ನಿಫ್ಟಿ, ಸೆನ್ಸೆಕ್ಸ್ ಮತ್ತೆ ಕುಸಿತ: ಯಾವೆಲ್ಲಾ ಷೇರುಗಳು ಇಳಿಕೆ?

ಗುರುವಾರ ಆರಂಭಿಕ ವಹಿವಾಟಿನಲ್ಲಿ ಹಾಗೂ ವಹಿವಾಟಿನ ಅಂತ್ಯದಲ್ಲಿ ಲಾಭ ಕಂಡಿದ್ದ ಷೇರು ಮಾರುಕಟ್ಟೆಯು ಶುಕ್ರವಾರ ವಹಿವಾಟಿನ ಆರಂಭದಲ್ಲಿ ಕುಸಿತ ಕಂಡಿತ್ತು. ಬುಧವಾರ ಷೇರು ಮಾರುಕಟ್ಟೆಯು ಮಿಶ್ರ ಪ್ರತಿಕ್ರಿಯೆಯನ್ನು ಪಡೆದಿತ್ತು. ಗುರುವಾರ ಏರಿದ್ದು, ಶುಕ್ರವಾರ ಇಳಿದಿದೆ.

ಗುರುವಾರ ವಹಿವಾಟಿನ ಅಂತ್ಯದ ವೇಳೆಗೆ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 515.31 ಅಂಕ ಅಥವಾ ಶೇಕಡ 0.88ರಷ್ಟು ಏರಿಕೆಯಾಗಿ 59,332.60ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿ 124.20 ಅಂಕ ಅಥವಾ ಶೇಕಡ 0.71ರಷ್ಟು ಏರಿ 17,659.00ಕ್ಕೆ ಸ್ಥಿರವಾಗಿದೆ. 1772 ಷೇರುಗಳು ಏರಿಕೆಯಾದರೆ, 1530 ಷೇರುಗಳು ಕುಸಿದಿದೆ. 138 ಷೇರುಗಳು ಸ್ಥಿರವಾಗಿದೆ.

ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 68.30 ಅಂಕ ಅಥವಾ ಶೇಕಡ 0.12ರಷ್ಟು ಇಳಿಕೆಯಾಗಿ 59264.30ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿ 19.20 ಅಂಕ ಅಥವಾ ಶೇಕಡ 0.11ರಷ್ಟು ಏರಿ 17639.80ಕ್ಕೆ ಸ್ಥಿರವಾಗಿದೆ. 1080ಷೇರುಗಳು ಏರಿಕೆಯಾದರೆ, 645 ಷೇರುಗಳು ಕುಸಿದಿದೆ. 113 ಷೇರುಗಳು ಸ್ಥಿರವಾಗಿದೆ. ಹಾಗಾದರೆ ಶುಕ್ರವಾರ ಯಾವೆಲ್ಲಾ ಷೇರುಗಳು ಕುಸಿತ ಕಂಡಿದೆ, ಯಾವ ಷೇರು ಟಾಪ್ ಗೇನರ್ ಎಂದು ತಿಳಿಯೋಣ ಮುಂದೆ ಓದಿ...

 ಟಾಪ್ ಗೇನರ್, ಟಾಪ್ ಲೂಸರ್ ಸ್ಟಾಕ್

ಟಾಪ್ ಗೇನರ್, ಟಾಪ್ ಲೂಸರ್ ಸ್ಟಾಕ್

ಒಎನ್‌ಜಿಸಿ ಷೇರು ಟಾಪ್ ಗೇನರ್ ಆಗಿದೆ. ಒಎನ್‌ಜಿಸಿ ಸ್ಟಾಕ್ ಷೇರು ಶೇಕಡ 3.80ರಷ್ಟು ಏರಿಕೆಯಾಗಿ ರೂಪಾಯಿ 137.85ಕ್ಕೆ ತಲುಪಿದೆ. ಇನ್ನು ಅಪೋಲೋ ಹಾಸ್ಪಿಟಲ್ ಸ್ಟಾಕ್ ಟಾಪ್ ಲೂಸರ್ ಆಗಿದೆ. ಷೇರು ಶೇಕಡ 2.64ರಷ್ಟು ಕುಸಿದು ರೂಪಾಯಿ 3,843.80ಕ್ಕೆ ವಹಿವಾಟು ಆರಂಭ ಮಾಡಿದೆ. ಇನ್ನು ನಿಫ್ಟಿ ಎನರ್ಜಿ ಬೆಸ್ಟ್ ಸೆಕ್ಟರ್ ಆಗಿದ್ದರೆ, ನಿಫ್ಟಿ ಫಾರ್ಮಾ ಭಾರೀ ಕುಸಿತ ಕಂಡಿದೆ. ಈ ನಡುವೆ ಇಂದು ದೇಶದ ಪ್ರಮುಖ ವಿಮಾ ಸಂಸ್ಥೆಯಾದ ಎಲ್‌ಐಸಿ ಷೇರು ಏರಿಕೆಯಾಗಿದೆ. ಸ್ಟಾಕ್ ಶೇಕಡ ಶೇಕಡ 0.37 ಅಥವಾ 2.50 ಅಂಕ ಏರಿಕೆಯಾಗಿ ರೂಪಾಯಿ 685.15ಕ್ಕೆ ತಲುಪಿದೆ.

 ಯಾವೆಲ್ಲಾ ಷೇರುಗಳು ಏರಿಕೆ, ಇಳಿಕೆ?

ಯಾವೆಲ್ಲಾ ಷೇರುಗಳು ಏರಿಕೆ, ಇಳಿಕೆ?

ಟಾಟಾ ಸ್ಟೀಲ್ಸ್, ಪವರ್ ಗ್ರಿಡ್, ಎಸ್‌ಬಿಐ ಇನ್ಶೂರೆನ್ಸ್, ಇಂಡಸ್‌ಇಂಡ್ ಬ್ಯಾಂಕ್, ಎನ್‌ಟಿಪಿಸಿ, ಐಸಿಐಸಿಐ ಬ್ಯಾಂಕ್, ಟೈಟಾನ್, ಪ್ರೆಸ್ಟಿಜ್, ಸನ್ ಟೆಕ್, ಶೋಭಾ, ಒಎನ್‌ಜಿಸಿ ಸ್ಟಾಕ್ ವಹಿವಾಟಿನ ಆರಂಭದಲ್ಲಿ ಏರಿಕೆಯಾದ ಸ್ಟಾಕ್‌ಗಳು ಆಗಿದೆ. ಇನ್ನು ಹಿಂದೂಸ್ತಾನ್ ಯೂನಿಲಿವರ್, ರಿಲಯನ್ಸ್, ಎಲ್‌ಟಿ, ಡಾ ರೆಡ್ಡೀಸ್, ಬಜಾಜ್ ಫಿನ್‌ಸರ್ವ್, ಭಾರ್ತಿ ಏರ್‌ಟೆಲ್, ಬಜಾಜ್ ಫೈನಾನ್ಸ್, ಏಷ್ಯನ್ ಪೇಂಟ್ಸ್, ಎಂ&ಎಂ, ಐಟಿಸಿ, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ, ಎಚ್‌ಸಿಎಲ್ ಟೆಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಕೋಟಕ್ ಬ್ಯಾಂಕ್, ವಿಪ್ರೋ, ಸನ್ ಫಾರ್ಮಾ, ಟಿಸಿಎಸ್, ಅಲ್ಟ್ರಾಟೆಕ್ ಸಿಮೆಂಟ್, ಇನ್ಫೋಸಿಸ್, ಮಾರುತಿ, ನೆಸ್ಲೆ ಇಂಡಿಯಾ, ಟೆಕ್ ಎಂ ಷೇರುಗಳು ಕುಸಿತವನ್ನು ಕಂಡಿದೆ.

 ಇಂದಿನ ಪ್ರಮುಖ ಷೇರಗಳು ಯಾವುದು?

ಇಂದಿನ ಪ್ರಮುಖ ಷೇರಗಳು ಯಾವುದು?

ಒಎನ್‌ಜಿಸಿ, ಭಾರತೀಯ ಜೀವ ವಿಮಾ ನಿಗಮ, ಹೀರೋ ಮೋಟೋಕಾರ್ಪ್, ಗ್ರಾಸಿಮ್ ಇಂಡಸ್ಟ್ರೀಸ್, ಡಿವಿಸ್ ಲ್ಯಾಬ್ಸ್, ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್, ಏಜಿಸ್ ಲಾಜಿಸ್ಟಿಕ್ಸ್, ಅಹ್ಲುವಾಲಿಯಾ ಕಾಂಟ್ರಾಕ್ಟ್ಸ್, ಅಪೋಲೋ ಟೈರ್ಸ್, ಆಸ್ಟ್ರಲ್, ಬಜಾಜ್ ಇಲೆಕ್ಟ್ರಿಕಲ್ಸ್, ಬಜಾಜ್ ಹೆಲ್ತ್‌ಕೇರ್, ಬಜಾಜ್ ಹಿಂದೂಸ್ಥಾನ್ ಶುಗರ್, ಬಾಲಾಜಿ ಅಮೈನ್ಸ್, ಭಾರತ್ ಡೈನಾಮಿಕ್ಸ್, ಕ್ಯಾಂಪಸ್ ಆಕ್ಟಿವ್‌ವೇರ್, ದಿಲೀಪ್ ಬಿಲ್ಡ್‌ಕಾನ್, ಧನಿ ಸರ್ವೀಸಸ್, ಫಿನೋಲೆಕ್ಸ್ ಕೇಬಲ್ಸ್, ಗೋದ್ರೇಜ್ ಇಂಡಸ್ಟ್ರೀಸ್, ಹಿಂದೂಸ್ತಾನ್ ಏರೋನಾಟಿಕ್ಸ್, ಇಂಡಿಯಾಬುಲ್ಸ್ ರಿಯಲ್ ಎಸ್ಟೇಟ್, ಇಂಡಿಯಾ ಸಿಮೆಂಟ್ಸ್, ಕೋಲ್ಟೆ-ಪಾಟೀಲ್ ಡೆವಲಪರ್ಸ್, ಮುತ್ತೂಟ್ ಫೈನಾನ್ಸ್, ಇನ್ಫೋ ಎಡ್ಜ್ ಇಂಡಿಯಾ, ಪವರ್ ಫೈನಾನ್ಸ್ ಕಾರ್ಪೊರೇಷನ್, ಎಸ್‌ಜೆವಿಎನ್, ಸನ್ ಟಿವಿ ನೆಟ್‌ವರ್ಕ್, ಸುಪ್ರಿಯಾ ಲೈಫ್‌ಸೈನ್ಸ್, ಟಿಮ್ಕೆನ್ ಇಂಡಿಯಾ, ವರ್ರೋಕ್ ಇಂಜಿನಿಯರಿಂಗ್, ವೋಲ್ಟಾಂಪ್ ಟ್ರಾನ್ಸ್ಫಾರ್ಮರ್ಸ್, ವೊಕಾರ್ಡ್ಟ್ ಸಂಸ್ಥೆಯ ಜೂನ್ ತ್ರೈಮಾಸಿಕ ಗಳಿಕೆಯ ಮೇಲೆ ಇಂದು ಹೂಡಿಕೆದಾರರ ಚಿತ್ತವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+