ಷೇರು ಪೇಟೆಯಲ್ಲಿ ನಷ್ಟವು ಮುಂದುವರಿದಿದೆ. ಗುರುವಾರ ವಹಿವಾಟಿನ ಅಂತ್ಯದಲ್ಲಿ ನಷ್ಟವನ್ನು ಕಂಡಿದ್ದ ಷೇರು ಮಾರುಕಟ್ಟೆ, ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ ನಷ್ಟದೊಂದಿಗೆ ವ್ಯವಹಾರ ಆರಂಭಿಸಿದೆ.
ಸೆನ್ಸೆಕ್ಸ್ 318 ಅಂಕ ಅಥವಾ ಶೇಕಡ 0.62 ಕುಸಿತ ಕಂಡು 51177.30ಕ್ಕೆ ತಲುಪಿದೆ. ಈ ಸಂದರ್ಭದಲ್ಲೇ ನಿಪ್ಟಿ 100 ಅಂಕ ಅಥವಾ ಶೇಕಡ 0.65 ಕುಸಿದು 15,260ರಂತೆ ವಹಿವಾಟು ನಡೆಸುತ್ತಿದೆ. ಒಟ್ಟಾರೆಯಾಗಿ ಷೇರು ಮಾರುಕಟ್ಟೆಯು ನಿರಂತರವಾಗಿ ಭಾರೀ ಕುಸಿದಿದೆ.
ಮುಖ್ಯವಾಗಿ ಫಾರ್ಮಾ ಷೇರುಗಳು ಭಾರೀ ಇಳಿಕೆ ಕಂಡಿದೆ. ಇನ್ನು ಹೂಡಿಕೆ ವಿಚಾರದಲ್ಲಿ ತಜ್ಞರು ಆಗಿರುವವರು ನೆಸ್ಟ್ಲೆ ಹಾಗೂ ಕೆನರಾ ಬ್ಯಾಂಕ್ ಷೇರುಗಳನ್ನು ಖರೀದಿ ಮಾಡಿ ಎಂದು ಸಲಹೆ ನೀಡಿದ್ದಾರೆ. ಇಂಡಸ್‌ಇಂಡಸ್, ಕೆನರಾ ಬ್ಯಾಂಕ್, ನೆಸ್ಟ್ಲೆ ಭಾರೀ ನಷ್ಟವನ್ನು ಕಂಡಿದೆ.

ಇನ್ನು ಕಳೆದ ಎರಡು ದಿನಗಳಿಂದ ನಷ್ಟದೊಂದಿಗೆ ಸಾಗಿದ್ದ ರಿಲಯನ್ಸ್ ಶುಕ್ರವಾರ ಕೊಂಚ ಏರಿಕೆ ಕಂಡಿದೆ. ಆದರೆ ಈ ನಡುವೆ ಟಿಸಿಎಸ್, ಇನ್ಫೋಸಿಸ್, ಏಷ್ಯನ್ ಪೇಂಟ್ಸ್ ನಷ್ವದಲ್ಲಿದೆ. ಹಿಂದೂಸ್ತಾನ್ ಯೂನಿಲಿವರ್, ಎಚ್‌ಡಿಎಫ್‌ಸಿ ಕೂಡಾ ನಷ್ಟವನ್ನು ಕಂಡಿದೆ.
ಬಿಎಸ್‌ಇ ಸೆನ್ಸೆಕ್ಸ್ 1045.60 ಅಂಕ ಅಥವಾ ಶೇಕಡ 1.99ರಷ್ಟು ಕೆಳಕ್ಕೆ ಕುಸಿದು, 51,495.79ಕ್ಕೆ ತಲುಪಿದೆ. ಇನ್ನು ಈ ಸಂದರ್ಭದಲ್ಲೇ ನಿಫ್ಟಿ 331.55 ಅಂಕ ಅಥವಾ ಶೇಕಡ 2.11ರಷ್ಟು ಕುಸಿದು 15,360.60ಕ್ಕೆ ತಲುಪಿದೆ. ಈ ವರ್ಷದಲ್ಲಿ ಮೊದಲ ಬಾರಿಗೆ ಷೇರು ಮಾರುಕಟ್ಟೆಯು ಇಷ್ಟೊಂದು ಕೆಳಕ್ಕೆ ಕುಸಿದು ವಹಿವಾಟು ಅಂತ್ಯ ಮಾಡಿದೆ.


Click it and Unblock the Notifications