ವಹಿವಾಟಿನ ಆರಂಭದ ದಿನವಾದ ಸೋಮವಾರದ ಆರಂಭಿಕ ವಹಿವಾಟಿನಲ್ಲೇ ಷೇರು ಮಾರುಕಟ್ಟೆ ಕುಸಿತ ಕಂಡಿದೆ. ಸತತ ಆರು ದಿನಗಳ ಕಾಲ ಏರಿಕೆಯನ್ನು ಕಂಡಿದ್ದ ಷೇರು ಮಾರುಕಟ್ಟೆ ಸೋಮವಾರ ಕುಸಿದಿದೆ. ಏಷ್ಯನ್ ಷೇರುಗಳು ಇಳಿದಿದೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 226 ಅಂಕ ಅಥವಾ ಶೇಕಡ 0.40ರಷ್ಟು ಇಳಿಕೆಯಾಗಿ 55,846ಕ್ಕೆ ತಲುಪಿದೆ. ಇನ್ನು ಎನ್‌ಎಸ್‌ಇ ನಿಫ್ಟಿ 57 ಅಂಕ ಅಥವಾ ಶೇಕಡ 0.34ರಷ್ಟು ಕುಸಿದು 16,663ಕ್ಕೆ ತಲುಪಿದೆ. ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡ 0.08 ಏರಿಕೆಯಾಗಿದ್ದರೆ, ಸ್ಮಾಲ್ ಕ್ಯಾಪ್ ಶೇಕಡ 0.09ರಷ್ಟು ಹೆಚ್ಚಳವಾಗಿದೆ.

15 ಸೆಕ್ಟರ್ ಗೇಜ್‌ಗಳಲ್ಲಿ ಏಳು ಇಳಿಕೆಯನ್ನು ಕಂಡಿದೆ. ಉಪ ಸೂಚ್ಯಂಕಗಳಾದ ನಿಫ್ಟಿ ಆಯಿಲ್ & ಗ್ಯಾಸ್, ನಿಫ್ಟಿ ಫಾರ್ಮಾ ಕ್ರಮವಾಗಿ ಶೇಕಡ 1.43 ಮತ್ತು ಶೇಕಡ 0.41ರಷ್ಟು ಇಳಿಕೆಯಾಗಿದೆ. ಶುಕ್ರವಾರ ವಹಿವಾಟಿನ ಅಂತ್ಯದಲ್ಲಿ ಷೇರು ಮಾರುಕಟ್ಟೆಯು ಏರಿಕೆಯನ್ನು ಕಂಡಿದೆ. 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 390 ಅಂಕ ಅಥವಾ ಶೇಕಡ 0.70ರಷ್ಟು ಏರಿಕೆಯಾಗಿ 56,072ಕ್ಕೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 114 ಅಂಕ ಅಥವಾ ಶೇಕಡ 0.69ರಷ್ಟು ಹೆಚ್ಚಳವಾಗಿ 16,719ಕ್ಕೆ ವಹಿವಾಟು ಅಂತ್ಯ ಮಾಡಿದೆ.

 ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಭಾರೀ ಕುಸಿತ

ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಭಾರೀ ಕುಸಿತ

ಷೇರು ಮಾರುಕಟ್ಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಭಾರೀ ಕುಸಿತವಾಗಿದೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇಕಡ 3.20 ರಷ್ಟು ಕೆಳಕ್ಕೆ ಇಳಿದು ರೂಪಾಯಿ 2,423.05ಕ್ಕೆ ತಲುಪಿದೆ. ಈ ಸಂದರ್ಭದಲ್ಲೇ ಒಎನ್‌ಜಿಸಿ, ಅಲ್ಟ್ರಾಟೆಕ್ ಸಿಮೆಂಟ್, ಗ್ರಾಸಿಮ್, ಶ್ರೀ ಸಿಮೆಂಟ್ ಷೇರುಗಳು ಏರಿಕೆಯನ್ನು ಕಂಡಿದೆ. ಇನ್ನು ಅಪೋಲೋ ಹಾಸ್ಪಿಟಲ್ ಟಾಪ್ ಗೇನರ್ ಆಗಿದೆ. ಷೇರುಗಳು ಸುಮಾರು 1.76ರಷ್ಟು ಏರಿಕೆಯಾಗಿ ರೂಪಾಯಿ 4,198.05ಕ್ಕೆ ತಲುಪಿದೆ.

 ಯಾವ ಷೇರು ಏರಿಕೆ, ಯಾವುದು ಇಳಿಕೆ?

ಯಾವ ಷೇರು ಏರಿಕೆ, ಯಾವುದು ಇಳಿಕೆ?

ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ 1,364 ಷೇರುಗಳು ಏರಿಕೆಯನ್ನು ಕಂಡಿದ್ದರೆ, 1,252 ಷೇರುಗಳು ಇಳಿಕೆಯನ್ನು ಕಂಡಿದೆ. 30 ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ ರಿಲಯನ್ಸ್, ಅಲ್ಟ್ರಾಟೆಕ್ ಸಿಮೆಂಟ್, ಸನ್ ಫಾರ್ಮಾ, ನೆಸ್ಲೆ ಇಂಡಿಯಾ, ಎಚ್‌ಡಿಎಫ್‌ಸಿ, ಟೆಕ್ ಮಹೀಂದ್ರಾ, ಎನ್‌ಟಿಪಿಸಿ, ಪವರ್ ಗ್ರಿಡ್, ಎಂ&ಎಂ, ಏಷ್ಯನ್ ಪೇಂಟ್ಸ್, ಐಟಿಸಿ, ಹಿಂದೂಸ್ತಾನ್ ಯೂನಿಲಿವರ್, ಡಾ ರೆಡ್ಡೀಸ್, ಜೋಮಾಟೋ, ಎಚ್‌ಎಫ್‌ಸಿಎಲ್, ಫಿನೋಲೆಕ್ಸ್ ಇಂಡ್, ಈಚರ್ ಮೋಟಾರ್ಸ್, ಇನ್ಫೋಸಿಸ್ ಷೇರುಗಳು ಭಾರೀ ಇಳಿಕೆ ಕಂಡಿದೆ. ಈ ಸಂದರ್ಭದಲ್ಲೇ ಆರಂಭಿಕ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್ಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ಏರ್‌ಟೆಲ್ ಸ್ಟಾಕ್‌ಗಳು ಏರಿಕೆಯಾಗಿದೆ.

 ಎಲ್‌ಐಸಿ ಷೇರುಗಳು ಹೇಗಿದೆ?

ಎಲ್‌ಐಸಿ ಷೇರುಗಳು ಹೇಗಿದೆ?

ಭಾರತದ ಅತೀ ದೊಡ್ಡ ವಿಮಾ ಸಂಸ್ಥೆ, ಅತೀ ದೊಡ್ಡ ಹೂಡಿಕೆದಾರ ಸಂಸ್ಥೆ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಷೇರುಗಳು ಶುಕ್ರವಾರ ವಹಿವಾಟಿನ ಅಂತ್ಯದಲ್ಲಿ ಏರಿಕೆಯನ್ನು ಕಂಡಿದೆ. ಆದರೆ ಸೋಮವಾರ ವಹಿವಾಟಿನ ಆರಂಭದಲ್ಲಿ ಎಲ್‌ಐಸಿ ಷೇರುಗಳು ಕುಸಿದಿದೆ. ಎಲ್‌ಐಸಿ ಷೇರುಗಳು ಶೇಕಡ 0.03ರಷ್ಟು ಕುಸಿದು, ರೂಪಾಯಿ 688.75ರಲ್ಲಿ ವಹಿವಾಟು ಆರಂಭ ಮಾಡಿದೆ. ಇನ್ನು ಶುಕ್ರವಾರ ವಹಿವಾಟಿನ ಅಂತ್ಯದಲ್ಲಿ ಎಲ್‌ಐಸಿ ಷೇರುಗಳು ಶೇಕಡ 0.20ರಷ್ಟು ಏರಿಕೆಯಾಗಿ ರೂಪಾಯಿ 688.95ಕ್ಕೆ ವಹಿವಾಟು ಅಂತ್ಯ ಮಾಡಿದೆ.

 ಏರಿಕೆಯಾಗಿದ್ದ ಷೇರು ಕುಸಿತ

ಏರಿಕೆಯಾಗಿದ್ದ ಷೇರು ಕುಸಿತ

ಶುಕ್ರವಾರದ ವಹಿವಾಟಿನ ಅಂತ್ಯದಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಟಾಪ್ ನಿಫ್ಟಿ ಗೇನರ್ ಆಗಿದೆ. ಆದರೆ ಸೋಮವಾರ ವಹಿವಾಟಿನ ಆರಂಭದಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಷೇರು ಕುಸಿತವನ್ನು ಕಂಡಿದೆ. ಶುಕ್ರವಾರ ಅಲ್ಟ್ರಾಟೆಕ್ ಸಿಮೆಂಟ್ ಷೇರು ಶೇಕಡ 4.90ರಷ್ಟು ಏರಿಕೆಯಾಗಿ, ರೂಪಾಯಿ 6,431.20ಕ್ಕೆ ತಲುಪಿದೆ. ಜೂನ್‌ನಲ್ಲಿ ಅಂತ್ಯವಾದ ತ್ರೈಮಾಸಿಕದಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ನಿವ್ವಳ ಮಾರಾಟ ಸುಮಾರು ಶೇಕಡ 28ರಷ್ಟು ಏರಿಕೆಯಾಗಿದೆ. ಈ ವರದಿಯ ಬೆನ್ನಲ್ಲೇ ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಏರಿಕೆ ಕಂಡಿದೆ. ಆದರೆ ಸೋಮವಾರ ಆರಂಭಿಕ ವಹಿವಾಟಿನಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಷೇರುಗಳು ಶೇಕಡ 1.24ರಷ್ಟು ಕುಸಿತವಾಗಿ ರೂಪಾಯಿ 6,378.35ಕ್ಕೆ ತಲುಪಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+