For Quick Alerts
ALLOW NOTIFICATIONS  
For Daily Alerts

Opening Bell:ಜಾಗತಿಕ ಮಾರುಕಟ್ಟೆ ಲಾಭ: ನಿಫ್ಟಿ, ಸೆನ್ಸೆಕ್ಸ್ ಏರಿಕೆ

|

ರಾತ್ರೋರಾತ್ರಿ ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಏಷ್ಯನ್ ಷೇರುಗಳು ಲಾಭವನ್ನು ಕಂಡಿದೆ. ಈ ಬೆನ್ನಲ್ಲೇ ಮೇ 27ರ ಆರಂಭಿಕ ವಹಿವಾಟಿನಲ್ಲಿ ದೇಶೀಯ ಷೇರುಗಳು ಲಾಭದೊಂದಿಗೆ ಷೇರು ಪೇಟೆಗೆ ಇಳಿದಿದೆ.

ಆರಂಭಿಕ ವಹಿವಾಟಿನಲ್ಲಿ 30-ಷೇರು ಬಿಎಸ್‌ಇ ಸೆನ್ಸೆಕ್ಸ್ 457 ಪಾಯಿಂಟ್‌ಗಳು ಅಥವಾ ಶೇಕಡಾ 0.84 ರಷ್ಟು ಜಿಗಿದು 54,710 ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 140 ಪಾಯಿಂಟ್‌ಗಳು ಅಥವಾ 0.86 ರಷ್ಟು ಏರಿಕೆಯಾಗಿ 16,310 ಕ್ಕೆ ವಹಿವಾಟು ಆರಂಭಿಸಿದೆ.

 ಮೂರು ದಿನದ ಕುಸಿತಕ್ಕೆ ಬ್ರೇಕ್: ಸೆನ್ಸೆಕ್ಸ್, ನಿಫ್ಟಿ ಜಿಗಿತ ಮೂರು ದಿನದ ಕುಸಿತಕ್ಕೆ ಬ್ರೇಕ್: ಸೆನ್ಸೆಕ್ಸ್, ನಿಫ್ಟಿ ಜಿಗಿತ

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 1.03 ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 1.15 ರಷ್ಟು ಏರಿಕೆಯಾಗಿದೆ. ನಿಫ್ಟಿ ಐಟಿ ಮತ್ತು ನಿಫ್ಟಿ ಆಟೋ ಕ್ರಮವಾಗಿ ಶೇಕಡಾ 1.99 ಮತ್ತು ಶೇಕಡಾ 0.97 ರಷ್ಟು ಏರಿಕೆ ಕಂಡಿದೆ.

Opening Bell:ಜಾಗತಿಕ ಮಾರುಕಟ್ಟೆ ಲಾಭ: ನಿಫ್ಟಿ, ಸೆನ್ಸೆಕ್ಸ್ ಏರಿಕೆ

ಯಾವುದು ಟಾಪ್, ಯಾವುದು ಡೌನ್?

ಟೆಕ್ ಮಹೀಂದ್ರಾ ಟಾಪ್ ಗೇನರ್ ಆಗಿದೆ. ಟೆಕ್ ಮಹೀಂದ್ರಾ ಷೇರುಗಳು ಶೇಕಡಾ 3 ರಷ್ಟು ಏರಿಕೆಯಾಗಿ ರೂಪಾಯಿ 1,111 ಕ್ಕೆ ತಲುಪಿದೆ. ಉಳಿದಂತೆ ಇನ್ಫೋಸಿಸ್, ಎಚ್‌ಸಿಎಲ್ ಟೆಕ್, ವಿಪ್ರೋ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಕೂಡ ಲಾಭ ಗಳಿಸಿದೆ.

30 ಷೇರುಗಳ ಬಿಎಸ್‌ಇ ಸೂಚ್ಯಂಕದಲ್ಲಿ, ಟೆಕ್ ಮಹೀಂದ್ರಾ, ಇನ್ಫೋಸಿಸ್, ಎಚ್‌ಸಿಎಲ್ ಟೆಕ್, ವಿಪ್ರೋ, ಇಂಡಸ್‌ಇಂಡ್ ಬ್ಯಾಂಕ್, ಟಿಸಿಎಸ್, ಎಚ್‌ಡಿಎಫ್‌ಸಿ, ಬಜಾಜ್ ಫಿನ್‌ಸರ್ವ್, ಬಜಾಜ್ ಫೈನಾನ್ಸ್, ಎಲ್ & ಟಿ, ಅಲ್ಟ್ರಾಟೆಕ್ ಸಿಮೆಂಟ್ ಮತ್ತು ಆಕ್ಸಿಸ್ ಬ್ಯಾಂಕ್ ಕೂಡಾ ಹೆಚ್ಚು ಲಾಭವನ್ನು ಪಡೆದಿದೆ.

ಏಷ್ಯನ್ ಪೇಂಟ್ಸ್, ಎನ್‌ಟಿಪಿಸಿ, ಪವರ್‌ಗ್ರಿಡ್, ನೆಸ್ಲೆ ಇಂಡಿಯಾ, ಡಾ ರೆಡ್ಡೀಸ್ ಮತ್ತು ಐಟಿಸಿ ನಷ್ಟದೊಂದಿಗೆ ವಹಿವಾಟಿಗೆ ಇಳಿದಿದೆ. ಇನ್ನು ಗುರುವಾರದಂದು ಸೆನ್ಸೆಕ್ಸ್ 503 ಪಾಯಿಂಟ್ ಅಥವಾ ಶೇಕಡಾ 0.94 ರಷ್ಟು ಏರಿಕೆಯಾಗಿ 54,253 ಕ್ಕೆ ತಲುಪಿದ್ದರೆ, ನಿಫ್ಟಿ 144 ಪಾಯಿಂಟ್ ಅಥವಾ 0.90 ರಷ್ಟು ಏರಿಕೆ ಕಂಡು 16,170 ಕ್ಕೆ ಸ್ಥಿರವಾಗಿದೆ.

ನಿಫ್ಟಿ ಮಿಡ್‌ಕ್ಯಾಪ್ 100 ಶೇಕಡಾ 1.35 ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 0.77 ರಷ್ಟು ಏರಿಕೆ ಕಂಡಿದೆ. ನಿಫ್ಟಿ ಬ್ಯಾಂಕ್ ಮತ್ತು ನಿಫ್ಟಿ ಮೆಟಲ್ ಕ್ರಮವಾಗಿ ಶೇಕಡಾ 2.20 ಮತ್ತು 2.67 ರಷ್ಟು ಏರಿಕೆ ಕಂಡಿದೆ.

English summary

Opening Bell: Sensex Rises Over 450 Points, Nifty Trades Above 16,300

Sensex Rises Over 450 Points, Nifty Trades Above 16,300.
Story first published: Friday, May 27, 2022, 10:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X