ಷೇರು ಮಾರುಕಟ್ಟೆಯು ಸೆಪ್ಟೆಂಬರ್ 22ರಂದು ಕುಸಿತವಾಗಿದೆ. ಯುಎಸ್ ಫೆಡರಲ್ ಹಣದುಬ್ಬರದ ವಿರುದ್ಧದ ಹೋರಾಟದ ನಡುವೆ ದರವನ್ನು ಏರಿಕೆ ಮಾಡಿದೆ. ಈ ಬೆನ್ನಲ್ಲೇ ಭಾರತೀಯ ಷೇರು ಮಾರುಕಟ್ಟೆ ಕುಸಿದಿದೆ. ಡಾಲರ್ ಎದುರು ರೂಪಾಯಿ ಮೌಲ್ಯವು ಕೂಡಾ ಸಾರ್ವಕಾಲಿಕ ಕುಸಿತವಾಗಿದೆ.
30 ಷೇರುಗಳ ಬಿಎಸ್‌ಇ ಸೂಚ್ಯಂಕ 370.75 ಅಂಕ ಅಥವಾ ಶೇಕಡ 0.62ರಷ್ಟು ಕುಸಿದು 59086.03 ಇಳಿದಿದೆ. ಇನ್ನು ನಿಫ್ಟಿ 133.80 ಅಂಕ ಅಥವಾ ಶೇಕಡ 0.76ರಷ್ಟು ಕುಸಿದು 17584.50ಕ್ಕೆ ವಹಿವಾಟು ಅಂತ್ಯ ಮಾಡಿದೆ. ಇನ್ನು 776 ಷೇರುಗಳು ಏರಿಕೆಯಾಗಿದ್ದರೆ, 1013 ಸ್ಟಾಕ್‌ಗಳು ಇಳಿಕೆಯಾಗಿದೆ. ಇನ್ನು 114 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿದೆ.
ಪವರ್ ಗ್ರೀಡ್, ಎಸ್‌ಬಿಐ ಲೈಫ್ ಇನ್ಶೂರೆನ್ಸ್, ಬಜಾಜ್ ಫಿನ್‌ಸರ್ವ್, ಎಚ್‌ಡಿಎಫ್‌ಸಿ, ಟೆಕ್ ಮಹೀಂದ್ರಾ ಸ್ಟಾಕ್‌ಗಳು ಪ್ರಮುಖ ನಿಫ್ಟಿ ಗೇನರ್ ಆಗಿದೆ. ಅದಾನಿ ಪೋರ್ಟ್ಸ್, ಐಟಿಸಿ, ಭಾರ್ತಿ ಏರ್‌ಟೆಲ್, ಎಚ್‌ಯುಎಲ್, ನೆಸ್ಲೆ ಇಂಡಿಯಾ ಸ್ಟಾಕ್ ಕೊಂಚ ಲಾಭವನ್ನು ಕಂಡಿದೆ.

ಆರಂಭಿಕ ವಹಿವಾಟಿನಲ್ಲಿ ಸ್ಟಾಕ್ ಮಾರುಕಟ್ಟೆ
ಐಟಿಸಿ, ಇಂಡಸ್‌ಇಂಡ್ ಬ್ಯಾಂಕ್, ಭಾರ್ತಿ ಏರ್‌ಟೆಲ್, ಆಕ್ಸಿಸ್ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ನೆಸ್ಲೆ ಇಂಡಿಯಾ, ಕೋಟಕ್ ಬ್ಯಾಂಕ್, ಟಾಟಾ ಸ್ಟೀಲ್, ಮಾರುತಿ, ಅಲ್ಟ್ರಾಟೆಕ್ ಸಿಮೆಂಟ್ ಸ್ಟಾಕ್ ಏರಿಕೆಯಾದ ಸ್ಟಾಕ್‌ಗಳು ಆಗಿದೆ. ಇನ್ನು ಎಲ್‌ಟಿ, ಟೈಟಾನ್, ಸನ್‌ಫಾರ್ಮಾ, ಎನ್‌ಟಿಪಿಸಿ, ಬಜಾಜ್ ಫೈನಾನ್ಸ್, ಎಸ್‌ಬಿಐ ಇನ್ಶೂರೆನ್ಸ್, ಎಂ&ಎಂ, ಡಾ ರೆಡ್ಡೀಸ್, ಟಿಸಿಎಸ್, ರಿಲಯನ್ಸ್, ಏಷ್ಯನ್ ಪೇಂಟ್ಸ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಪವರ್ ಗ್ರಿಡ್, ಇನ್ಪೋಸಿಸ್, ಎಚ್‌ಸಿಎಲ್ ಟೆಕ್, ವಿಪ್ರೋ, ಬಜಾಜ್ ಫಿನ್‌ಸರ್ವ್, ಟೆಕ್ ಎಂ, ಎಚ್‌ಡಿಎಫ್‌ಸಿ ಸ್ಟಾಕ್‌ಗಳು ಭಾರೀ ಇಳಿಕೆಯಾಗಿದೆ.
ರೂಪಾಯಿ ಸಾರ್ವಕಾಲಿಕ ಕುಸಿತ
ಹಲವಾರು ತಿಂಗಳುಗಳಿಂದ ಹಣದುಬ್ಬರದ ನಡುವೆ ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಭಾರೀ ಕುಸಿತ ಕಾಣುತ್ತಿದೆ. ಇಂದು ಮತ್ತೆ ಡಾಲರ್ ಎದುರು ರೂಪಾಯಿ ಸಾರ್ವಕಾಲಿಕ ಕುಸಿತ ಕಂಡಿದೆ. ಯುಎಸ್ ಫೆಡರಲ್ ಬಡ್ಡಿದರವನ್ನು 75 ಮೂಲಾಂಕ ಏರಿಕೆ ಮಾಡಿದೆ. ಈ ಬೆನ್ನಲ್ಲೇ ಯುಎಸ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು 80.44ಕ್ಕೆ ಕುಸಿದಿದೆ. ಬುಧವಾರ ವಹಿವಾಟಿನ ಅಂತ್ಯದಲ್ಲಿ 79.97ಕ್ಕೆ ಸ್ಥಿರವಾಗಿದೆ.


Click it and Unblock the Notifications