ಒಂದು ದಿನಕ್ಕೂ ಮುನ್ನ ಅಂದರೆ ಮಾರ್ಚ್ 21, 2023ರಂದು ಹಲವಾರು ಜಾಗತಿಕ ಕಾರಣಗಳಿಂದಾಗಿ ಭಾರೀ ಕುಸಿತ ಕಂಡಿದ್ದ ಭಾರತೀಯ ಷೇರು ಮಾರುಕಟ್ಟೆಯು ಮಂಗಳವಾರ (ಮಾರ್ಚ್ 21) ಆರಂಭಿಕ ವಹಿವಾಟಿನಲ್ಲಿ ಮತ್ತೆ ಪುಟಿದೆದಿದ್ದೆ. ಸ್ಟಾಕ್ ಮಾರುಕಟ್ಟೆಯಲ್ಲಿ ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಏರಿಕೆ ಕಂಡಿದ್ದು, ಮಾರುಕಟ್ಟೆಯಲ್ಲಿ ಗೂಳಿಯಾಟ ಕಂಡು ಬಂದಿದೆ. ಸೋಮವಾರ ವಹಿವಾಟಿನ ಆರಂಭದಲ್ಲಿ ಸೆನ್ಸೆಕ್ಸ್ 406.45 ಪಾಯಿಂಟ್ ಅಥವಾ ಶೇ.0.70ರಷ್ಟು ಕುಸಿದು, 57,583.45ಕ್ಕೆ ತಲುಪಿದೆ. ನಿಫ್ಟಿ 120.30 ಅಂಕ, ಶೇ.0.70ರಷ್ಟು ಇಳಿದು 16,979.70ಕ್ಕೆ ತಲುಪಿದೆ.
ಇನ್ನು ಮಂಗಳವಾರ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 242.82 ಪಾಯಿಂಟ್ ಅಥವಾ ಶೇ.0.42ರಷ್ಟು ಏರಿದ್ದು, 57,871.77ಕ್ಕೆ ತಲುಪಿದೆ. ನಿಫ್ಟಿ 69.40 ಅಂಕ, ಶೇ.0.41ರಷ್ಟು ಹೆಚ್ಚಳವಾಗಿ 17,057.80ಕ್ಕೆ ತಲುಪಿದೆ. 1330 ಷೇರುಗಳು ಏರಿಕೆಯಾಗಿದ್ದರೆ, 454 ಷೇರುಗಳು ಇಳಿಕೆಯಾಗಿದೆ. 79 ಷೇರುಗಳು ಸ್ಥಿರವಾಗಿದೆ. ಇನ್ನು ನಿನ್ನೆ ಅಂದರೆ ಮಾರ್ಚ್ 20ರ ವಹಿವಾಟಿನ ಅಂತ್ಯದಲ್ಲಿ ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ 360.95 ಪಾಯಿಂಟ್ ಅಥವಾ ಶೇ.0.62ರಷ್ಟು ಕುಸಿದು, 57,628.95ಕ್ಕೆ ತಲುಪಿದೆ. ನಿಫ್ಟಿ 111.60 ಅಂಕ, ಶೇ.0.65ರಷ್ಟು ಇಳಿಕೆಯಾಗಿ 16,988.40ಕ್ಕೆ ತಲುಪಿದೆ. 1138 ಷೇರುಗಳು ಏರಿಕೆಯಾಗಿದ್ದರೆ, 2393 ಷೇರುಗಳು ಇಳಿಕೆಯಾಗಿದೆ. 125 ಷೇರುಗಳು ಸ್ಥಿರವಾಗಿದೆ.

ಇಂದು ಏರಿಕೆ ಕಂಡ ಪ್ರಮುಖ ಷೇರುಗಳ ಬಗ್ಗೆ ತಿಳಿಯಿರಿ
ಮಾರ್ಚ್ 21ರಂದು ಆರಂಭಿಕ ವಹಿವಾಟಿನಲ್ಲಿ ಪ್ರಮುಖವಾಗಿ ನೆಸ್ಲೆ ಇಂಡಿಯಾ, ಬಜಾಜ್ ಫೈನಾನ್ಸ್, ಭಾರ್ತಿ ಏರ್‌ಟೆಲ್, ರಿಲಯನ್ಸ್, ಎಲ್‌ಟಿ, ಬಜಾಜ್ ಫಿನ್‌ಸರ್ವ್, ಏಷ್ಯನ್ ಪೇಂಟ್ಸ್, ಆಕ್ಸಿಸ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಸ್‌ಬಿಐ ಇನ್ಶೂರೆನ್ಸ್, ಅಲ್ಟ್ರಾಟೆಕ್ ಸಿಮೆಂಟ್ ಕಾಪೋರೇಷನ್, ಟೈಟಾನ್, ಎನ್‌ಟಿಪಿಸಿ, ಎಚ್‌ಡಿಎಫ್‌ಸಿ ಬ್ಯಾಂಕ್, ಎಚ್‌ಡಿಎಫ್‌ಸಿ, ಟಾಟಾ ಮೋಟರ್ಸ್, ಮಾರುತಿ, ಟಾಟಾ ಸ್ಟೀಲ್ಸ್, ಕೋಟಕ್ ಬ್ಯಾಂಕ್, ವಿಪ್ರೋ, ಹಿಂದೂಸ್ತಾನ್ ಯೂನಿಲಿವರ್ ಸ್ಟಾಕ್‌ಗಳು ಏರಿಕೆಯಾಗಿದೆ.
ಗೇನರ್, ಲೂಸರ್, ಬೆಸ್ಟ್ ಸೆಕ್ಟರ್
ಈ ಸಮಯಕ್ಕೆ (ಬೆಳಿಗ್ಗೆ 9:58) ಬಜಾಜ್ ಫೈನಾನ್ಸ್ ಸ್ಟಾಕ್ ಗೇನರ್ ಆಗಿದ್ದು, ಶೇಕಡ 1.97ರಷ್ಟು ಅಥವಾ 109.20 ಅಂಕ ಏರಿಕೆಯಾಗಿದ್ದು ಪ್ರಸ್ತುತ ದರ 5,660.00 ರೂಪಾಯಿ ಆಗಿದೆ. ಇನ್ನು ಪವರ್ ಗ್ರಿಡ್ ಕಾರ್ಪೋರೇಷನ್ ಲೂಸರ್ ಸ್ಟಾಕ್ ಆಗಿದೆ. ಸ್ಟಾಕ್ ಶೇಕಡ 1.52 ಅಥವಾ 3.45 ಅಂಕ ಇಳಿಕೆಯಾಗಿದ್ದು, 224.05 ರೂಪಾಯಿಗೆ ತಲುಪಿದೆ. ನಿಫ್ಟಿ ಇನ್ಫ್ರಾ ಬೆಸ್ಟ್ ಸೆಕ್ಟರ್ ಆಗಿದ್ದು, ಶೇಕಡ 0.47ರಷ್ಟು ಹೆಚ್ಚಳವಾಗಿ 5080.90 ರೂಪಾಯಿಗೆ ತಲುಪಿದೆ. ನಿಫ್ಟಿ ಐಟಿ ಶೇಕಡ 0.69ರಷ್ಟು ಇಳಿದು 28247.00ಕ್ಕೆ ತಲುಪಿದ್ದು ಅತೀ ಹೆಚ್ಚು ನಷ್ಟ ಕಂಡ ಸೆಕ್ಟರ್ ಇದಾಗಿದೆ.
ಅದಾನಿ ಸ್ಟಾಕ್‌ಗಳು ಹೇಗಿದೆ?
ಈ ಸಮಯಕ್ಕೆ ಅದಾನಿ ಎಂಟರ್‌ಪ್ರೈಸಸ್ ಸ್ಟಾಕ್ ಶೇಕಡ 0.49ರಷ್ಟು ಏರಿಕೆಯಾಗಿ 1,813.95 ರೂಪಾಯಿಗೆ ತಲುಪಿದೆ. ಅದಾನಿ ವಿಲ್ಮಾರ್ ಸ್ಟಾಕ್ ಶೇಕಡ 0.012ರಷ್ಟು ಇಳಿಕೆಯಾಗಿ, 413.80 ರೂಪಾಯಿಗೆ ತಲುಪಿದೆ. ಅದಾನಿ ಪೋರ್ಟ್ಸ್ ಶೇಕಡ 0.52ರಷ್ಟು ಕುಸಿದು, 663.25 ರೂಪಾಯಿಗೆ ತಲುಪಿದೆ. ಅಂಬುಜಾ ಸಿಮೆಂಟ್ ಸ್ಟಾಕ್ ಶೇಕಡ 1.18ರಷ್ಟು ಏರಿಕೆಯಾಗಿದ್ದು, 369.70 ರೂಪಾಯಿಗೆ ತಲುಪಿದೆ.
ಎಸಿಸಿ ಶೇಕಡ 1.19ರಷ್ಟು ಏರಿ, 1,714.55 ರೂಪಾಯಿಗೆ ತಲುಪಿದೆ. ಇನ್ನು ಅದಾನಿಯ 5 ಸ್ಟಾಕ್‌ಗಳಾದ ಅದಾನಿ ಟ್ರಾನ್ಸ್‌ಮಿಷನ್ ಶೇಕಡ 0.59ರಷ್ಟು ಕುಸಿದು, 1,003.10 ರೂಪಾಯಿಗೆ ತಲುಪಿದೆ. ಅದಾನಿ ಟೋಟಲ್ ಗ್ಯಾಸ್ ಶೇ.1.34ರಷ್ಟು ಇಳಿದು 840.55 ರೂಪಾಯಿ ಆಗಿದೆ. ಅದಾನಿ ಗ್ರೀನ್ ಎನರ್ಜಿ ಶೇ.3.99ರಷ್ಟು ಏರಿ, 882.50ಕ್ಕೆ ತಲುಪಿದೆ. ಎನ್‌ಡಿಟಿವಿ ಶೇಕಡ 1.08ರಷ್ಟು ಹೆಚ್ಚಾಗಿ 200.65 ರೂಪಾಯಿಗೆ ಮತ್ತು ಅದಾನಿ ಪವರ್ ಶೇಕಡ 0.47ರಷ್ಟು ಹೆಚ್ಚಳವಾಗಿ 191.10 ರೂಪಾಯಿಗೆ ತಲುಪಿದೆ.


Click it and Unblock the Notifications