For Quick Alerts
ALLOW NOTIFICATIONS  
For Daily Alerts

ಷೇರು ಮಾರುಕಟ್ಟೆ ಮತ್ತೆ ಕುಸಿತ: ಹಿಂದೂಸ್ತಾನ್ ಯೂನಿಲಿವರ್ ಸ್ಟಾಕ್ ಭಾರೀ ಇಳಿಕೆ

|

ಬುಧವಾರ ಆರಂಭಿಕ ವಹಿವಾಟಿನಲ್ಲಿ ಷೇರು ಮಾರುಕಟ್ಟೆ ಕೆಳಕ್ಕೆ ಕುಸಿತ ಕಂಡಿದೆ. ಯುಎಸ್ ವಾಲ್‌ಸ್ಟ್ರೀಸ್‌ನಲ್ಲಿನ ಬೆಳವಣೆಗೆಯನ್ನು ಗಮನಿಸಿ ಏಷ್ಯನ್ ಮಾರುಕಟ್ಟೆ ಕುಸಿತ ಕಂಡಿದೆ. ಮಂಗಳವಾರವೂ ಆರಂಭಿಕ ವಹಿವಾಟಿನಲ್ಲಿ ಷೇರು ಪೇಟೆ ಕುಸಿತ ಕಂಡಿದೆ. ಆದರೆ ವಹಿವಾಟಿನ ಕೊನೆಯಲ್ಲಿ ಲಾಭವನ್ನು ಕಂಡಿದೆ.

30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 531 ಅಂಕಗಳು ಅಥವಾ ಶೇಕಡಾ 1 ರಷ್ಟು ಕುಸಿದು 52,646 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 152 ಪಾಯಿಂಟ್ ಅಥವಾ 0.96 ರಷ್ಟು ಕುಸಿದು 15,698 ಕ್ಕೆ ವಹಿವಾಟು ನಡೆಸಿದೆ.

ಷೇರು ಮಾರುಕಟ್ಟೆ ಚೇತರಿಕೆ: ಒಎನ್‌ಜಿಸಿ ಟಾಪ್ ಗೇನರ್ಷೇರು ಮಾರುಕಟ್ಟೆ ಚೇತರಿಕೆ: ಒಎನ್‌ಜಿಸಿ ಟಾಪ್ ಗೇನರ್

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 0.92 ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 1.14 ರಷ್ಟು ಕುಸಿತ ಕಂಡಿದೆ. ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಎಫ್‌ಎಂಸಿಜಿ ಕ್ರಮವಾಗಿ ಶೇಕಡಾ 1.26 ಮತ್ತು 1.25 ರಷ್ಟು ಕುಸಿತ ಕಂಡಿದೆ.

 ಹಿಂದೂಸ್ತಾನ್ ಯೂನಿಲಿವರ್ ಟಾಪ್ ಲೂಸರ್

ಹಿಂದೂಸ್ತಾನ್ ಯೂನಿಲಿವರ್ ಟಾಪ್ ಲೂಸರ್

ಹಿಂದೂಸ್ತಾನ್ ಯೂನಿಲಿವರ್ ಟಾಪ್ ನಿಫ್ಟಿ ಲೂಸರ್ ಆಗಿದ್ದು, ಸ್ಟಾಕ್ 2.40 ಶೇಕಡಾ ಕುಸಿದು ರೂಪಾಯಿ 2,261.95 ಕ್ಕೆ ತಲುಪಿದೆ. ಇಂಡಸ್‌ಇಂಡ್ ಬ್ಯಾಂಕ್, ಹಿಂಡಾಲ್ಕೊ, ಬಜಾಜ್ ಫಿಸರ್ವ್ ಮತ್ತು ವಿಪ್ರೋ ಕೂಡ ನಷ್ಟವನ್ನು ಅನುಭವಿಸಿದೆ.

 ಯಾವೆಲ್ಲಾ ಷೇರುಗಳಿಗೆ ನಷ್ಟ?

ಯಾವೆಲ್ಲಾ ಷೇರುಗಳಿಗೆ ನಷ್ಟ?

ಬಿಎಸ್‌ಇಯಲ್ಲಿ 659 ಷೇರುಗಳು ಲಾಭವನ್ನು ಕಂಡಿದ್ದರೆ, 1,442 ಷೇರುಗಳು ನಷ್ಟವನ್ನು ಕಂಡಿದೆ. 30-ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ, ಇಂಡಸ್‌ಇಂಡ್ ಬ್ಯಾಂಕ್, ಎಚ್‌ಯುಎಲ್, ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ವಿಪ್ರೋ, ಕೋಟಕ್ ಮಹೀಂದ್ರಾ ಬ್ಯಾಂಕ್, ಟೈಟಾನ್, ಏಷ್ಯನ್ ಪೇಂಟ್ಸ್, ಟೆಕ್ ಮಹೀಂದ್ರಾ, ಎಲ್ & ಟಿ, ಇನ್ಫೋಸಿಸ್ ಮತ್ತು ಎಚ್‌ಸಿಎಲ್ ಟೆಕ್ ಭಾರೀ ನಷ್ಟವನ್ನು ಕಂಡಿದೆ.

 ಎಲ್‌ಐಸಿ ಷೇರು ಕುಸಿತ

ಎಲ್‌ಐಸಿ ಷೇರು ಕುಸಿತ

ದೇಶದ ಅತಿದೊಡ್ಡ ವಿಮಾ ಸಂಸ್ಥೆ ಮತ್ತು ಅತಿದೊಡ್ಡ ದೇಶೀಯ ಹಣಕಾಸು ಹೂಡಿಕೆದಾರರಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಶೇ 0.67 ರಷ್ಟು ಕುಸಿದು ರೂಪಾಯಿ 658.90ಕ್ಕೆ ವಹಿವಾಟಾಗಿವೆ. ಮಂಗಳವಾರ ಸೆನ್ಸೆಕ್ಸ್ 16 ಪಾಯಿಂಟ್ ಅಥವಾ ಶೇಕಡಾ 0.03 ರಷ್ಟು ಏರಿಕೆ ಕಂಡು 53,177 ಕ್ಕೆ ತಲುಪಿದ್ದರೆ, ನಿಫ್ಟಿ 18 ಪಾಯಿಂಟ್ ಅಥವಾ 0.11 ರಷ್ಟು ಏರಿಕೆ ಕಂಡು 15,850 ಕ್ಕೆ ಸ್ಥಿರವಾಯಿತು.

English summary

Opening Bell: Sensex Crashes 500 Points, Nifty Trades Below 15,700

Opening Bell: Sensex Crashes 500 Points, Nifty Trades Below 15,700.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X