ಸತತ ಏಳನೇ ಸೆಷನ್‌ನಲ್ಲಿ ಷೇರುಪೇಟೆ ಏರಿಕೆ: ಆರಂಭಿಕ ವಹಿವಾಟು ಹೀಗಿದೆ..

ಭಾರತೀಯ ಷೇರು ಮಾರುಕಟ್ಟೆಯು ಗುರುವಾರವೂ ಕೂಡಾ ಏರಿಕೆಯನ್ನು ದಾಖಲಿಸಿದೆ. ಬುಧವಾರ ಷೇರು ಮಾರುಕಟ್ಟೆಯು ಆರಂಭಿಕ ಹಾಗೂ ಅಂತ್ಯದ ವಹಿವಾಟಿನಲ್ಲಿ ಏರಿಕೆಯಾಗಿದೆ. ವಾಲ್‌ಸ್ಟ್ರೀಟ್‌ನಲ್ಲಿ ಉತ್ತಮ ಬೆಳವಣಿಗೆ ಕಂಡು ಬಂದಿದೆ. ಭಾರತೀಯ ಷೇರು ಮಾರುಕಟ್ಟೆಯ ಮೇಲೆಯೂ ಪರಿಣಾಮ ಕಂಡು ಬಂದಿದೆ. ಸತತ ಏಳನೇ ಸೆಷನ್‌ನಲ್ಲಿ ಷೇರುಪೇಟೆ ಏರಿಕೆಯನ್ನು ದಾಖಲಿಸಿದೆ.

ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕದಲ್ಲಿ 264.56 ಅಂಕ ಏರಿಕೆಯಾಗಿ 58,615.09 ತಲುಪಿ ವಹಿವಾಟು ಆರಂಭಿಸಿದೆ. ಎನ್‌ಎಸ್‌ಇ ನಿಫ್ಟಿ ಶೇಕಡ 0.45ರಷ್ಟು ಹೆಚ್ಚಾಗಿ 17,465.65ಕ್ಕೆ ತಲುಪಿದೆ. ನಿಫ್ಟಿ ಐಟಿ ಸೂಚ್ಯಂಕ ಬೆಸ್ಟ್ ಸೆಕ್ಟರ್ ಆಗಿದೆ. ಆರಂಭಿಕ ವಹಿವಾಟಿನಲ್ಲಿ ನಿಫ್ಟಿ ಐಟಿ ಸೂಚ್ಯಂಕ ಶೇಕಡ ಒಂದಕ್ಕಿಂತ ಅಧಿಕ ಏರಿಕೆಯಾಗಿದೆ.

30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 214.17 ಅಂಕ ಅಥವಾ ಶೇಕಡ 0.37ರಷ್ಟು ಏರಿಕೆಯಾಗಿ 58,350.53ಕ್ಕೆ ವಹಿವಾಟು ಅಂತ್ಯ ಮಾಡಿದೆ. ನಿಫ್ಟಿ 42.70 ಅಂಕ ಅಥವಾ ಶೇಕಡ 0.25ರಷ್ಟು ಏರಿ 17,388.20ಕ್ಕೆ ವಹಿವಾಟು ಕೊನೆ ಮಾಡಿದೆ. 1337 ಷೇರುಗಳು ಏರಿಕೆಯನ್ನು ಕಂಡಿದ್ದರೆ, 1934 ಷೇರುಗಳು ಇಳಿಕೆಯಾಗಿದೆ. ಈ ಸಂದರ್ಭದಲ್ಲೇ 133 ಷೇರುಗಳು ಸ್ಥಿರತೆ ಕಾಯ್ದುಕೊಂಡಿತ್ತು. ಹಾಗಾದರೆ ಷೇರು ಮಾರುಕಟ್ಟೆ ಗುರುವಾರ ಆರಂಭಿಕ ವಹಿವಾಟಿನಲ್ಲಿ ಹೇಗಿದೆ ಎಂದು ನೋಡೋಣ ಮುಂದೆ ಓದಿ...

 ಟಾಪ್ ಗೇನರ್, ಲೂಸರ್ ಸ್ಟಾಕ್‌ಗಳು

ಟಾಪ್ ಗೇನರ್, ಲೂಸರ್ ಸ್ಟಾಕ್‌ಗಳು

ಹಿಂಡಾಲ್ಕೊ ಟಾಪ್ ಸ್ಟಾಕ್ ಆಗಿದೆ. ಹಿಂಡಾಲ್ಕೊ ಷೇರುಗಳು ಶೇಕಡ 3.62ರಷ್ಟು ಏರಿಕೆಯಾಗಿ ರೂಪಾಯಿ 429.25ಕ್ಕೆ ತಲುಪಿದೆ. ಇನ್ನು ಟಾಟಾ ಕನ್ಸ್ಯೂಮರ್ ಪ್ರೋಡೆಕ್ಟ್ಸ್ ಟಾಪ್ ಲೂಸರ್ ಆಗಿದೆ. ಸ್ಟಾಕ್ ಶೇಕಡ 2.83ರಷ್ಟು ಕುಸಿತವಾಗಿ ರೂಪಾಯಿ 789.75ಕ್ಕೆ ತಲುಪಿದೆ.

 ಯಾವ ಷೇರು ಏರಿಕೆ, ಇಳಿಕೆ?

