ಮತ್ತೆ ಪುಟಿದೆದ್ದ ಷೇರುಪೇಟೆ: ಸನ್‌ ಫಾರ್ಮಾ ಟಾಪ್ ಗೇನರ್

ಕಳೆದ ವಾರ ಈ ವರ್ಷದಲ್ಲೇ ಕೆಟ್ಟ ವಾರವನ್ನು ಕಂಡ ಷೇರು ಮಾರುಕಟ್ಟೆಯು ಸೋಮವಾರ ಪುಟಿದೆದ್ದಿದೆ. ಯುಎಸ್ ಫೆಡರಲ್ ರಿಸರ್ವ್ ದರವು ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಹಿನ್ನೆಲೆ ವಾಲ್‌ಸ್ಟ್ರೀಟ್‌ನಲ್ಲಿ ಬಹುತೇಕ ಏಷ್ಯಾದ ಷೇರುಗಳು ಕೆಂಪು ಬಣ್ಣಕ್ಕೆ ತಿರುಗಿದ್ದವು. ಆದರೆ ಇಂದು ಷೇರು ಪೇಟೆಯು ಕೊಂಚ ಚೇತರಿಕೆ ಕಂಡಿದೆ.

ಬಿಎಸ್‌ಇ ಸೆನ್ಸೆಕ್ಸ್ ಸುಮಾರು 208 ಅಂಕ ಅಥವಾ ಶೇಕಡ 0.41ರಷ್ಟು ಏರಿಕೆಯಾಗಿ 51,568ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 69 ಅಂಕ ಅಥವಾ ಶೇಕಡ 0.45ರಷ್ಟು ಹೆಚ್ಚಳವಾಗಿ 15,362ರಲ್ಲಿ ವಹಿವಾಟು ಆರಂಭ ಮಾಡಿದೆ. ಕಳೆದ ವಾರ ಸೆನ್ಸೆಕ್ಸ್ ಹಾಗೂ ನಿಫ್ಟಿ ಪಾತಾಳಕ್ಕೆ ಇಳಿದಿದ್ದವು.

ಇನ್ನು ಮಿಡ್ ಹಾಗೂ ಸ್ಮಾಲ್ ಷೇರುಗಳು ಏರಿಳಿತ ಕಂಡಿದೆ. ನಿಫ್ಟಿ ಮಿಡ್‌ಕ್ಯಾಪ್ ಶೇಕಡ 0.07ರಷ್ಟು ಕೆಳಕ್ಕೆ ಕುಸಿದರೆ, ನಿಫ್ಟಿ ಸ್ಮಾಲ್ ಕ್ಯಾಪ್ ಶೇಕಡ 0.03ರಷ್ಟು ಕುಸಿದಿದೆ. 15 ಸೆಕ್ಟರ್ ಗೇಜ್‌ಗಳಲ್ಲಿ ಒಂಬತ್ತು ಲಾಭವನ್ನು ಕಂಡಿದೆ. ನಿಫ್ಟಿ ಬ್ಯಾಂಕ್, ನಿಫ್ಟಿ ಐಟಿ ಕ್ರಮವಾಗಿ ಶೇಕಡ 0.54 ಮತ್ತು ಶೇಕಡ 0.54ರಷ್ಟು ಹೆಚ್ಚಳವಾಗಿದೆ.

ಮತ್ತೆ ಪುಟಿದೆದ್ದ ಷೇರುಪೇಟೆ: ಸನ್‌ ಫಾರ್ಮಾ ಟಾಪ್ ಗೇನರ್

ಸನ್‌ ಫಾರ್ಮಾ ಟಾಪ್ ಗೇನರ್

ಸನ್‌ ಫಾರ್ಮಾ ನಿಫ್ಟಿಯಲ್ಲಿ ಭಾರೀ ಚೇತರಿಕೆ ಕಂಡಿದೆ. ಸನ್‌ ಫಾರ್ಮಾ ಷೇರು ಶೇಕಡ 1.53ರಷ್ಟು ಹೆಚ್ಚಳ ಕಂಡು ರೂಪಾಯಿ 805.50ಕ್ಕೆ ತಲುಪಿದೆ. ಇನ್ನು ಎಚ್‌ಡಿಎಫ್‌ಸಿ, ಹಿಂದೂಸ್ತಾನ್ ಯೂನಿಲಿವರ್, ಅಪೋಲೋ ಹಾಸ್ಪಿಟಲ್, ಏಷ್ಯನ್ ಪೇಂಟ್ಸ್ ಹೆಚ್ಚು ಲಾಭ ಕಂಡ ಸ್ಟಾಕ್‌ಗಳು ಆಗಿದೆ.

ಇನ್ನು ಷೇರು ಮಾರುಕಟ್ಟೆಯಲ್ಲಿ ಸುಮಾರು 1,047 ಷೇರುಗಳು ಲಾಭವನ್ನು ಕಂಡಿದ್ದರೆ 1,366 ಷೇರುಗಳು ನಷ್ಟವನ್ನು ಕಂಡಿದೆ. ಈ ಸಂದರ್ಭದಲ್ಲೇ ಬಿಎಸ್‌ಇ ಸೂಚ್ಯಂಕದಲ್ಲಿ ಎಚ್‌ಡಿಎಫ್‌ಸಿ, ಎಚ್‌ಯುಎಲ್, ಸನ್ ಫಾರ್ಮಾ, ಎಚ್‌ಡಿಎಫ್‌ಸಿ ಬ್ಯಾಂಕ್, ಏಷ್ಯನ್ ಪೇಂಟ್ಸ್, ಡಾ. ರೆಡ್ಡೀಸ್, ವಿಪ್ರೋ, ಅಲ್ಟ್ರಾಟೆಕ್ ಸಿಮೆಂಟ್ ಭಾರೀ ಲಾಭವನ್ನು ಗಳಿಸಿದೆ. ಈ ಸಂದರ್ಭದಲ್ಲೇ ಟಾಟಾ ಸ್ಟೀಲ್ಸ್, ಪವರ್‌ಗ್ರಿಡ್, ಎಂ&ಎಂ, ಎಲ್‌&ಟಿ, ಬಜಾಜ್ ಫಿನ್‌ಸರ್ವ್ ನಷ್ಟವನ್ನು ಕಂಡಿದೆ.

ಕಳೆದ ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ ಸುಮಾರು 135.57 ಅಂಕ ಅಥವಾ ಶೇಕಡ 0.26ರಷ್ಟು ಕೆಳಕ್ಕೆ ಇಳಿದು 51,360.42ರಲ್ಲಿ ವಹಿವಾಟು ಅಂತ್ಯ ಮಾಡಿದೆ. ನಿಫ್ಟಿ ಶೇಕಡ 0.44ರಷ್ಟು ಕುಸಿದು 15,293.50ಕ್ಕೆ ಸ್ಥಿರವಾಗಿದೆ. ಟೈಟಾನ್, ವಿಪ್ರೋ ಭಾರೀ ನಷ್ಟವನ್ನು ಕಂಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+