ಷೇರು ಮಾರುಕಟ್ಟೆಯು ಸೋಮವಾರ ಆರಂಭಿಕ ವಹಿವಾಟಿನಲ್ಲಿ ಏರಿಕೆಯನ್ನು ದಾಖಲಿಸಿದೆ. ಆದರೆ ಹೆಚ್ಚಿನ ಏರಿಕೆಯನ್ನು ಕಂಡಿಲ್ಲ. ಷೇರು ಪೇಟೆಯಲ್ಲಿ 1366 ಷೇರುಗಳು ಏರಿಕೆಯನ್ನು ಕಂಡಿದ್ದರೆ, 737 ಷೇರುಗಳು ಕುಸಿತವನ್ನು ಕಂಡಿದೆ.
30 ಷೇರುಗಳು ಬಿಎಸ್‌ಇ 46.94 ಅಂಕ ಅಥವಾ ಶೇಕಡ 0.08ರಷ್ಟು 58434.87ಕ್ಕೆ ತಲುಪಿದೆ. ನಿಫ್ಟಿ 14.90 ಅಂಕ ಅಥವಾ ಶೇಕಡ 0.09ರಷ್ಟು ಹೆಚ್ಚಳವಾಗಿ 17412.40ಕ್ಕೆ ತಲುಪಿದೆ. ನಿಫ್ಟಿ 50 ಸ್ಟಾಕ್‌ಗಳಲ್ಲಿ 30 ಏರಿಕೆಯನ್ನು ದಾಖಲಿಸಿದ್ದರೆ, ಇನ್ನುಳಿದ ಸ್ಟಾಕ್‌ಗಳು ಕುಸಿದಿದೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕಳೆದ ಶುಕ್ರವಾರ ರೆಪೋ ದರವನ್ನು ಏರಿಕೆ ಮಾಡಿದೆ. 2019ರಲ್ಲಿ ಕೋವಿಡ್ ಪೂರ್ವ ಸಂದರ್ಭದಲ್ಲಿ ರೆಪೋ ದರ ಎಷ್ಟಿತ್ತು ಅಷ್ಟಕ್ಕೆ ಏರಿಕೆ ಮಾಡಲಾಗಿದೆ., ಆರ್‌ಬಿಐ ರೆಪೋ ದರವನ್ನು 50 ಮೂಲಾಂಕ ಏರಿಕೆ ಮಾಡಲಾಗಿದ್ದು ದರ 5.4ಕ್ಕೆ ತಲುಪಿದೆ. ಈ ಸಂದರ್ಭದಲ್ಲಿ ಷೇರು ಮಾರುಕಟ್ಟೆ ಏರಿಕೆಯಾಗಿದ್ದು, ಸೋಮವಾರವು ಲಾಭವನ್ನು ವಿಸ್ತರಿಸಿದೆ.

ಯಾವೆಲ್ಲಾ ಸ್ಟಾಕ್‌ಗಳು ಏರಿಕೆ?
ಆರಂಭಿಕ ವಹಿವಾಟಿನಲ್ಲಿ ಎಂ&ಎಂ, ಪವರ್ ಗ್ರಿಡ್, ಡಾ ರೆಡ್ಡೀಸ್, ಟೈಟಾನ್, ಭಾರ್ತಿ ಏರ್‌ಟೆಲ್, ಮಾರುತಿ, ರಿಲಯನ್ಸ್, ಎಲ್‌ಟಿ, ಆಕ್ಸಿಸ್ ಬ್ಯಾಂಕ್, ಬಜಾಜ್ ಫೈನಾನ್ಸ್, ಇಂಡಸ್ ಇಂಡ್ ಬ್ಯಾಂಕ್, ವಿಪ್ರೋ ಷೇರುಗಳು ಏರಿಕೆಯನ್ನು ಕಂಡಿದೆ. ಇನ್ನು ಎಂ&ಎಂ ಟಾಪ್ ಗೇನರ್ ಆಗಿದೆ. ಎಂ&ಎಂ ಷೇರು ಶೇಕಡ 2.27ರಷ್ಟು ಏರಿಕೆಯಾಗಿ ರೂಪಾಯಿ 1,263.90ಕ್ಕೆ ತಲುಪಿದೆ.
ಯಾವ ಷೇರು ಇಳಿಕೆ?
ಹಿಂದೂಸ್ತಾನ್ ಯೂನಿಲಿವರ್, ಟಾಟಾ ಸ್ಟೀಲ್ಸ್, ಸನ್ ಫಾರ್ಮಾ, ಐಟಿಸಿ, ಎಚ್‌ಡಿಎಫ್‌ಸಿ, ನೆಸ್ಲೆ ಇಂಡಿಯಾ, ಹೆಚ್‌ಸಿಎಲ್ ಟೆಕ್, ಟಿಸಿಎಸ್, ಎನ್‌ಟಿಪಿಸಿ, ಬಜಾಜ್ ಫಿನ್‌ಸರ್ವ್, ಏಷ್ಯನ್ ಪೇಂಟ್ಸ್, ಇನ್ಫೋಸಿಸಿ, ಟೆಕ್ ಎಂ, ಐಸಿಐಸಿಐ ಬ್ಯಾಂಕ್, ಅಲ್ಟ್ರಾಟೆಕ್ ಸಿಮೆಂಟ್, ಕೋಟಕ್ ಮಹೀಂದ್ರಾ, ಎಸ್‌ಬಿಐ ಇನ್ಶೂರೆನ್ಸ್ ಸ್ಟಾಕ್‌ಗಳು ಕುಸಿತವನ್ನು ಕಂಡಿದೆ. ಬಿಪಿಸಿಎಲ್ ಸ್ಟಾಕ್ ಟಾಪ್ ಲೂಸರ್ ಆಗಿದೆ. ಸ್ಟಾಕ್ ಶೇಕಡ 3.86ರಷ್ಟು ಕುಸಿತ ಕಂಡು ರೂಪಾಯಿ 323.40ಕ್ಕೆ ತಲುಪಿದೆ.


Click it and Unblock the Notifications