ಯಾವ ಷೇರು ಏರಿಕೆ, ಇಳಿಕೆ?

ನಿಫ್ಟಿಯಲ್ಲಿ ಇನ್ಫೋಸಿಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಬಜಾಜ್ ಫೈನಾನ್ಸ್, ಲಾರ್ಸೆನ್, ಅದಾನಿ ಪೋರ್ಟ್ಸ ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳಾದರೆ, ರಿಲಯನ್ಸ್, ಎಸ್‌ಬಿಐ, ಟಾಟಾ ಕನ್ಸ್ಯೂಮರ್ ಪ್ರೋಡೆಕ್ಟ್ಸ್, ಟೈಟಾನ್ ಕಂಪನಿ, ಭಾರ್ತಿ ಏರ್‌ಟೆಲ್ ಸ್ಟಾಕ್‌ಗಳು ಕುಸಿತವಾಗಿದೆ. ಇನ್ನು ಸೆನ್ಸೆಕ್ಸ್‌ನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಬಜಾಜ್ ಫೈನಾನ್ಸ್, ಎಚ್‌ಡಿಎಫ್‌ಸಿ ಷೇರುಗಳು ಏರಿಕೆಯಾಗಿದೆ. ರಿಲಯನ್ಸ್, ಎಸ್‌ಬಿಐ, ಟೈಟಾನ್ ಕಂಪನಿ, ಭಾರ್ತಿ ಏರ್‌ಟೆಲ್, ಎನ್‌ಟಿಪಿಸಿ ಸ್ಟಾಕ್‌ಗಳು ಇಳಿಕೆಯಾಗಿದೆ.

 ಇಂದಿನ ಪ್ರಮುಖ ಸ್ಟಾಕ್‌

ಇಂದಿನ ಪ್ರಮುಖ ಸ್ಟಾಕ್‌

ಬ್ರಿಟಾನಿಯಾ ಇಂಡಸ್ಟ್ರೀಸ್, ಗೇಲ್ ಇಂಡಿಯಾ, ಅದಾನಿ ಎಂಟರ್‌ಪ್ರೈಸಸ್, ಎಲ್‌ಐಸಿ ಹೌಸಿಂಗ್ ಫೈನಾನ್ಸ್, ಡಾಬರ್ ಇಂಡಿಯಾ, ಅಲೆಂಬಿಕ್ ಫಾರ್ಮಾಸ್ಯುಟಿಕಲ್ಸ್, ಅದಾನಿ ಟೋಟಲ್ ಗ್ಯಾಸ್, ಆರತಿ ಸರ್ಫ್ಯಾಕ್ಟಂಟ್ಸ್, ಆಪ್ಟೆಕ್, ಬಾಲಕೃಷ್ಣ ಇಂಡಸ್ಟ್ರೀಸ್, ಬಲರಾಂಪುರ್ ಚಿನಿ ಮಿಲ್ಸ್, ಬಿಇಎಂಎಲ್, ಬರ್ಗರ್ ಪೇಂಟ್ಸ್ ಇಂಡಿಯಾ, ಭಾರತ್ ಹೆವಿ ಕಾರ್ಪೊರೇಷನ್, ಭಾರತ್ ಹೆವಿ ಕಾರ್ಪೊರೇಷನ್ ಆಫ್ ಇಂಡಿಯಾ, ದಾಲ್ಮಿಯಾ ಭಾರತ್, ಎಡೆಲ್‌ವೀಸ್ ಫೈನಾನ್ಶಿಯಲ್ ಸರ್ವೀಸಸ್, ಗ್ಲೆನ್‌ಮಾರ್ಕ್ ಲೈಫ್ ಸೈನ್ಸಸ್, ಗುಜರಾತ್ ಸ್ಟೇಟ್ ಪೆಟ್ರೋನೆಟ್, ಐಸಿಆರ್‌ಎ, ಕಲ್ಪತರು ಪವರ್ ಟ್ರಾನ್ಸ್‌ಮಿಷನ್, ಕಲ್ಯಾಣ್ ಜ್ಯುವೆಲರ್ಸ್ ಇಂಡಿಯಾ, ಕೃಷ್ಣ ಡಯಾಗ್ನೋಸ್ಟಿಕ್ಸ್, ಮಣಪ್ಪುರಂ ಫೈನಾನ್ಸ್, ಪ್ರಜ್ ಇಂಡಸ್ಟ್ರೀಸ್, ಆರ್‌ಇಸಿ, ಶಂಕರ ಬಿಲ್ಡಿಂಗ್ ಪ್ರಾಡಕ್ಟ್ಸ್, ಸ್ಪಂದನ ಸ್ಫೂರ್ತಿ ಡೇ ಫೈನಾನ್ಶಿಯಲ್, ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಉಜ್ಜೀವನ್ ಫೈನಾನ್ಶಿಯಲ್ ಸರ್ವೀಸಸ್, ವೆಲ್ಸ್ಪನ್ ಕಾರ್ಪ್, ಮತ್ತು ವಿಂಡ್ಲಾಸ್ ಬಯೋಟೆಕ್ ಇಂದಿನ ಪ್ರಮುಖ ಸ್ಟಾಕ್‌ಗಳು ಆಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+