ಮಾಹಿತಿ ತಂತ್ರಜ್ಞಾನ ಮತ್ತು ಕನ್ಸ್ಯೂಮರ್ ಡ್ಯೂರೆಬಲ್ ವಸ್ತುಗಳ ಷೇರುಗಳು ಭಾರೀ ಕುಸಿತವನ್ನು ಕಂಡ ಬಳಿಕ ಮಂಗಳವಾರ ಷೇರುಪೇಟೆಯಲ್ಲಿ ಆರಂಭಿಕ ವ್ಯವಹಾರವು ನಷ್ಟದೊಂದಿಗೆ ಆರಂಭವಾಗಿದೆ. ಟೈಟಾನ್, ಎಚ್‌ಯುಎಲ್, ಬಜಾಜ್ ಫಿನ್‌ಸರ್ವ್ ಮೊದಲಾದವು ನಷ್ಟವನ್ನು ಕಂಡಿದೆ.
30-ಷೇರು ಬಿಎಸ್‌ಇ ಸೆನ್ಸೆಕ್ಸ್ 521 ಪಾಯಿಂಟ್‌ಗಳು ಅಥವಾ ಶೇಕಡಾ 0.94 ರಷ್ಟು ಕುಸಿದು 55,154 ಕ್ಕೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 127 ಪಾಯಿಂಟ್ ಅಥವಾ 0.77 ರಷ್ಟು ಕುಸಿದು 16,442 ಕ್ಕೆ ವಹಿವಾಟು ಆರಂಭ ಮಾಡಿದೆ. ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 0.63 ಮತ್ತು ಸ್ಮಾಲ್ ಕ್ಯಾಪ್ ಶೆಡ್ 0.62 ರಷ್ಟು ಕುಸಿದಿದೆ.
ಜೂನ್ 8 ರಂದು ನಡೆಯಲಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನ ಹಣಕಾಸು ನೀತಿ ಸಮಿತಿ ಸಭೆಯ ಮೇಲೆ ಎಲ್ಲಾ ಹೂಡಿಕೆದಾರರ ಚಿತ್ತ ನೆಟ್ಟಿದೆ. ಈ ಸಭೆಯ ಬಳಿಕ ಆರ್‌ಬಿಐ ರೆಪೋ ದರವನ್ನು ಏರಿಕೆ ಮಾಡುವ ಸುಳಿವು ಈಗಾಗಲೇ ನೀಡಿದೆ.

15 ಸೆಕ್ಟರ್ ಗೇಜ್‌ಗಳು ಕೂಡಾ ನಷ್ಟದಲ್ಲಿದೆ. ಈ ನಡುವೆ ನಿಫ್ಟಿ ಐಟಿ ಮತ್ತು ನಿಫ್ಟಿ ಕನ್ಸ್ಯೂಮರ್ ಡ್ಯೂರಬಲ್ಸ್ ಎನ್‌ಎಸ್‌ಇ ಪ್ಲಾಟ್‌ಫಾರ್ಮ್‌ನಲ್ಲಿ ಶೇಕಡಾ 1.09 ಮತ್ತು ಶೇಕಡಾ 1.12 ರಷ್ಟು ಕುಸಿದಿದೆ.
ಯಾವ ಸ್ಟಾಕ್‌ಗೆ ಭಾರೀ ನಷ್ಟ?
ಟೈಟಾನ್ ಟಾಪ್ ನಿಫ್ಟಿ ಲೂಸರ್ ಆಗಿದ್ದು, ಸ್ಟಾಕ್ 4.21 ಶೇಕಡಾ ಕುಸಿದು ರೂಪಾಯಿ 2,106.05 ಕ್ಕೆ ತಲುಪಿದೆ. ಏಷ್ಯನ್ ಪೇಂಟ್ಸ್, ಹಿಂದೂಸ್ತಾನ್ ಯೂನಿಲಿವರ್, ಡಾ ರೆಡ್ಡೀಸ್ ಮತ್ತು ಎಸ್‌ಬಿಐ ಲೈಫ್ ಕೂಡ ಭಾರೀ ನಷ್ಟವನ್ನು ಅನುಭವಿಸಿದೆ. ಬಿಎಸ್‌ಇಯಲ್ಲಿ 1,192 ಷೇರುಗಳು ಲಾಭವನ್ನು ಗಳಿಸಿದರೆ, 1,254 ಷೇರುಗಳು ಕುಸಿತವನ್ನು ಕಂಡಿದೆ.
ಟೈಟಾನ್, ಎಚ್‌ಯುಎಲ್, ಏಷ್ಯನ್ ಪೇಂಟ್ಸ್, ಡಾ ರೆಡ್ಡೀಸ್, ಸನ್ ಫಾರ್ಮಾ, ಮಾರುತಿ, ನೆಸ್ಲೆ ಇಂಡಿಯಾ, ಕೋಟಕ್ ಮಹೀಂದ್ರಾ ಬ್ಯಾಂಕ್, ಬಜಾಜ್ ಫಿನ್‌ಸರ್ವ್, ಎಂ & ಎಂ, ಬಜಾಜ್ ಫೈನಾನ್ಸ್ ಮತ್ತು ಟಿಸಿಎಸ್ ಹೆಚ್ಚು ನಷ್ಟವನ್ನು ಕಂಡ ಷೇರುಗಳು ಆಗಿದೆ. ಎನ್‌ಟಿಪಿಸಿ, ಪವರ್‌ಗ್ರಿಡ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಾಭದೊಂದಿಗೆ ವಹಿವಾಟು ಆರಂಭಿಸಿದೆ.
ಸೋಮವಾರ ಸೆನ್ಸೆಕ್ಸ್ 94 ಪಾಯಿಂಟ್ ಅಥವಾ ಶೇಕಡಾ 0.17 ರಷ್ಟು ಕುಸಿದು 55,675 ಕ್ಕೆ ತಲುಪಿದ್ದರೆ, ನಿಫ್ಟಿ 15 ಪಾಯಿಂಟ್ ಅಥವಾ 0.09 ಶೇಕಡಾ ಕುಸಿದು 16,570 ಕ್ಕೆ ವಹಿವಾಟು ಅಂತ್ಯ ಮಾಡಿದೆ.


Click it and Unblock the Notifications