For Quick Alerts
ALLOW NOTIFICATIONS  
For Daily Alerts

ಷೇರು ಪೇಟೆ ಮತ್ತೆ ಚೇತರಿಕೆ: ಬ್ರಿಟಾನಿಯಾ ಸ್ಟಾಕ್‌ಗೆ ಭಾರೀ ಲಾಭ

|

ಏಷ್ಯನ್ ಮಾರುಕಟ್ಟೆಯಲ್ಲಿ ಮಿಶ್ರ ಸೂಚನೆಗಳ ಮಧ್ಯೆ ಭಾರತೀಯ ಷೇರುಗಳು ಗುರುವಾರ ಆರಂಭಿಕ ವಹಿವಾಟಿನಲ್ಲಿ ಲಾಭವನ್ನು ಕಂಡಿದೆ. ಇನ್ನು ಆರ್ಥಿಕ ಹಿಂಜರಿತದ ಆತಂಕದ ನಡುವೆ ಇಂದು ಆರಂಭಿಕ ವಹಿವಾಟಿನಲ್ಲಿ ಯುಎಸ್‌ ಸ್ಟಾಕ್ ಚರ್ಸ್ ಕುಸಿದಿದೆ.

 

30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 224 ಪಾಯಿಂಟ್‌ಗಳು ಅಥವಾ ಶೇಕಡಾ 0.42 ರಷ್ಟು ಏರಿಕೆಯಾಗಿ 53,251 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 60 ಪಾಯಿಂಟ್ ಅಥವಾ 0.38 ರಷ್ಟು ಏರಿಕೆಯಾಗಿ 15,859 ಕ್ಕೆ ವಹಿವಾಟು ನಡೆಸಿದೆ.

ಸೆನ್ಸೆಕ್ಸ್, ನಿಫ್ಟಿ ಇಳಿಕೆ: ಎಚ್‌ಡಿಎಫ್‌ಸಿ ಲೈಫ್ ಪಾತಾಳಕ್ಕೆಸೆನ್ಸೆಕ್ಸ್, ನಿಫ್ಟಿ ಇಳಿಕೆ: ಎಚ್‌ಡಿಎಫ್‌ಸಿ ಲೈಫ್ ಪಾತಾಳಕ್ಕೆ

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 0.31 ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 0.71 ರಷ್ಟು ಏರಿದೆ. ಉಪ-ಸೂಚ್ಯಂಕಗಳಾದ ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಮೆಟಲ್ ಕ್ರಮವಾಗಿ ಶೇಕಡಾ 0.52 ಮತ್ತು 0.45 ರಷ್ಟು ಏರಿಕೆಯಾಗಿದೆ. ಬುಧವಾರದಂದು ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ 150 ಪಾಯಿಂಟ್ ಅಥವಾ ಶೇಕಡಾ 0.28 ರಷ್ಟು ಕುಸಿದು 53,027 ಕ್ಕೆ ತಲುಪಿದ್ದರೆ, ನಿಫ್ಟಿ 51 ಪಾಯಿಂಟ್ ಅಥವಾ 0.32 ಶೇಕಡಾ ಕಡಿಮೆಯಾಗಿ 15,799 ಕ್ಕೆ ಸ್ಥಿರವಾಯಿತು.

