ಮಂಗಳವಾರ ವಹಿವಾಟಿನ ಅಂತ್ಯದಲ್ಲಿ ನಷ್ಟವನ್ನು ಕಂಡಿದ್ದ ಷೇರು ಮಾರುಕಟ್ಟೆ ಬುಧವಾರ ವಹಿವಾಟಿನ ಆರಂಭದಲ್ಲಿ ಲಾಭವನ್ನು ಗಳಿಸಿದೆ. ತೈಲ ಬೆಲೆಯು ಬ್ಯಾರೆಲ್‌ಗೆ 100 ಡಾಲರ್‌ಗಿಂತ ಕೆಳಕ್ಕೆ ಕುಸಿತ ಕಂಡಿದ್ದು, ಈ ನಡುವೆ ಷೇರು ಮಾರುಕಟ್ಟೆ ಚೇತರಿಕೆ ಕಂಡಿದೆ.
30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 200 ಪಾಯಿಂಟ್‌ಗಳನ್ನು ಗಳಿಸಿ 54,000ಕ್ಕೆ ತಲುಪಿ ವಹಿವಾಟು ಆರಂಭ ಮಾಡಿದೆ. ಇನ್ನು ಎನ್‌ಎಸ್‌ಇ ನಿಫ್ಟಿ 60 ಅಂಕ ಏರಿಕೆಯಾಗಿ 16,120 ಕ್ಕೆ ತಲುಪಿದೆ. ಏಷ್ಯಾ-ಪೆಸಿಫಿಕ್ ಷೇರುಗಳ ಈ ಹಿಂದಿನ ಸೆಷನ್‌ನಲ್ಲಿ ಎರಡು ವರ್ಷಗಳಲ್ಲಿ ಅದರ ಕನಿಷ್ಠ ಮಟ್ಟಕ್ಕೆ ಕುಸಿದ ನಂತರ ಶೇಕಡಾ 0.65 ರಷ್ಟು ಲಾಭ ಗಳಿಸಿದ್ದು, ಏಷ್ಯಾದ ಷೇರುಗಳು ಕೂಡಾ ಚೇತರಿಕೆ ಕಂಡಿದೆ.
ಜಾಗತಿಕವಾಗಿ ಆರ್ಥಿಕ ಕುಸಿತದ ಭೀತಿಯ ನಡುವೆಯೇ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಡಾಲರ್‌ಗಿಂತ ಕಡಿಮೆಯಾಗಿದೆ. ಭಾರತವು ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರವಾದ ಕಾರಣದಿಂದಾಗಿ ಈ ತೈಲ ಬೆಲೆ ಬದಲಾವಣೆಯು ಭಾರತದಲ್ಲಿ ಹೂಡಿಕೆದಾರರ ಮೇಲೆ ಪ್ರಭಾವ ಉಂಟು ಮಾಡಿದೆ.
ಯಾವೆಲ್ಲಾ ಷೇರುಗಳು ಏರಿಕೆ ನೋಡಿ
ಏಷ್ಯನ್ ಪೇಂಟ್ಸ್, ಎಲ್ & ಟಿ, ಎಚ್‌ಯುಎಲ್, ಎಸ್‌ಬಿಐ, ಪವರ್ ಗ್ರಿಡ್, ಎನ್‌ಟಿಪಿಸಿ, ಬಜಾಜ್ ಫೈನಾನ್ಸ್, ಟಿಸಿಎಸ್ ಮತ್ತು ಇನ್ಫೋಸಿಸ್ ಷೇರುಗಳು ಶೇಕಡ 1.7 ಕ್ಕೆ ಏರಿಕೆಯಾಗಿದೆ. ಬಿಪಿಸಿಎಲ್, ಗ್ರಾಸಿಮ್, ಬ್ರಿಟಾನಿಯಾ ಮತ್ತು ಟಾಟಾ ಮೋಟಾರ್ಸ್ ಕೂಡಾ ಲಾಭವನ್ನು ಕಂಡಿದೆ.
ಎಚ್‌ಸಿಎಲ್ ಟಾಪ್ ಲೂಸರ್
ಇನ್ನು ಎಚ್‌ಸಿಎಲ್ ಟಾಪ್ ಲೂಸರ್ ಆಗಿದೆ. ಎಚ್‌ಸಿಎಲ್ ಸ್ಟಾಕ್‌ಗಳು ಶೇಕಡ 2ರಷ್ಟು ಕುಸಿತ ಕಂಡಿದೆ. ಒಎನ್‌ಜಿಸಿ, ಟೆಕ್ ಎಂ, ರಿಲಯನ್ಸ್, ಡಾ ರೆಡ್ಡೀಸ್, ಟೈಟಾನ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ ಕೂಡಾ ನಷ್ಟವನ್ನು ಕಂಡಿದೆ.
ಎಲ್ಲಾ ಬ್ಯಾಂಕ್ ಷೇರುಗಳು ಏರಿಕೆ
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶೇಕಡ 2.19, ಕೆನರಾ ಬ್ಯಾಂಕ್ ಶೇಕಡ 1.41, ಇಂಡಿಯನ್ ಬ್ಯಾಂಕ್ ಶೇಕಡ 1.09ರಷ್ಟು, ಸ್ಟೇಟ್ ಬ್ಯಾಂಕ್ ಇಂಡಿಯಾ ಶೇಕಡ 1.03ರಷ್ಟು, ಬ್ಯಾಂಕ್ ಆಫ್ ಮಹಾರಾಷ್ಟ್ರ ಶೇಕಡ 0.92ರಷ್ಟು, ಯುಸಿಒ ಬ್ಯಾಂಕ್ ಶೇಡಕ 0.88, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ಶೇಕಡ 0.85, ಬ್ಯಾಂಕ್ ಆಫ್ ಇಂಡಿಯಾ ಶೇಕಡ 0.65, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶೇಕಡ 0.82ರಷ್ಟು ಏರಿಕೆಯಾಗಿದೆ.


Click it and Unblock the Notifications