ಗುರುವಾರ ಷೇರು ಪೇಟೆಯು ಶುಭಾರಂಭವನ್ನು ಕಂಡಿದೆ. ಮುಖ್ಯವಾಗಿ ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್, ಟೈಟಾನ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ಏಷ್ಯನ್ ಪೇಂಟ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಮಹೀಂದ್ರಾ ಲಾಭವನ್ನು ಕಂಡಿದ್ದು, ಇದು ಷೇರು ಪೇಟೆಗೆ ಬೆಂಬಲ ನೀಡಿದೆ.
ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 498 ಪಾಯಿಂಟ್‌ಗಳಷ್ಟು ಏರಿ, 54,183ಕ್ಕೆ ತಲುಪಿದರೆ, ನಿಫ್ಟಿ 16,000 ಗಡಿಯನ್ನು ದಾಟಿ ವ್ಯವಹರಿಸುತ್ತಿದೆ. ಏಷ್ಯಾದ ಬಹುತೇಕ ಷೇರುಗಳು ಏರಿಕೆ ಕಂಡಿದೆ. ಬೆಳಗ್ಗೆ 9:33 ರ ಹೊತ್ತಿಗೆ, ಸೆನ್ಸೆಕ್ಸ್ 320 ಅಂಕ ಏರಿಕೆಯೊಂದಿಗೆ 54,071 ನಲ್ಲಿ ಮತ್ತು ನಿಫ್ಟಿ 50 ಸೂಚ್ಯಂಕ 90 ಅಂಕ ಏರಿ 16,080 ಕ್ಕೆ ತಲುಪಿದೆ.
ಇನ್ನು ಎನ್‌ಎಸ್‌ಇಯಲ್ಲಿನ 15 ಸೆಕ್ಟರ್ ಗೇಜ್‌ಗಳು ಕೂಡಾ ಲಾಭವನ್ನು ಕಂಡಿದೆ. ನಿಫ್ಟಿ ಆಟೋ, ಪಿಎಸ್‌ಯು ಬ್ಯಾಂಕ್, ರಿಯಾಲ್ಟಿ, ಬ್ಯಾಂಕ್, ಖಾಸಗಿ ಬ್ಯಾಂಕ್, ತೈಲ ಮತ್ತು ಅನಿಲ, ಲೋಹ ಮತ್ತು ಐಟಿ ಸೂಚ್ಯಂಕಗಳು ಶೇಕಡ ಒಂದರಷ್ಟು ಏರಿದೆ. ನಿಫ್ಟಿ ಮಿಡ್‌ಕ್ಯಾಪ್ 100 ಸೂಚ್ಯಂಕ ಶೇಕಡಾ 0.93 ಮತ್ತು ನಿಫ್ಟಿ ಸ್ಮಾಲ್‌ಕ್ಯಾಪ್ 100 ಸೂಚ್ಯಂಕ ಶೇಕಡಾ 1.2 ರಷ್ಟು ಹೆಚ್ಚಾಗಿದೆ.

ಟೈಟಾನ್ ಟಾಪ್ ನಿಫ್ಟಿ ಗೇನರ್
ಆರಂಭಿಕ ವಹಿವಾಟಿನಲ್ಲಿ ನಿಫ್ಟಿಯಲ್ಲಿ ಟೈಟಾನ್ ಟಾಪ್ ಗೇನರ್ ಆಗಿದೆ. ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಅದರ ಮಾರಾಟವು ವರ್ಷದಿಂದ ವರ್ಷಕ್ಕೆ ಸುಮಾರು ಮೂರು ಪಟ್ಟು ಹೆಚ್ಚಾಗಿದೆ ಎಂದು ಕಂಪನಿಯು ಬುಧವಾರ ಹೇಳಿದೆ. ಇದಾದ ಬಳಿಕ ಸ್ಟಾಕ್ ಗುರುವಾರದ ಆರಂಭಿಕ ವಹಿವಾಟಿನಲ್ಲಿ ಶೇಕಡಾ 5.5 ರಷ್ಟು ಜಿಗಿದು 2,125 ರೂಪಾಯಿಗೆ ತಲುಪಿದೆ.
ಪವರ್ ಗ್ರಿಡ್, ಏಷ್ಯನ್ ಪೇಂಟ್ಸ್, ವಿಪ್ರೋ, ಒಎನ್‌ಜಿಸಿ, ಸನ್ ಫಾರ್ಮಾ, ಮಹೀಂದ್ರಾ ಆಂಡ್ ಮಹೀಂದ್ರ, ಎನ್‌ಟಿಪಿಸಿ, ಭಾರತ್ ಪೆಟ್ರೋಲಿಯಂ, ಐಸಿಐಸಿಐ ಬ್ಯಾಂಕ್, ಕೊಟಕ್ ಮಹೀಂದ್ರಾ ಬ್ಯಾಂಕ್, ಟಿಸಿಎಸ್ ಮತ್ತು ಇನ್ಫೋಸಿಸ್ ಷೇರುಗಳು ಕೂಡಾ ಏರಿಕೆ ಕಂಡಿದೆ.
ಈ ನಡುವೆ ರಿಲಯನ್ಸ್ ಇಂಡಸ್ಟ್ರೀಸ್, ಬಜಾಜ್ ಫಿನ್‌ಸರ್ವ್, ಬ್ರಿಟಾನಿಯಾ ಇಂಡಸ್ಟ್ರೀಸ್, ಸಿಪ್ಲಾ, ಐಟಿಸಿ, ಎಸ್‌ಬಿಐ ಲೈಫ್ ಮತ್ತು ಕೋಲ್ ಇಂಡಿಯಾ ಷೇರುಗಳು ನಷ್ಟವನ್ನು ಕಂಡಿದೆ. 2.049 ಷೇರುಗಳು ಏರಿಕೆಯಾದರೆ 583 ಷೇರುಗಳು ಕುಸಿದಿದೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ



Click it and Unblock the Notifications