For Quick Alerts
ALLOW NOTIFICATIONS  
For Daily Alerts

ಷೇರು ಪೇಟೆ ಜಿಗಿತ: ಬ್ಯಾಂಕಿಂಗ್, ಫಾರ್ಮಾ ಷೇರು ಏರಿಕೆ

|

ಬ್ಯಾಂಕಿಂಗ್ ಮತ್ತು ಫಾರ್ಮಾ ಷೇರುಗಳಲ್ಲಿನ ಲಾಭದ ಕಾರಣದಿಂದ ಷೇರು ಪೇಟೆಯಲ್ಲಿ ಇಂದು ಆರಂಭಿಕ ವಹಿವಾಟಿನಲ್ಲಿ ಭಾರತೀಯ ಷೇರುಗಳ ಕೊಂಚ ಏರಿಕೆ ಕಂಡಿದೆ. ಆರಂಭಿಕ ವಹಿವಾಟಿನಲ್ಲಿ 30-ಷೇರು ಬಿಎಸ್‌ಇ ಸೆನ್ಸೆಕ್ಸ್ 284 ಪಾಯಿಂಟ್‌ಗಳು ಅಥವಾ ಶೇಕಡಾ 0.53 ರಷ್ಟು ಏರಿಕೆಯಾಗಿ 54,337 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 79 ಪಾಯಿಂಟ್ ಅಥವಾ 0.49 ರಷ್ಟು ಏರಿಕೆಯಾಗಿ 16,204 ಕ್ಕೆ ವಹಿವಾಟು ಆರಂಭ ಮಾಡಿದೆ.

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 0.26 ರಷ್ಟು ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 0.38 ರಷ್ಟು ಏರಿಕೆಯಾಗಿದೆ. ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ 15 ಸೆಕ್ಟರ್‌ನಲ್ಲಿ 14 ಲಾಭದೊಂದಿಗೆ ವಹಿವಾಟು ನಡೆಸುತ್ತಿದೆ. ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಫೈನಾನ್ಶಿಯಲ್ ಸರ್ವಿಸಸ್ ಕ್ರಮವಾಗಿ 1.07 ಶೇಕಡಾ ಮತ್ತು 1.19 ರಷ್ಟು ಏರಿಕೆಯಾಗಿದೆ.

 Opening Bell: ಲೋಹದ ಷೇರು ಚೇತರಿಕೆ: ಸೆನ್ಸೆಕ್ಸ್, ನಿಫ್ಟಿ ಏರಿಕೆ Opening Bell: ಲೋಹದ ಷೇರು ಚೇತರಿಕೆ: ಸೆನ್ಸೆಕ್ಸ್, ನಿಫ್ಟಿ ಏರಿಕೆ

ಎಸ್‌ಬಿಐ ಲೈಫ್ ಅಧಿಕ ಲಾಭವನ್ನು ಕಂಡಿದೆ. ಎಸ್‌ಬಿಐ ಲೈಫ್ ಷೇರುಗಳು ಶೇಕಡಾ 2.64 ರಷ್ಟು ಏರಿಕೆಯಾಗಿ ರೂಪಾಯಿ 1,101.70 ಕ್ಕೆ ತಲುಪಿದೆ. ಇಂಡಸ್‌ಇಂಡ್ ಬ್ಯಾಂಕ್, ನೆಸ್ಲೆ ಇಂಡಿಯಾ, ಎಸ್‌ಬಿಐ ಮತ್ತು ಎನ್‌ಟಿಪಿಸಿ ಕೂಡ ಲಾಭ ಗಳಿಸಿದೆ.

 ಷೇರು ಪೇಟೆ ಜಿಗಿತ: ಬ್ಯಾಂಕಿಂಗ್, ಫಾರ್ಮಾ ಷೇರು ಏರಿಕೆ

30-ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ, ಇಂಡಸ್‌ಇಂಡ್ ಬ್ಯಾಂಕ್, ನೆಸ್ಲೆ ಇಂಡಿಯಾ, ಎನ್‌ಟಿಪಿಸಿ, ಕೊಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಾಭವನ್ನು ಗಳಿಸಿದೆ.

ಕೊಂಚ ಏರಿಕೆ ಕಂಡ ಎಲ್‌ಐಸಿ ಷೇರು

ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಷೇರುಗಳು ಅದರ ಹಿಂದಿನ ವಹಿವಾಟಿನಿಂದ ಕೊಂಚ ಏರಿಕೆ ಕಂಡಿದೆ. ಕೊನೆಯ ವಹಿವಾಟಿನಲ್ಲಿ 823.75 ರೂಪಾಯಿಗೆ ಸ್ಥಿರವಾಗಿದ್ದ ಎಲ್‌ಐಸಿ ಷೇರು ಇಂದು ಆರಂಭಿಕ ವಹಿವಾಟಿನಲ್ಲಿ ಶೇಕಡಾ 0.65 ರಷ್ಟು ಏರಿಕೆಯಾಗಿ 829.10 ರೂಪಾಯಿಗೆ ತಲುಪಿದೆ.

ಈ ನಡುವೆ ಏಷ್ಯನ್ ಪೇಂಟ್ಸ್, ಟೆಕ್ ಮಹೀಂದ್ರಾ, ಟಿಸಿಎಸ್, ಎಚ್‌ಸಿಎಲ್ ಟೆಕ್, ವಿಪ್ರೋ, ಟಾಟಾ ಸ್ಟೀಲ್ ಮತ್ತು ಎಂ & ಎಂ ನಷ್ಟದೊಂದಿಗೆ ಷೇರು ಪೇಟೆಗೆ ಇಳಿದಿದೆ. ಮಂಗಳವಾರ ಸೆನ್ಸೆಕ್ಸ್ 236 ಪಾಯಿಂಟ್ ಅಥವಾ ಶೇಕಡಾ 0.43 ರಷ್ಟು ಕುಸಿದು 54,053 ಕ್ಕೆ ತಲುಪಿದ್ದರೆ, ನಿಫ್ಟಿ 90 ಪಾಯಿಂಟ್ ಅಥವಾ 0.55 ಶೇಕಡಾ ಕುಸಿದು 16,125 ಕ್ಕೆ ವಹಿವಾಟು ಅಂತ್ಯ ಮಾಡಿದೆ.

English summary

Opening Bell: Sensex Rises Over 250 Points, Nifty Trades Above 16,200

Sensex Rises Over 250 Points, Nifty Trades Above 16,200.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X