ಷೇರುಪೇಟೆ ಚೇತರಿಕೆ: ಯಾವೆಲ್ಲಾ ಷೇರುಗಳು ಏರಿಕೆ?

ಬುಧವಾರ ವಹಿವಾಟಿನ ಅಂತ್ಯದಲ್ಲಿ ಸೆನ್ಸೆಕ್ಸ್ ಕುಸಿತ, ನಿಫ್ಟಿ ಏರಿಕೆ ಕಂಡಿತ್ತು. ಆದರೆ ಗುರುವಾರ ವಹಿವಾಟಿನ ಆರಂಭದಲ್ಲಿ ಷೇರುಪೇಟೆಯು ಜಿಗಿತವಾಗಿದೆ. ಯುಎಸ್‌ನ ಹಣದುಬ್ಬರ ಡೇಟಾವು ಈ ಹಿಂದಿನ ಡೇಟಾದಷ್ಟು ಆತಂಕಕಾರಿಯಾಗಿಲ್ಲ. ಇದು ಭಾರತೀಯ ಷೇರು ಮಾರುಕಟ್ಟೆಯ ಮೇಲೆ ಪಾಸಿಟಿವ್ ಪರಿಣಾಮವನ್ನು ಉಂಟು ಮಾಡಿದೆ. ಗುರುವಾರ ಸೆನ್ಸೆಕ್ಸ್, ನಿಫ್ಟಿ ಏರಿಕೆ ಕಂಡಿದೆ.

ಗುರುವಾರ ವಹಿವಾಟಿನ ಆರಂಭದಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 585.21 ಅಂಕ ಅಥವಾ ಶೇಕಡ 0.99ರಷ್ಟು ಏರಿಕೆಯಾಗಿ 59402.50ಕ್ಕೆ ತಲುಪಿದ್ದರೆ, ಎನ್‌ಎಸ್‌ಇ ನಿಫ್ಟಿ 161.40 ಅಂಕ ಅಥವಾ ಶೇಕಡ 0.92ರಷ್ಟು ಏರಿ 17696.20ಕ್ಕೆ ವಹಿವಾಟು ಆರಂಭ ಮಾಡಿದೆ.

ಬುಧವಾರ ವಹಿವಾಟಿನ ಕೊನೆಯಲ್ಲಿ 30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 35.78 ಅಂಕ ಅಥವಾ ಶೇಕಡ 0.06ರಷ್ಟು ಕುಸಿದು 58,817.29ಕ್ಕೆ ತಲುಪಿದೆ. ಎನ್‌ಎಸ್‌ಇ ನಿಫ್ಟಿ 9.65 ಅಂಕ ಅಥವಾ ಶೇಕಡ 0.06ರಷ್ಟು ಏರಿಕೆ ಕಂಡು 17,534.75ಕ್ಕೆ ಸ್ಥಿರವಾಗಿದೆ. ಷೇರು ಪೇಟೆಯಲ್ಲಿ 1817 ಷೇರುಗಳು ಕುಸಿತವಾಗಿದ್ದರೆ, 1501 ಷೇರುಗಳು ಏರಿಕೆಯಾಗಿದೆ. 119 ಷೇರುಗಳು ಯಥಾಸ್ಥಿತಿ ಕಾಯ್ದುಕೊಂಡಿತ್ತು.

ಷೇರುಪೇಟೆ ಚೇತರಿಕೆ: ಯಾವೆಲ್ಲಾ ಷೇರುಗಳು ಏರಿಕೆ?

ಯಾವೆಲ್ಲಾ ಷೇರುಗಳು ಏರಿಕೆ?

ಗುರುವಾರ ಎಲ್ಲ ಸೆನ್ಸೆಕ್ಸ್ ಸೂಚ್ಯಂಕಗಳು ಲಾಭವನ್ನು ಕಂಡಿದೆ. ಟೆಕ್ ಮಹೀಂದ್ರಾ ಟಾಪ್ ಗೇನರ್ ಆಗಿದೆ. ಟೆಕ್ ಮಹೀಂದ್ರಾ ಷೇರು ಶೇಕಡ 2.63ರಷ್ಟು ಏರಿಕೆಯಾಗಿ ರೂಪಾಯಿ 1,083.00ಕ್ಕೆ ತಲುಪಿದೆ. ಇನ್ನು ಟಾಟಾ ಕನ್ಸ್ಯೂಮರ್ ಪ್ರೊಡಕ್ಟ್ಸ್ ಷೇರು ಭಾರೀ ಕುಸಿತವನ್ನು ಕಂಡಿದೆ. ಷೇರು ಶೇಕಡ 1.68ರಷ್ಟು ಕುಸಿದು, ರೂಪಾಯಿ 777.30ಕ್ಕೆ ತಲುಪಿದೆ.

ಈಚರ್ ಮೋಟಾರ್ಸ್, ಟೆಕ್ ಮಹೀಂದ್ರಾ, ವಿಪ್ರೀ, ಐಸಿಐಸಿಐ ಬ್ಯಾಂಕ್, ಇನ್ಫೋಸಿಸ್ ಸ್ಟಾಕ್ ನಿಫ್ಟಿಯಲ್ಲಿ ಲಾಭವನ್ನು ಪಡೆದ ಷೇರುಗಳು ಆಗಿದೆ. ಹಿಂಡಾಲ್ಕೊ ಇಂಡಸ್ಟ್ರೀಸ್, ಟಾಟಾ ಕನ್ಸ್ಯೂಮರ್ ಪ್ರೊಡಕ್ಟ್ಸ್, ದಿವೀಸ್ ಲ್ಯಾನ್, ಅಪೋಲೋ ಹಾಸ್ಪಿಟಲ್, ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಷೇರು ಕುಸಿತ ಕಂಡಿದೆ. 50 ಸ್ಟಾಕ್ಸ್‌ಗಳ ಪೈಕಿ 46 ಸ್ಟಾಕ್‌ಗಳು ಏರಿಕೆಯನ್ನು ಕಂಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+