 ಬ್ರಿಟಾನಿಯಾ ಟಾಪ್ ನಿಫ್ಟಿ ಗೇನರ್

ಬ್ರಿಟಾನಿಯಾ ಟಾಪ್ ನಿಫ್ಟಿ ಗೇನರ್

ಬ್ರಿಟಾನಿಯಾ ಟಾಪ್ ನಿಫ್ಟಿ ಗೇನರ್ ಆಗಿದ್ದು, ಷೇರುಗಳು ಶೇಕಡಾ 1.70 ರಷ್ಟು ಏರಿಕೆಯಾಗಿ ರೂಪಾಯಿ 3,462 ಕ್ಕೆ ತಲುಪಿದೆ. ಇನ್ನು ಟಾಟಾ ಮೋಟಾರ್ಸ್, ಅಪೊಲೊ ಹಾಸ್ಪಿಟಲ್ಸ್, ಟಾಟಾ ಸ್ಟೀಲ್ ಮತ್ತು ಮಾರುತಿ ಸಹ ಲಾಭ ಗಳಿಸಿದೆ. ಬಿಎಸ್‌ಇಯಲ್ಲಿ 1,818 ಷೇರುಗಳು ಲಾಭ ಗಳಿಸಿದರೆ, 586 ಷೇರುಗಳು ಕುಸಿತವನ್ನು ಕಂಡಿದೆ.

 ಯಾವ ಷೇರಿಗೆ ನಷ್ಟ, ಯಾವುದಕ್ಕೆ ಲಾಭ?

ಯಾವ ಷೇರಿಗೆ ನಷ್ಟ, ಯಾವುದಕ್ಕೆ ಲಾಭ?

30-ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ, ಕೋಟಕ್ ಮಹೀಂದ್ರಾ ಬ್ಯಾಂಕ್, ಮಾರುತಿ, ಟಾಟಾ ಸ್ಟೀಲ್, ಆಕ್ಸಿಸ್ ಬ್ಯಾಂಕ್, ಎಸ್‌ಬಿಐ, ಏಷ್ಯನ್ ಪೇಂಟ್ಸ್, ಪವರ್‌ಗ್ರಿಡ್, ರಿಲಯನ್ಸ್ ಇಂಡಸ್ಟ್ರೀಸ್, ಐಸಿಐಸಿಐ ಬ್ಯಾಂಕ್, ಸನ್ ಫಾರ್ಮಾ, ಇಂಡಸ್‌ಇಂಡ್ ಬ್ಯಾಂಕ್ ಮತ್ತು ಹಿಂದೂಸ್ತಾನ್ ಯೂನಿಲಿವರ್ ಷೇರುಗಳು ಏರಿಕೆ ಕಂಡಿದೆ. ಈ ನಡುವೆ ಟೆಕ್ ಮಹೀಂದ್ರಾ, ಭಾರ್ತಿ ಏರ್‌ಟೆಲ್, ಐಟಿಸಿ ಮತ್ತು ಎಂ & ಎಂ ಷೇರುಗಳು ನಷ್ಟವನ್ನು ಕಂಡಿದೆ.

 ಎಲ್‌ಐಸಿ ಷೇರು ಕುಸಿತ
 

ಎಲ್‌ಐಸಿ ಷೇರು ಕುಸಿತ

ಈ ನಡುವೆ ದೇಶದ ಅತಿದೊಡ್ಡ ವಿಮಾ ಸಂಸ್ಥೆ ಮತ್ತು ಅತಿದೊಡ್ಡ ದೇಶೀಯ ಹಣಕಾಸು ಹೂಡಿಕೆದಾರರಾದ ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಶೇಕಡಾ 0.11 ರಷ್ಟು ಕುಸಿದು ರೂಪಾಯಿ 678.15 ಕ್ಕೆ ವಹಿವಾಟು ಆರಂಭ ಮಾಡಿದೆ. ಬುಧವಾರ ವಹಿವಾಟಿನ ಅಂತ್ಯದಲ್ಲಿ ಎಲ್‌ಐಸಿ ಷೇರುಗಳು ಶೇಕಡ 2.34ರಷ್ಟು ಏರಿಕೆಯಾಗಿ ರೂಪಾಯಿ 678.90ಕ್ಕೆ ತಲುಪಿತ್ತು.

English summary

Opening Bell: Sensex Rises Over 200 Points, Nifty Trades Above 15,850

Sensex Rises Over 200 Points, Nifty Trades Above 15,850.
Story first published: Thursday, June 30, 2022, 10:52 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X