ಸೋಮವಾರ ಕುಸಿದಿದ್ದ ಷೇರು ಮಾರುಕಟ್ಟೆಯು ಮಂಗಳವಾರ ಯಾವುದೇ ಚೇತರಿಕೆ ಕಂಡಿಲ್ಲ. ಇಂದು (ಆಗಸ್ಟ್ 23) ವಹಿವಾಟಿನ ಆರಂಭದಲ್ಲೇ ಷೇರು ಮಾರುಕಟ್ಟೆ ಇಳಿಕೆಯಾಗಿದೆ. ನಿಫ್ಟಿ 17400ಕ್ಕಿಂತ ಕೆಳಕ್ಕೆ ಕುಸಿದಿದೆ.
ಸೋಮವಾರ ವಹಿವಾಟಿನ ಅಂತ್ಯದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 872.28 ಅಂಕ ಅಥವಾ ಶೇಕಡ 1.46ರಷ್ಟು ಕುಸಿದು 58773.87ಕ್ಕೆ ತಲುಪಿದೆ. ನಿಫ್ಟಿ 267.80 ಅಂಕ ಅಥವಾ ಶೇಕಡ 1.51ರಷ್ಟು ಇಳಿಕೆ ಕಂಡು 17490.70ಕ್ಕೆ ವಹಿವಾಟು ಆರಂಭ ಮಾಡಿದೆ. 1228 ಷೇರುಗಳು ಏರಿಕೆಯನ್ನು ಕಂಡಿದ್ದರೆ, 2214 ಷೇರುಗಳು ಕುಸಿತವಾಗಿದೆ. 163 ಷೇರುಗಳು ಸ್ಥಿರವಾಗಿತ್ತು.
ಮಂಗಳವಾರ ವಹಿವಾಟಿನ ಆರಂಭದಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 361.86 ಅಂಕ ಅಥವಾ ಶೇಕಡ 0.62ರಷ್ಟು ಕುಸಿದು 58412.01ಕ್ಕೆ ತಲುಪಿದೆ. ನಿಫ್ಟಿ 114.70 ಅಂಕ ಅಥವಾ ಶೇಕಡ 0.66ರಷ್ಟು ಇಳಿಕೆ ಕಂಡು 17376ಕ್ಕೆ ವಹಿವಾಟು ಆರಂಭ ಮಾಡಿದೆ. 727 ಷೇರುಗಳು ಏರಿಕೆಯನ್ನು ಕಂಡಿದ್ದರೆ, 1176 ಷೇರುಗಳು ಕುಸಿತವಾಗಿದೆ. 104 ಷೇರುಗಳು ಸ್ಥಿರವಾಗಿದೆ.
ಯಾವ ಷೇರು ಟಾಪ್ ಲೂಸರ್?
ಟೆಕ್ ಮಹೀಂದ್ರಾ ಸ್ಟಾಕ್ ಭಾರೀ ಕುಸಿತ ಕಂಡ ಷೇರು ಆಗಿದೆ. ಸ್ಟಾಕ್ ಶೇಕಡ 1.55ರಷ್ಟು ಕುಸಿದು, ರೂಪಾಯಿ 1,062.00ಕ್ಕೆ ತಲುಪಿದೆ. ಸೋಮವಾರ ವಹಿವಾಟಿನ ಅಂತ್ಯದಲ್ಲಿ ಟಾಟಾ ಸ್ಟೀಲ್ಸ್ ಸ್ಟಾಕ್ ಟಾಪ್ ಲೂಸರ್ ಆಗಿತ್ತು. ಇನ್ನು ಬಜಾಜ್ ಫಿನ್‌ಸರ್ವ್ ಸ್ಟಾಕ್ ಟಾಪ್ ಸ್ಟಾಕ್ ಆಗಿದೆ. ಸ್ಟಾಕ್ ಶೇಕಡ 4.01ರಷ್ಟು ಏರಿಕೆಯಾಗಿ, ರೂಪಾಯಿ 16,508.45ಕ್ಕೆ ತಲುಪಿದೆ. ಸೋಮವಾರ ವಹಿವಾಟಿನ ಕೊನೆಯಲ್ಲಿ ಟಾಟಾ ಕನ್ಸ್ಯೂಮರ್ ಪ್ರೊಡೆಕ್ಟ್ಸ್ ಟಾಪ್ ಗೇನರ್ ಆಗಿತ್ತು.
ಯಾವೆಲ್ಲಾ ಷೇರುಗಳು ಕುಸಿತ, ಏರಿಕೆ?
ನಿಫ್ಟಿಯಲ್ಲಿ ಬಜಾಜ್ ಫಿನ್‌ಸರ್ವ್, ಈಚರ್ ಮೋಟರ್ಸ್, ಟಾಟಾ ಸ್ಟೀಲ್ಸ್, ಎಂ&ಎಂ, ಹಿಂಡಾಲ್ಕೊ ಸ್ಟಾಕ್ ಏರಿಕೆಯನ್ನು ಕಂಡಿದೆ. ಈ ನಡುವೆ ಟಿಸಿಎಸ್, ವಿಪ್ರೋ, ಎಚ್‌ಸಿಎಲ್ ಟೆಕ್, ಇನ್ಫೋಸಿಸ್, ಟೆಕ್ ಮಹೀಂದ್ರಾ ಸ್ಟಾಕ್ ಇಳಿಕೆಯನ್ನು ಕಂಡಿದೆ. ಇನ್ನು ಸೆನ್ಸೆಕ್ಸ್‌ನಲ್ಲಿ ಬಜಾಜ್ ಫಿನ್‌ಸರ್ವ್, ಟಾಟಾ ಸ್ಟೀಲ್ಸ್, ಎಂ&ಎಂ, ಬಜಾಜ್ ಫೈನಾನ್ಸ್, ಸನ್ ಫಾರ್ಮಾ ಸ್ಟಾಕ್ ಏರಿಕೆಯಾಗಿದೆ. ಟಿಸಿಎಸ್, ವಿಪ್ರೋ, ಇನ್ಫೋಸಿಸ್, ಎಚ್‌ಸಿಎಲ್ ಟೆಕ್, ಟೆಕ್ ಮಹೀಂದ್ರಾ ಸ್ಟಾ ಇಳಿಕೆಯಾಗಿದೆ.
ಹತ್ತು ಗಂಟೆಯ ಅಪ್‌ಡೇಟ್
ಇನ್ನು 10 ಗಂಟೆ ಸುಮಾರಿಗೆ ಸೆನ್ಸೆಕ್ಸ್, ನಿಫ್ಟಿ ಏರಿಕೆಯಾಗಿದೆ. 30 ಷೇರುಗಳ ಬಿಎಸ್‌ಇ ಸೂಚ್ಯಂಕ 247.88 ಅಂಕ ಅಥವಾ ಶೇಕಡ 0.42ರಷ್ಟು ಏರಿ 59021.75ಕ್ಕೆ ತಲುಪಿದೆ. ನಿಫ್ಟಿ 86 ಅಂಕ ಅಥವಾ ಶೇಕಡ 0.49ರಷ್ಟು ಏರಿಕೆಯಾಗಿ 17576.70ಕ್ಕೆ ತಲುಪಿದೆ. 2021 ಷೇರುಗಳು ಏರಿಕೆಯನ್ನು ಕಂಡಿದ್ದರೆ, 830 ಷೇರುಗಳು ಕುಸಿತವಾಗಿದೆ. 121 ಷೇರುಗಳು ಸ್ಥಿರವಾಗಿದೆ.


Click it and Unblock the Notifications