ಸೋಮವಾರ ಆರಂಭಿಕ ವಹಿವಾಟಿನಲ್ಲಿ ಲಾಭವನ್ನು ಕಂಡಿದ್ದ ಷೇರು ಮಾರುಕಟ್ಟೆ ಮಂಗಳವಾರವೂ ಲಾಭದ ವಹಿವಾಟು ಮುಂದುವರಿಸಿದೆ. ಜಾಗತಿಕ ಮಾರುಕಟ್ಟೆಯು ಪಾಸಿಟಿವ್ ಆಗಿದ್ದು, ಈ ಬೆನ್ನಲ್ಲೆ ಭಾರತೀಯ ಮಾರುಕಟ್ಟೆ ಲಾಭ ಕಂಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಏಷ್ಯನ್ ಷೇರುಗಳು ಹಾಗೂ ಯುಎಸ್ ಷೇರುಗಳು ಜಿಗಿತವನ್ನು ಕಂಡಿದೆ.
30-ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 367 ಅಂಕ ಅಥವಾ ಶೇಕಡ 0.71ರಷ್ಟು ಜಿಗಿದು, 51,965ಕ್ಕೆ ವಹಿವಾಟು ಆರಂಭಿಸಿದೆ. ಎನ್‌ಎಇ ನಿಫ್ಟಿ 106 ಅಂಕ ಅಥವಾ ಶೇಕಡ 0.69ರಷ್ಟು ಜಿಗಿದು 15,456ಕ್ಕೆ ತಲುಪಿದೆ. ಮಿಡ್ ಮತ್ತು ಸ್ಮಾಲ್ ಕ್ಯಾಪ್ ಲಾಭವನ್ನು ಕಂಡಿದೆ.
ಮಿಡ್ ಕ್ಯಾಪ್ ಷೇರು ಶೇಕಡ 1.15 ಏರಿದರೆ, ಸ್ಮಾಲ್ ಕ್ಯಾಫ್ ಷೇರು ಶೇಕಡ 1.41ರಷ್ಟು ಲಾಭವನ್ನು ಕಂಡಿದೆ. ಇನ್ನು 15 ಸೆಕ್ಟರ್ ಗೇಜ್‌ನಲ್ಲಿ ಎಲ್ಲವೂ ಕೂಡಾ ಪಾಸಿಟಿವ್ ವ್ಯವಹಾರ ನಡೆಸುತ್ತಿದೆ. ನಿಫ್ಟಿ ಮೆಟಲ್, ನಿಫ್ಟಿ ಐಟಿ, ನಿಫ್ಟಿ ಕನ್ಸ್ಯೂಮರ್ ಡ್ಯೂರೆಬಲ್ಸ್, ನಿಫ್ಟಿ ಆಯಿಲ್ & ಗ್ಯಾಸ್ ಕ್ರಮವಾಗಿ ಶೇಕಡ 2.13, ಶೇಕಡ 1.11, ಶೇಕಡ 1.16, ಶೇಕಡ 1.49ರಷ್ಟು ಏರಿಕೆ ಕಂಡಿದೆ.

ಒಎನ್‌ಜಿಸಿ ಟಾಪ್ ಗೇನರ್
ಇನ್ನು ಷೇರು ಮಾರುಕಟ್ಟೆಯಲ್ಲಿ ಒಎನ್‌ಜಿಸಿ ಟಾಪ್ ನಿಫ್ಟಿ ಗೇನರ್ ಆಗಿದೆ. ಒಎನ್‌ಜಿಸಿ ಸ್ಟಾಕ್‌ಗಳು ಶೇಕಡ 2.38ರಷ್ಟು ಏರಿಕೆಯಾಗಿ 137.60 ರೂಪಾಯಿಗೆ ತಲುಪಿದೆ. ಹಿಂದಾಲ್ಕೋ, ಟಾಟಾ ಮೋಟರ್ಸ್, ಈಚರ್ ಮೋಟರ್ಸ್, ಡಾ. ರೆಡ್ಡೀಸ್ ಕೂಡಾ ಲಾಭವನ್ನು ಕಂಡಿದೆ.
ಬಿಎಸ್‌ಇಯಲ್ಲಿ 1,801 ಷೇರುಗಳು ಲಾಭವನ್ನು ಕಂಡಿದ್ದರೆ, 535 ಷೇರುಗಳು ನಷ್ಟವನ್ನು ಕಂಡಿದೆ. 30-ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ ಡಾ. ರೆಡ್ಡೀಸ್, ಟೈಟಾನ್, ಎನ್‌ಟಿಪಿಸಿ, ಇನ್ಫೋಸಿಸ್, ಬಜಾಜ್ ಫಿನ್‌ಸರ್ವ್, ಇಂಡಸ್‌ಇಂಡ್ ಬ್ಯಾಂಕ್, ಟಾಟಾ ಸ್ಟೀಲ್ಸ್, ಎಂ&ಎಂ, ಎಲ್&ಟಿ, ಎಚ್‌ಸಿಎಲ್ ಟೆಕ್, ಎಸ್‌ಬಿಐ, ಪವರ್‌ಗ್ರಿಡ್ ಅಧಿಕ ಲಾಭವನ್ನು ಗಳಿಸಿದೆ.
ಈ ನಡುವೆ ಹಿಂದೂಸ್ತಾನ್ ಯೂನಿಲಿವರ್ ನಷ್ಟದೊಂದಿಗೆ ವ್ಯವಹಾರ ಆರಂಭ ಮಾಡಿದೆ. ಸೋಮವಾರ ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ 237 ಅಂಕ ಅಥವಾ ಶೇಕಡ 0.46ರಷ್ಟು ಏರಿಕೆಯಾಗಿ 51,598 ಕ್ಕೆ ತಲುಪಿದರೆ, ನಿಫ್ಟಿ 57 ಅಂಕ ಅಥವಾ ಶೇಕಡ 0.37ರಷ್ಟು ಹೆಚ್ಚಾಗಿ 15,350ಕ್ಕೆ ವಹಿವಾಟು ಕೊನೆ ಮಾಡಿದೆ.
More From GoodReturns

Hubballi Vijayapura: ಉತ್ತರ ಕರ್ನಾಟಕಕ್ಕೆ ಸಂಚಾರ ಕ್ರಾಂತಿ...ಹುಬ್ಬಳ್ಳಿ–ವಿಜಯಪುರ NH52 ದ್ವಿಪಥ ರಸ್ತೆ ಅಭಿವೃದ್ಧಿ ಆರಂಭ!

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications