ಷೇರು ಮಾರುಕಟ್ಟೆಯು ಗುರುವಾರ ವಹಿವಾಟಿನ ಅಂತ್ಯದಲ್ಲಿ ಕಂಡಿದೆ. ಆದರೆ ಶುಕ್ರವಾರ ವಹಿವಾಟಿನ ಆರಂಭದಲ್ಲಿ ಷೇರು ಮಾರುಕಟ್ಟೆ ಚೇತರಿಕೆ ಕಂಡಿದೆ. ಆಗಸ್ಟ್ 26ರಂದ ನಿಫ್ಟಿ 17600ಕ್ಕೆ ಹೆಚ್ಚಳವಾಗಿದೆ.
ಶುಕ್ರವಾರ ಆರಂಭಿಕ ವಹಿವಾಟಿನಲ್ಲಿ 30 ಷೇರುಗಳ ಸೆನ್ಸೆಕ್ಸ್ 30 ಷೇರುಗಳ ಬಿಎಸ್‌ಇ ಸೂಚ್ಯಂಕ 445.29 ಅಂಕ ಅಥವಾ ಶೇಕಡ 0.76ರಷ್ಟು ಏರಿದ್ದು 59220.01ಕ್ಕೆ ತಲುಪಿದೆ. ನಿಫ್ಟಿ 130.30 ಅಂಕ ಅಥವಾ ಶೇಕಡ 0.74ರಷ್ಟು ಏರಿಕೆ ಕಂಡು 17652.80ಕ್ಕೆ ವಹಿವಾಟು ಆರಂಭ ಮಾಡಿದೆ. 1744 ಷೇರುಗಳು ಏರಿಕೆಯನ್ನು ಕಂಡಿದ್ದರೆ, 338 ಷೇರುಗಳು ಕುಸಿತವಾಗಿದೆ. 74 ಷೇರುಗಳು ಸ್ಥಿರವಾಗಿದೆ.
ಗುರುವಾರ ವಹಿವಾಟಿನ ಕೊನೆಯಲ್ಲಿ 30 ಷೇರುಗಳ ಬಿಎಸ್‌ಇ ಸೂಚ್ಯಂಕ 310.71 ಅಂಕ ಅಥವಾ ಶೇಕಡ 0.53ರಷ್ಟು ಕುಸಿತ ಕಂಡು 58,774.72ಕ್ಕೆ ತಲುಪಿತ್ತು. ನಿಫ್ಟಿ 82.50 ಅಂಕ ಅಥವಾ ಶೇಕಡ 0.47ರಷ್ಟು ಇಳಿಕೆಯಾಗಿ 17,522.50ಕ್ಕೆ ವಹಿವಾಟು ಅಂತ್ಯ ಮಾಡಿತ್ತು. 1865 ಷೇರುಗಳು ಏರಿಕೆಯನ್ನು ಕಂಡಿದ್ದರೆ, 1462 ಷೇರುಗಳು ಕುಸಿತವಾಗಿದೆ. 132 ಷೇರುಗಳು ಸ್ಥಿರವಾಗಿತ್ತು.

ಇಂದಿನ ಟಾಪ್ ಸ್ಟಾಕ್
ಟೈಟಾನ್ ಕಂಪನಿ ಇಂದಿನ ಟಾಪ್ ಸ್ಟಾಕ್ ಆಗಿದೆ. ಟೈಟಾನ್ ಕಂಪನಿ ಷೇರು ಶೇಕಡ 2.97ರಷ್ಟು ಹೆಚ್ಚಳವಾಗಿ ರೂಪಾಯಿ 2,539.60 ಕ್ಕೆ ತಲುಪಿದೆ. ಇನ್ನು ಈಚರ್ ಮೋಟರ್ಸ್ ಸ್ಟಾಕ್ ಭಾರೀ ನಷ್ಟ ಕಂಡ ಸ್ಟಾಕ್ ಆಗಿದೆ. ಈಚರ್ ಮೋಟರ್ಸ್ ಷೇರು ಶೇಕಡ 2.56ರಷ್ಟು ಕುಸಿದು ರೂಪಾಯಿ 3,392.25ಕ್ಕೆ ತಲುಪಿದೆ.
ಇನ್ನು ನಿಫ್ಟಿ ಮೆಟಲ್ ಶೇಕಡ 2.23ರಷ್ಟು ಏರಿಕೆಯಾಗಿ ರೂಪಾಯಿ 5929.45ಕ್ಕೆ ತಲುಪಿದೆ. ಇನ್ನು ನಿಫ್ಟಿ ಎಫ್‌ಎಂಸಿಜಿ ಕೂಡಾ ಏರಿಕೆಯನ್ನು ಕಂಡಿದೆ. ಆದರೆ ಸೆಕ್ಟರ್‌ಗಳಲ್ಲಿ ತೀರಾ ಕೆಳಮಟ್ಟದಲ್ಲಿ ಇರುವ ಸೆಕ್ಟರ್ ಇದಾಗಿದೆ. ನಿಫ್ಟಿ ಎಫ್‌ಎಂಸಿಜಿ ಶೇಕಡ 0.09ರಷ್ಟು ಹೆಚ್ಚಳವಾಗಿ ರೂಪಾಯಿ 42867.00ಕ್ಕೆ ತಲುಪಿದೆ.
ಯಾವೆಲ್ಲ ಸ್ಟಾಕ್‌ಗಳು ಏರಿಕೆ?
ಟಾಟಾ ಸ್ಟೀಲ್ಸ್, ಎಂ&ಎಂ, ಟೆಕ್ ಎಂ, ಟೈಟಾನ್, ಇನ್ಫೋಸಿಸ್, ಅಲ್ಟ್ರಾಟೆಕ್ ಸಿಮೆಂಟ್, ಬಜಾಜ್ ಫೈನಾನ್ಸ್, ಬಜಾಜ್ ಫೀನ್‌ಸರ್ವ್, ವಿಪ್ರೋ, ಎಚ್‌ಡಿಎಫ್‌ಸಿ ಬ್ಯಾಂಕ್, ಕೋಟಕ್ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್, ಎನ್‌ಟಿಪಿಸಿ, ಆಕ್ಸಿಸ್ ಬ್ಯಾಂಕ್, ಎಸ್‌ಬಿಐ ಇನ್ಶೂರೆನ್ಸ್, ಎಲ್‌ಟಿ, ಮಾರುತಿ, ಪವರ್‌ಗ್ರಿಡ್, ಟಿಸಿಎಸ್, ಎಚ್‌ಡಿಎಲ್ ಟೆಕ್, ಎಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್, ಐಟಿಸಿ, ಸನ್ ಫಾರ್ಮಾ, ಇಂಡಸ್‌ಇಂಡ್ ಬ್ಯಾಂಕ್, ರಿಲಯನ್ಸ್, ಡಾ ರೆಡ್ಡೀಸ್ ಸ್ಟಾಕ್‌ಗಳು ಏರಿಕೆಯಾಗಿದೆ. ಇನ್ನು ಏಷ್ಯನ್ ಪೇಂಟ್ಸ್, ನೆಸ್ಲೆ ಇಂಡಿಯಾ, ಭಾರ್ತಿ ಏರ್‌ಟೆಲ್ ಸ್ಟಾಕ್ ಇಳಿಕೆಯಾಗಿದೆ.


Click it and Unblock the Notifications