ಬುಧವಾರ ಆರಂಭಿಕ ವಹಿವಾಟಿನಲ್ಲಿ ಷೇರು ಪೇಟೆಯು ಕುಸಿತ ಕಂಡಿದೆ. ಆದರೆ ಇಂದು ರಿಲಯನ್ಸ್, ಅದಾನಿ ಪವರ್ ಷೇರುಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ವೇಳೆಯೇ ಟಾಟಾ ಸ್ಟೀಲ್ಸ್, ಎಚ್‌ಡಿಎಫ್‌ಸಿ, ಎಚ್‌ಯುಎಲ್ ನಷ್ಟವನ್ನು ಕಂಡಿದೆ.
ಬಿಎಸ್‌ಇ ಸೆನ್ಸೆಕ್ಸ್ 78 ಅಂಕ ಕುಸಿತ ಕಂಡು, 52,615.04ರಲ್ಲಿ ವಹಿವಾಟು ಆರಂಭ ಮಾಡಿದರೆ, ನಿಫ್ಟಿ ಐದು ಅಂಕ ಕುಸಿದು 15,725ರಲ್ಲಿ ವಹಿವಾಟು ಆರಂಭಿಸಿದೆ. ಈ ವೇಳೆಯೇ ಹೂಡಿಕೆದಾರರ ಚಿತ್ತವು ಹಿಂಡ್‌ಮೋಟರ್ಸ್, ಟಾಟಾ ಸ್ಟೀಲ್ಸ್, ರಿಲಾಯನ್ಸ್, ಅದಾನಿ ಪವರ್, ಎಚ್‌ಸಿಎಲ್ ಟೆಕ್ನಾಲಜೀಸ್ ಮೇಲೆ ಇದೆ.
ಈ ಸಂದರ್ಭದಲ್ಲಿ ಟಾಟಾ ಮೋಟಾರ್ಸ್, ಬಜಾಜ್ ಫಿನಾನ್ಸ್, ಇಂಡಸ್‌ಇಂಡ್ ಬ್ಯಾಂಕ್, ಏಷ್ಯನ್ ಪೇಂಟ್ಸ್, ಬಜಾಜ್ ಆಟೋ ಕೂಡಾ ಲಾಭವನ್ನು ಕಂಡಿದೆ. ಆದರೆ ಟಾಟಾ ಸ್ಟೀಲ್ಸ್, ಎಚ್‌ಯುಎಲ್, ಎಚ್‌ಡಿಎಫ್‌ಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಬ್ರಿಟಾನಿಯಾ ಭಾರೀ ನಷ್ಟವನ್ನು ಕಂಡಿದೆ.

ಎಫ್‌ಒಎಂಸಿ ಮೇಲೆ ಹೂಡಿಕೆದಾರರ ಗಮನ
ಜೂನ್ ತಿಂಗಳಿನ ಫೆಡರಲ್ ಓಪನ್ ಕಮೀಟಿ ಸಭೆ ನಡೆಯಲಿದ್ದು ಹೂಡಿಕೆದಾರರ ಗಮನ ಈ ಸಭೆಯ ಮೇಲೆ ಇದೆ. ಈ ಸಭೆಯ ಬಳಿಕ ಹಣಕಾಸು ಬದಲಾವಣೆ ಆಗುವ ಸಾಧ್ಯತೆ ಹಿನ್ನೆಲೆ ಪ್ರಸ್ತುತ ಹೂಡಿಕೆದಾರರು ಈ ಸಭೆಯ ಬಗ್ಗೆ ಹೆಚ್ಚು ಆಸಕ್ತಿ ವಹಿಸಿದ್ದಾರೆ.
ಟಾಟಾ ಕೆಮಿಕಲ್ ಲಿಮಿಟೆಡ್, ಕೆನರಾ ಬ್ಯಾಂಕ್, ಕಾಜರಿಯಾ ಸೆರಮಿಕ್ಸ್, ಫ್ಯೂಚರ್ ಕನ್ಸೂಮರ್ ಲಿಮಿಟೆಡ್ ಕುಸಿತವನ್ನು ಕಂಡರೆ ಇದೇ ಸಂದರ್ಭದಲ್ಲಿ ಎಂಆರ್‌ಪಿಎಲ್, ಆರ್‌ಬಿಎಲ್, ಯೆಸ್ ಬ್ಯಾಂಕ್ ಷೇರುಗಳು ಏರಿಕೆ ಕಂಡಿದೆ.
ಡಾಲರ್ ಎದುರು ಚೇತರಿಸಿಕೊಂಡ ರೂಪಾಯಿ
ಈ ನಡುವೆ ಡಾಲರ್ ಎದುರು ರೂಪಾಯಿ ಚೇತರಿಕೆ ಕಂಡಿದೆ. ಆದರೆ ಇನ್ನು ಕೂಡಾ ಅಪಾಯ ಇದೆ. ಭಾರತೀಯ ರೂಪಾಯಿಯು, ಡಾಲರ್ ಎದುರು ಏರಿಕೆ ಕಂಡು 77.99ಗೆ ತಲುಪಿದೆ.


Click it and Unblock the Notifications